Breaking News
Home / Breaking News / ಕೊರೋನಾ ಸೊಂಕಿ‌ನ ಲಕ್ಷಣ ಕಂಡು ಬಂದಲ್ಲಿ ತಕ್ಷಣ ಮಾಹಿತಿ ಕೊಡಿ-ಡಿಸಿ

ಕೊರೋನಾ ಸೊಂಕಿ‌ನ ಲಕ್ಷಣ ಕಂಡು ಬಂದಲ್ಲಿ ತಕ್ಷಣ ಮಾಹಿತಿ ಕೊಡಿ-ಡಿಸಿ

ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ, ಬೆಳಗುಂದಿ ಗ್ರಾಮಗಳು ಮತ್ತು ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ

ಕ್ಯಾಂಪ ಕಸಾಯಿ ಗಲ್ಲಿ ಹಾಗೂ ಕುಡಚಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಕೋವಿಡ-19 (ಕೊರೋನಾ) ಪ್ರಕರಣಗಳು ಪತ್ತೆಯಾಗಿದ್ದು, ಸದರಿ ಪ್ರದೇಶಗಳನ್ನು ನಿರ್ಭಂದಿತ ಪ್ರದೇಶಗಳೆಂದು ಈಗಾಗಲೇ ಘೋಷಿಸಲಾಗಿದೆ.

ಸದರಿ ಸ್ಥಳಗಳಲ್ಲಿ ವಾಸಿಸುತ್ತಿರುವ ಮತ್ತು ಪ್ರಕರಣಗಳೊಂದಿಗೆ ದೈನಂದಿನ ಚಟುವಟಿಕೆಗಳಲ್ಲಿ ನೇರವಾಗಿ ಸಂಪರ್ಕ ಹೊಂದಿರುವ ಸಾರ್ವಜನಿಕರು ಕೋವಿಡ-19 (ಕೊರೋನಾ) ಲಕ್ಷಣಗಳಾದ ಜ್ವರ, ಕೆಮ್ಮು, ಶೀತ ಹಾಗೂ ಉಸಿರಾಟದ ತೊಂದರೆಗಳು ಕಂಡು ಬಂದಲ್ಲಿ ಕೂಡಲೇ ಸಮೀಪದ ಆರೋಗ್ಯ ಕೇಂದ್ರಗಳಿಗೆ ಅಥವಾ ಪ್ರಸ್ತುತವಾಗಿ ಚಾಲನೆಯಲ್ಲಿರುವ ಕೋವಿಡ-19 ಸಮೀಕ್ಷಾ ತಂಡದವರಿಗೆ ಭೇಟಿ ನೀಡಿ ಸಹಾಯ ಪಡೆಯುದರೊಂದಿಗೆ ಸಹಾಯವಾಣಿ ಸಂಖ್ಯೆ 0831-242485
ಗೆ ಮಾಹಿತಿ ನೀಡಲು ಹಾಗೂ ಕೋವಿಡ-19 ನಿಯಂತ್ರಿಸುವ ಕುರಿತು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
***

Check Also

ಅಕ್ರಮ ಗೋ ಸಾಗಾಟ ; ಟ್ರಕ್ ಚಾಲಕನ ಮೇಲೆ ನೈತಿಕ ಪೊಲೀಸ್ ಗಿರಿ

ಬೆಳಗಾವಿ : ಅಕ್ರಮ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಹಿನ್ನಲೆಯಲ್ಲಿ ಲಾರಿಯನ್ನು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ …

Leave a Reply

Your email address will not be published. Required fields are marked *