Breaking News

ಎಲ್ಲರೂ ಸೇರಿ ಊಟ ಮಾಡಿದ್ದೇವೆ, ರಾಜಕೀಯ ಮಾಡಿಲ್ಲ- ಉಮೇಶ್ ಕತ್ತಿ

ಬೆಳಗಾವಿ- ಕೊರೋನಾ ಸಂಕಷ್ಟದ ಸಮಯದಲ್ಲಿ ಎಲ್ಲ ಶಾಸಕರು ಒಂದು ಕಡೆ ಸೇರಿರಲಿಲ್ಲ, ಬೆಂಗಳೂರಿಗೆ ಉತ್ತರ ಕರ್ನಾಟಕದ ಶಾಸಕರು ಸೇರಿದಾಗ ಎಲ್ಲರೂ ಸೇರಿ ಊಟ ಮಾಡಿದ್ದೇವೆ,ಸಭೆ ಮಾಡಿಲ್ಲ,ಎಂದು ಮಾಜಿ ಸಚಿವ ಉಮೇಶ್ ಕತ್ತಿ ಸ್ಪಷ್ಡ ಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾದ್ಯಮಗಳಿಗೆ ಹೇಳಿಕೆ ನೀಡಿರುವ ಅವರು ಕೊರೋನಾ ಲಾಕ್ ಡೌನ್ ಇರುವ ಕಾರಣ ಊಟಕ್ಕೆ ತೊಂದರೆ ಆಗುತ್ತಿದೆ,ಎಲ್ಲರೂ ಸೇರಿ ಊಟ ಮಾಡೋಣ ಎಂದು ನನ್ನ ಮನೆಯಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದ ಶಾಸಕರು ಸೇರಿ ಊಟ ಮಾಡಿದ್ದೇವೆ,ಈ ಸಂಧರ್ಭದಲ್ಲಿ ಯಾವುದೇ ರೀತಿಯ ರಾಜಕೀಯ ಚರ್ಚೆ ನಡೆದಿಲ್ಲ,ಇದಕ್ಕೆ ರಾಜಕೀಯ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಮಾಜಿ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ‌.

ಕಳೆದ ಲೋಕಸಭಾ ಚುನಾವಣೆಯಲ್ಲಿ ಸಹೋದರ ರಮೇಶ್ ಕತ್ತಿಗೆ ಟಿಕೆಟ್ ತಪ್ಪಿತ್ತು ಈ ಸಂಧರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಳಗಾವಿಯಲ್ಲಿ ಸಭೆ ಮಾಡಿ ರಮೇಶ್ ಕತ್ತಿ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನೇಮಕ ಮಾಡುವ ವಾಗ್ದಾನ ಮಾಡಿದ್ದರು,ಈ ವಿಚಾರವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ರಾಜ್ಯ ಸಭೆ ಟಿಕೆಟ್ ಕೊಡುವಂತೆ ಒತ್ತಾಯ ಮಾಡಿದ್ದೇನೆ ಎಂದು ಉಮೇಶ್ ಕತ್ತಿ ತಿಳಿಸಿದರು.

ಮುಖ್ಯಮಂತ್ರಿ ಅವರನ್ನು ಭೇಟಿಯಾದ ಸಂಧರ್ಭದಲ್ಲಿ ,ಶಾಸಕರು ನನ್ನ ಮನೆಯಲ್ಲಿ ಊಟ ಮಾಡಿರುವ ವಿಚಾರವನ್ನು ಪ್ರಸ್ತಾಪ ಮಾಡಿದ್ರು,ಏನಪ್ಪ ಎಲ್ಲರಿಗೂ ಊಟ ಮಾಡಿಸಿದ್ದೀಯಾ ? ಅಂತಾ ಸಿಎಂ ಕೇಳಿದ್ರು,ಹೌದು ಊಟ ಮಾಡಿಸಿದ್ದು ನಿಜ,ನೀವೂ ನನ್ನ ಮನೆಗೆ ಊಟಕ್ಕೆ ಬನ್ನಿ ಎಂದು ಕರೆದಿದ್ದೇನೆ.ನನ್ನ ಮನೆಯಲ್ಲಿ ಶಾಸಕರು ಸೇರಿ ಊಟ ಮಾಡಿರುವ ವಿಚಾರ ಮುಖ್ಯಮಂತ್ರಿಗಳಿಗೂ ಗೊತ್ತಿದೆ ಇದಕ್ಕೆ ರಾಜಕೀಯ ಅರ್ಥ ಕಲ್ಪಿಸಬಾರದು ಎಂದು ಉಮೇಶ್ ಕತ್ತಿ ಮನವಿ ಮಾಡಿದ್ದಾರೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *