ಬೆಳಗಾವಿ- ಸಚಿವ ಸಂಪುಟ ವಿಸ್ತರಣೆಯ ಬಳಿಕ ಮಾಜಿ ಮಂತ್ರಿ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಮೌನ ಮುರಿದಿದ್ದಾರೆ.ನಾನು ಸೀನಿಯರ್ ಹದಿಮೂರು ವರ್ಷ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ.ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸ್ಥಾನ ನನಗೆ ಸಿಗಬೇಕು ಎನ್ನುವ ಪ್ರಯತ್ನ ಮಾಡುತ್ತಿದ್ದೇನೆ.ದೇವರ ಆಶಿರ್ವಾದ ಇದ್ದರೆ ರಾಜ್ಯದ ಮುಖ್ಯಮಂತ್ರಿಯೂ ಆಗುತ್ತೇನೆ.ಎಂದು ಉಮೇಶ್ ಕತ್ತಿ ಹೇಳಿದ್ದಾರೆ.
ಹುಕ್ಕೇರಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ ಮಾಧ್ಯಮಗಳಿಗೆ ಉಮೇಶ ಕತ್ತಿ ತಮ್ಮ ಮನದಾಳದ ಇಂಗಿತವನ್ನು ಹೊರಹಾಕಿದ್ದಾರೆ. ನನ್ನ ಯೋಗ್ಯತೆಗೆ ನನಗೆ ಮಂತ್ರಿ ಸ್ಥಾನ ಸಿಗಲೇ ಬೇಕು, ಅದರ ಜತೆ ಈಗ ಯಡಿಯೂರಪ್ಪನವರು ಯಾವ ಸ್ಥಾನದಲ್ಲಿದ್ದಾರೊ ಆ ಸ್ಥಾನವೂ ಬೇಕು ಎಂದು ಉಮೇಶ್ ಕತ್ತಿ ಹೇಳಿದ್ದಾರೆ.
ಪರೋಕ್ಷವಾಗಿ ನನಗೆ ಮುಖ್ಯಮಂತ್ರಿ ಸ್ಥಾನವೂ ಸಿಗಲಿದೆ ಮತ್ತು ತಾವು ಅದರ ಆಕಾಂಕ್ಷಿ ಎಂದು ಮತ್ತೊಮ್ಮೆ ಹೇಳಿದ ಕತ್ತಿ, ಮಂತ್ರಿ ಸ್ಥಾನ ಸಿಗದೆ ಇರುವುದಕ್ಕೆ ಯಡಿಯೂರಪ್ಪ ಜತೆಯಾಗಲಿ ಯಾರ ಜೊತೆಯೂ ಮುನಿಸುಕೊಂಡಿಲ್ಲ ನಾನು ನನ್ನ ಹೆಂಡಿಯ ಜತೆಗೆ ಮುನಿಸಿಕೊಳ್ಳಲ್ಲ ಇನ್ನು ಯಡಿಯೂರಪ್ಪನವರ ಜತೆ ಮುನಿಸಿಕೊಂಡು ಸಾಧಿಸುವುದಾದರೂ ಎನಿದೆ ಎಂದ ಉಮೇಶ್ ಕತ್ತಿ ಹೇಳಿದರು
ಸೋತರೂ ಲಕ್ಷ್ಷಣ ಸವದಿಗೆ ಡಿಸಿಎಂ, ಶ್ರೀಮಂತ ಪಾಟೀಲ್ ಪಕ್ಷಕ್ಕೆ ಬಂದು ಒಂದೇ ಸಲ ಆರಿಸಿ ಬಂದರು,
ಅಂತವರನ್ನು ಪಕ್ಷದಲ್ಲಿ ಮಂತ್ರಿ ಮಾಡಲಾಗಿದೆ ನಿಮ್ಮನ್ಯಾಕೆ ಕಡೆಗಣಿಸಲಾಗುತ್ತಿದೆ ಎಂಬ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಅವರು ಅವರಿಗೆ ಅನುಭವ ಜಾಸ್ತಿ ಇದೆ ನನಗೆ ಅನುಭವ ಕಡಿಮೆ ಇದೆ ಅವರನ್ನೆ ಆ ಬಗ್ಗೆ ಕೇಳಿ ಎಂದ ಉಮೇಶ್ ಕತ್ತಿ, ಹೇಳಿದರು.
ಹತ್ತು ಜನ ಹೊಸದಾಗಿ ಆರಿಸಿ ಬಂದಿದ್ದಾರೆ ಅವರಿಗೆ ಮಂತ್ರಿ ಮಾಡುವುದರಲ್ಲಿ ತಪ್ಪೇನಿದೆ,ನಾನು ಹುಕ್ಕೇರಿ ಶಾಸಕನಾಗಿದ್ದೇನೆ,ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ,ಯಾರೇ ಮಂತ್ರಿಯಾದ್ರೂ ಸ್ವಾಗತಿಸುತ್ತೇನೆ ಎಂದು ಉಮೇಶ್ ಕತ್ತಿ ಹೇಳಿದ್ರು.