Home / Breaking News / ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಅವರನ್ನು ಭೇಟಿಯಾದ ಸಾಹುಕಾರ್…..!!!

ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಅವರನ್ನು ಭೇಟಿಯಾದ ಸಾಹುಕಾರ್…..!!!

ಬಿಡುವಿಲ್ಲದ ಓಡಾಟದ ಮಧ್ಯೆಯೂ,
ಕನ್ನಡದ‌ ಅಗ್ರಗಣ್ಯ ಲೇಖಕರೂ, ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಸಾಹಿತಿ, ಕಾದಂಬರಿಕಾರರಾದ ಡಾ. ಎಸ್ ಎಲ್‌ ಭೈರಪ್ಪನವರನ್ನು ಕುವೆಂಪು ನಗರದ ನಿವಾಸದಲ್ಲಿ ಮಾನ್ಯ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಅವರೊಂದಿಗೆ ಭೇಟಿ‌ ಮಾಡಿದೆನು. ಅವರ ಜ್ಞಾನ ಭಂಡಾರ ಅಗಾಧ. ಇಂತಹಾ ಇಳಿ ವಯಸ್ಸಿನಲ್ಲಿಯೂ, ಅಖಂಡ ಭಾರತದ ಚರಿತ್ರೆಯ ಬಗ್ಗೆ, ಟಿಪ್ಪು ಆಕ್ರಮಣ, ಯದುವಂಶ ದೊರೆಗಳಿಗಿದ್ದ ಸಾಮಾಜಿಕ ಕಳಕಳಿ ಇತ್ಯಾದಿ ಹಲವು ಜ್ವಲಂತ ವಿಷಯಗಳ ಬಗ್ಗೆಯೂ ಅವರು ಚರ್ಚಿಸಿದ್ದು ವಿಶೇಷ. ನಾನೂ ಸಹಾ ಭಿತ್ತಿ, ಮತದಾನ, ಆವರಣ, ಗೃಹಭಂಗ ಕಾದಂಬರಿಗಳ ಸೂಕ್ಷ್ಮತೆಯ ಕುರಿತು ಭೈರಪ್ಪನವರೊಂದಿಗೆ ಮಾತನಾಡಿದೆನು. ಅದಕ್ಕೇ ಹೇಳುವುದು. – ಕನ್ನಡ ಸಾರಸ್ವತ ಲೋಕದಲ್ಲಿ ಭೈರಪ್ಪನವರಿಗೆ ಭೈರಪ್ಪನವರೇ ಸಾಟಿ.

Check Also

ಮಳೆ ಜೋರ್…ಬೆಳಗಾವಿಗೆ ಬಂದ್ರು ಕಾರಜೋಳ್…!!!

ಬೆಳಗಾವಿ- ಪಕ್ಕದ ಮಹಾರಾಷ್ಟ್ರದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ಬೆಳಗಾವಿ ಜಿಲ್ಲೆಯಲ್ಲಿ …

Leave a Reply

Your email address will not be published. Required fields are marked *