ಫೇಸ್ ಬುಕ್ ಫ್ರೆಂಡ್ ಶೋಭೇಶ್ ಗೌಡ
ಬೆಳಗಾವಿ- ಬೆಳಗಾವಿಯ ಬಡ್ಡಿ ವ್ಯವಹಾರ ಮಾಡಿಕೊಂಡಿದ್ದ ಬೆಳಗಾವಿಯ ಸಂತೋಷ್ ಪದ್ಮಣ್ಣವರ ವಾರದ ಹಿಂದೆ ಸಾವಿನ ಸುದ್ದಿ ಬಂದಿತ್ತು,ಅದೊಂದು ಸಹಜ ಸಾವು ಎಂದು ಎಲ್ಲರೂ ನಂಬಿದ್ದರು,ಸಹಜವಾಗಿ ಅಂತ್ಯಕ್ರಿಯೆಯೂ ನಡೆದಿತ್ತು.ಆದ್ರೆ ವಾರದ ನಂತರ ಮಗಳು ತಾಯಿಯ ಮೇಲೆಯೇ ಅನುಮಾನ ಪಟ್ಟು ಪೋಲೀಸರಿಗೆ ದೂರು ಕೊಟ್ಟ ನಂತರ ಸಂತೋಷನ ಬದುಕಿಗೆ ಪೂರ್ಣವಿರಾಮ ಇಟ್ಟಿದ್ದು ಆತನ ಪತ್ನಿ ಉಮಾ ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ.
ಮಗಳು ದೂರು ನಿಡಿದ ಬಳಿಕ ಸಂತೋಷನ ಶವವನ್ನು ಸಮಾಧಿಯಿಂದ ಹೊರಕ್ಕೆ ತೆಗೆದು ಶವ ಪರೀಕ್ಷೆ ನಡೆಸಲಾಗಿತ್ತು ಇವತ್ತು ಸಂತೋಷನ ಸಾವು ಸಹಜ ಸಾವು ಅಲ್ಲ ಅದೊಂದು ಮರ್ಡರ್ ಎನ್ನುವದು ಖಚಿತವಾಗಿದೆ.ಯಾಕಂದ್ರೆ ಸಂತೋಷನ ಪತ್ನಿ ಉಮಾ ಹಾಗೂ ಅವಳ ಫೇಸ್ ಬುಕ್, ಬಾಯ್ ಫ್ರೆಂಡ್ ಶೋಭೇಶ್ ಗೌಡ ಮತ್ತು ಈ ಗೌಡನ ಗೆಳೆಯ ಪವನ್ ಎಂಬಾತರನ್ನು ಬೆಳಗಾವಿಯ ಮಾಳಮಾರುತಿ ಪೋಲೀಸರು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದ್ದಾರೆ.
ಸಂತೋಷ ಪದ್ಮಣ್ಣವರ ಇತ್ತೀಚಿಗೆ ಮನೆಯಲ್ಲಿ ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದ,ಈತನ ಚಿತ್ರ,ವಿಚಿತ್ರ ವರ್ತನೆಗಳಿಂದ ರೋಸಿಹೋಗಿದ್ದ ಪತ್ನಿ ಊಮಾ ಶೋಭೇಶ್ ಗೌಡ ಎಂಬಾತನ ಜೊತೆ ಸ್ನೇಹ ಬೆಳೆಸಿ ಗಂಡನ ಕೊಲೆಗೆ ಸ್ಕೆಚ್ ಹಾಕಿದ್ದಳು ಎನ್ನುವ ವಿಚಾರವನ್ನು ಪತ್ನಿ ಉಮಾ ಪೋಲೀಸರ ಎದುರು ಬಾಯಿಬಿಟ್ಟ ಕಾರಣ,ಸಂತೋಷನ ಕೊಲೆ ಮಾಡಿ ಪರಾರಿಯಾಗಿದ್ದ ಶೋಭೇಶ್ ಗೌಡ ಮತ್ತು ಆತನ ಗೆಳೆಯ ಪವನ್ ನನ್ನು ಪೋಲೀಸರು ವಶಕ್ಕೆ ಪಡೆದುಕೊಂಡು ಸಂತೋಷನ ಸಾವಿಗೆ ಕಾರಣವಾಗಿದ್ದ ಅನೇಕ ಅನುಮಾನಗಳಿಗೆ ಬ್ರೇಕ್ ಹಾಕಿದ್ದಾರೆ.
ಪತ್ನಿ ಊಮಾ ಗಂಡ ಸಂತೋಷನಿಗೆ ರಾಗಿ ಬಲಿಯಲ್ಲಿ ನಿದ್ದೆ ಗುಳಗಿ ಬೆರೆಸಿ ಕೊಟ್ಟಿದ್ದಳು,ಸಂತೋಷ ನಿದ್ರೆಗೆ ಜಾರಿದಾಗ ಪತ್ನಿ ಊಮಾ ಸಂತೋಷನ ಕತ್ತು ಹಿಸುಕಿ ಕೊಲೆ ಮಾಡುವ ಪ್ರಯತ್ನ ಮಾಡಿದ್ದಾಳೆ, ಆದ್ರೆ ಸಂತೋಷ ಉಸಿರು ನಿಲ್ಲಿಸದ ಕಾರಣ ಫೇಸ್ ಬುಕ್ ಗೆಳೆಯ ಶೋಭೇಶ್ ಗೌಡನನ್ನು ಮನೆಗೆ ಕರೆಯಿಸಿಕೊಂಡಿದ್ದಾಳೆ ಶೋಭೇಶ್ ಗೌಡ ಆತನ ಗೆಳೆಯ ಪವನ್ ನನ್ನು ಕರೆದುಕೊಂಡು ಹೋಗಿ ಸಂತೋಷನ ಕಥೆ ಮುಗಿಸಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದ್ದು ಈ ಕೊಲೆ ನಡೆದಿದ್ದು ಹೇಗೆ ಎನ್ನುವ ವಿಚಾರ ಪೋಲೀಸ್ ಇಲಾಖೆಯಿಂದ ದೃಡವಾಗುವದಷ್ಟೇ ಬಾಕಿ ಇದೆ.
ಮೃತ ಸಂತೋಷ್ ಪದ್ಮಣ್ಣವರ ಮನೆಯ ಸಿಸಿ ಟಿವಿ ದೃಶ್ಯಗಳು ಡಿಲೀಟ್ ಆಗಿದ್ದವು,ಆದ್ರೆ ಪಕ್ಕದ ಮನೆಯ ಸಿಸಿ ಟಿವ್ಹಿಯಲ್ಲಿ ಶೋಭೇಶ್ ಗೌಡ ಮತ್ತು ಪವನ್ ಸಂತೋಷನ ಮನೆಗೆ ಹೋಗಿರುವ ದೃಶ್ಯಗಳು ಸೆರೆಯಾಗಿದ್ದವು ಇದನ್ನೇ ಆಧರಿಸಿ ತನಿಖೆ ಶುರು ಮಾಡಿದ್ದ ಮಾಳಮಾರುತಿ ಪೋಲೀಸರು ಈ ಕೊಲೆ ಪ್ರಕರಣದಲ್ಲಿ ಭಾಗಿಯಾದ ಸಂತೋಷನ ಪತ್ನಿ ಉಮಾ ಅವಳ ಬಾಯ್ ಫ್ರೆಂಡ್ ಶೋಭೇಶ್ ಮತ್ತು ಪವನ್ ಒಟ್ಟು ಮೂರು ಜನರನ್ನು ಬಂಧಿಸಿದ್ದಾರೆ. ಬೆಳಗಾವಿಯ ಮಾಳಮಾರುತಿ ಠಾಣೆಯ ಪಿಐ ಕಾಲಿಮಿರ್ಚಿ ನೇತ್ರತ್ವದ ತಂಡ ಕೇವಲ 48 ಗಂಟೆಗಳ ಒಳಗೆ ಕೊಲೆ ಪ್ರಕರಣವನ್ನು ಭೇಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಮಗಳು ತಾಯಿಯ ವಿರುದ್ಧವೇ ಪೋಲೀಸರಿಗೆ ದೂರು ನೀಡಿದ ಕಾರಣ ಈ ಕೊಲೆ ಪ್ರಕರಣ ಬೆಳಕಿಗೆ ಬರಲು ಸಾಧ್ಯವಾಗಿದೆ.ಮಗಳು ಸಂಜನಾ ಮಾಡಿದ ಧೈರ್ಯ ಮೃತ ತಂದೆ ಸಾವಿಗೆ ನ್ಯಾಯ ದೊರಕಿಸಿಕೊಟ್ಟಿದ್ದು ಹಂತಕಿ ತಾಯಿಗೆ ಜೈಲಿಗೆ ಕಳುಹಿಸಿದೆ ಈ ಪ್ರಕರಣದಲ್ಲಿ ಮಗಳು ಮಾಡಿದ ಧೈರ್ಯವನ್ನು ಮೆಚ್ಚಲೇಬೇಕು.