Home / Breaking News / ಜಾರಕಿಹೊಳಿ ನಿರ್ಧಾರಕ್ಕೆ ಮೈಸೂರಿನ ರಾಜಮಾತೆ ಫುಲ್ ಖುಶ್…!!!

ಜಾರಕಿಹೊಳಿ ನಿರ್ಧಾರಕ್ಕೆ ಮೈಸೂರಿನ ರಾಜಮಾತೆ ಫುಲ್ ಖುಶ್…!!!

ಮೈಸೂರು-ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಸಚಿವರಾದ *ರಮೇಶ್ ಜಾರಕಿಹೊಳಿ* ರವರು ರಾಜಮಾತೆ ಶ್ರೀಮತಿ ಪ್ರಮೋದಾ ದೇವಿ ಒಡೆಯರ್ ರವರನ್ನು ಮೈಸೂರಿನ ಅರಮನೆಯಲ್ಲಿ ಭೇಟಿ ಮಾಡಿ ಜಲಸಂಪನ್ಮೂಲ ಇಲಾಖೆಯ ಅಭಿವೃದ್ಧಿ ಯೋಜನೆಗಳಿಗೆ ಮಾರ್ಗದರ್ಶನ ಸಲಹೆ ನೀಡುವಂತೆ ಮನವಿ ಮಾಡಿ ಫಲಸಮರ್ಪಣೆ ನೀಡಿ ಆಶಿರ್ವಾದ ಪಡೆದರು.

ಇದೇ ಸಂಧರ್ಭದಲ್ಲಿ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಮಾತನಾಡಿ, ನೀರಾವರಿ, ಹೈನುಗಾರಿಕೆ, ಕೃಷಿ ಪ್ರಧಾನವಾಗಿ ಇನ್ನೂ ಕರ್ನಾಟಕವು ಸಮೃದ್ಧಿಯಿಂದ ಇದೆ ಎಂದರೆ ಮೈಸೂರು ಸಂಸ್ಥಾನದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಪರಿಕಲ್ಪನೆ ಮತ್ತು ಕೊಡುಗೆಯಿಂದ ಎಂದರು.
ಬರಡಾಗಿದ್ದ ಬಯಲು‌ಸೀಮೆಗೆ ನೀರೊದಗಿಸಲು ವಾಣಿವಿಲಾಸ ಸಾಗರ ಜಲಾಶಯ ನಿರ್ಮಿಸಿದ ಅರಸರು, ತಮ್ಮ ಸ್ವಂತ ಚಿನ್ನವನ್ನು ಮಾರಿ ಕೃಷ್ಣರಾಜಸಾಗರ ಅಣೆಕಟ್ಟು ನಿರ್ಮಾಣ ಮಾಡುವ ಮೂಲಕ ಕಾವೇರಿ ನೀರನ್ನು ಹರಿಸಿ ಕೋಟ್ಯಾಂತರ ಜನರ ಪಾಲಿನ ಕಷ್ಟದ ಕಣ್ಣೀರನ್ನು ಒರೆಸಿದರು. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನ್ ರಾಗಿದ್ದ ಭಾರತ ರತ್ನ ಸರ್.ಎಂ ವಿಶ್ವೇಶ್ವರಯ್ಯ ರವರ ಪ್ರತಿಮೆಗಳನ್ನು ಕೆ.ಆರ್. ಎಸ್ ದಕ್ಷಿಣ ದ್ವಾರದ ಮುಂಭಾಗ ನಿರ್ಮಿಸಲು *8.50ಕೋಟಿ ವೆಚ್ಚದ ಕಾಮಗಾರಿ* ನಡೆಯುತ್ತಿದ್ದು ಶೀಘ್ರವೇ ಪೂರ್ಣಗೊಳ್ಳಿಲಿದೆ ಎಂದು ಸಚಿವ ಜಾರಕಿಹೊಳಿ ತಿಳಿಸಿದರು.

ನದಿ ತೀರವನ್ನು ಕಾಪಾಡುವುದು, ನೀರಿನ ಪ್ರಮಾಣ ಸಂರಕ್ಷಣೆ, ರೈತರ ಸಮಿತಿ ರಚನೆ, ಮಾಲಿನ್ಯ ಮುಕ್ತ ಕಾಪಾಡುವಲ್ಲಿ ಮತ್ತು ಕೆರೆಗಳಿಗೆ ನೀರು ತುಂಬಿಸುವುದು ದೇಶದ ಬೆನ್ನೆಲುಬು ರೈತನ ಹಿತ ಕಾಪಾಡುವಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು.

ರಾಜರ್ಷಿ‌ ಒಡೆಯರ್ ಮತ್ತು ಸರ್ ಎಂವಿ ರವರ ಪ್ರತಿಮೆ ನಿರ್ಮಾಣ ಮಾಡುತ್ತಿರುವ ಜಲಸಂಪನ್ಮೂಲ ಇಲಾಖೆಯ ಕಾರ್ಯವನ್ನು ಶ್ಲಾಘಿಸಿದ *ರಾಜಮಾತೆ ಪ್ರಮೋದಾದೇವಿ ಒಡೆಯರ್* ಅವರು ಸರ್ಕಾರದ ನೀರಾವರಿ ಯೋಜನೆಗಳು ಶೀಘ್ರವಾಗಿ ಮುಕ್ತಾಯಗೊಂಡು ಜನರಿಗೆ ಅನುಕೂಲವಾಗುವ ಸಂಕಲ್ಪದಿಂದ ಕಾರ್ಯೋನ್ಮುಖರಾಗುವಂತೆ ಜಲಸಂಪನ್ಮೂಲ ಸಚಿವರಿಗೆ ತಿಳಿಸಿದರು.

ವಿಶೇಷಾಧಿಕಾರಿ ರುದ್ರಯ್ಯ,
ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಶಂಕರ್ ಎಸ್ ಎನ್, ಕಾವೇರಿ ನೀರಾವರಿ ನಿಗಮದ ಎಂಡಿ ಜಯಪ್ರಕಾಶ್, ಅರಮನೆ‌ ಮಂಡಳಿಯ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

Check Also

ಮಳೆ ಜೋರ್…ಬೆಳಗಾವಿಗೆ ಬಂದ್ರು ಕಾರಜೋಳ್…!!!

ಬೆಳಗಾವಿ- ಪಕ್ಕದ ಮಹಾರಾಷ್ಟ್ರದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ಬೆಳಗಾವಿ ಜಿಲ್ಲೆಯಲ್ಲಿ …

Leave a Reply

Your email address will not be published. Required fields are marked *