Breaking News

ಶವ ಎಲ್ಲಿಯೂ ಹೋಗಿಲ್ಲ ಬಾಡಿ ತಂದೇ ತರ್ತಾರೆ…!!

ಯುದ್ಧಭೂಮಿ ಉಕ್ರೇನ್‌ನಿಂದ ಬೆಳಗಾವಿಗೆ ಮರಳಿದ ವಿದ್ಯಾರ್ಥಿನಿ

ಬೆಳಗಾವಿ-ಯುದ್ಧಪ್ರದೇಶ ಉಕ್ರೇನ್‌ನಿಂದ ಬೆಳಗಾವಿಗೆ ಮರಳಿದ ವಿದ್ಯಾರ್ಥಿನಿ ಹರ್ಷ ವ್ಯೆಕ್ತಪಡಿಸಿದ್ದಾಳೆ.ಬೆಂಗಳೂರಿಂದ ಬೆಳಗಾವಿ ಏರ್‌ಪೋರ್ಟ್‌ಗೆ ಬಂದ‌ ಬ್ರಾಹ್ಮಿ ಪಾಟೀಲ್ ವಿದ್ಯಾರ್ಥಿನಿಯನ್ನು ಸಚಿವ ಉಮೇಶ್ ಕತ್ತಿ ಸ್ವಾಗತ ಮಾಡಿಕೊಂಡರು.

ರೊಮೇನಿಯಾ ಗಡಿಯಿಂದ ದೆಹಲಿಗೆ ಬಂದಿದ್ದ ಬ್ರಾಹ್ಮಿ ಪಾಟೀಲ್ ಇಂದು ಬೆಳಿಗ್ಗೆ,ದೆಹಲಿ, ಬೆಂಗಳೂರು ಮಾರ್ಗವಾಗಿ ಬೆಳಗಾವಿಗೆ ವಾಪಸ್ ಆದ್ರು,ಬ್ರಾಹ್ಮಿಳನ್ನು ಸಚಿವ ಉಮೇಶ್ ಕತ್ತಿ, ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಅವರು ಹೂಗುಚ್ಛ ನೀಡಿ ಬರಮಾಡಿಕೊಂಡರು.

ಎಂ ಬಿ ಬಿ ಎಸ್ ಪ್ರಥಮ ವರ್ಷ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಬ್ರಾಹ್ಮಿ , ಉಕ್ರೇನ್ ದೇಶದ ಚರ್ನಿವೇಸ್ಟ್‌ನ ಬೊಕೊ ಯುನಿಯನ್ ಸ್ಟೆಟ್ ಮೆಡಿಕಲ್ ವಿವಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು.ಯುದ್ದ ಘೋಷಣೆಯಾದ ದಿನ ಕೀವ್ ಏರ್ ಫೊರ್ಟ್ ನಲ್ಲಿ ಸಿಲುಕಿದ್ದ ಬ್ರಾಹ್ಮಿ ಪಾಟೀಲ್,ಕೀವ್ ಏರ್‌ಪೋರ್ಟ್‌ನಲ್ಲಿದ್ದಾಗ ಹತ್ತು ನಿಮಿಷಕ್ಕೊಮ್ಮೆ ಬಾಂಬ್ ಸ್ಫೋಟ ಸದ್ದು ಕೇಳ್ತಿತ್ತು,ಅಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ ಎಂದು ಭಾವುಕರಾಗಿ ಗದ್ಗಧಿತರಾದರು.

ಬೆಳಗಾವಿ ಡಿಸಿ ಹೇಳಿಕೆ

ಬೆಳಗಾವಿಯಲ್ಲಿ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಮಾದ್ಯಮಗಳ ಜೊತೆ ಮಾತನಾಡಿ, ಬೆಳಗಾವಿ ಜಿಲ್ಲೆಯ 20 ಜನ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿದ್ದಾರೆ, ಈಗಾಗಲೇ 9 ಜನ ವಿದ್ಯಾರ್ಥಿಗಳು ವಾಪಸ್ ಬಂದಿದ್ದಾರೆ,ಇನ್ನೂ ಓರ್ವ ವಿದ್ಯಾರ್ಥಿ ಬೆಂಗಳೂರಿನಲ್ಲಿ ಇದ್ದಾರೆ.ಇನ್ನೂ 7 ಜನ ದೆಹಲಿ ತಲುಪಿದ್ದು, ಬೆಳಗಾವಿಗೆ ವಾಪಸ್ ಬರಲಿದ್ದಾರೆ. ವಿದ್ಯಾರ್ಥಿಗಳು ಸುರಕ್ಷಿತವಾಗಿ ಕರೆ ತರಲು ಸಿಎಂ ಸೂಚನೆ ಇದೆ, ಇನ್ನೂ ಮೂರು ಜನರನ್ನು ಕರೆತರಲು ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ‌ ಎಂದು ಡಿಸಿ ಹೇಳಿದ್ರು.

ಶವ ಎಲ್ಲಿಯೂ ಹೋಗಿಲ್ಲ ಬಾಡಿ ತಂದೇ ತರ್ತಾರೆ….

ಉಕ್ರೇನ್‌ದಿಂದ ವಾಪಾಸ್ ಆದ ವಿದ್ಯಾರ್ಥಿನಿಗೆ ಸ್ವಾಗತದ ಬಳಿಕ ಸಚಿವ ಉಮೇಶ್ ಕತ್ತಿ ಮಾದ್ಯಮಗಳ ಜೊತೆ ಮಾತನಾಡಿದ್ರು, ವೈದ್ಯಕೀಯ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿನಿ ಉಕ್ರೇನ್‌ಗೆ ಹೋಗಿದ್ದಳು ಉಕ್ರೇನ್ ರಷ್ಯಾ ಗಲಾಟೆ ನಡುವೆ ಅವಳು ಮರಳಿ ಭಾರತಕ್ಕೆ ಬಂದಿರುವುದು ಸಂತೋಷವಾಗಿದೆ. ಉಕ್ರೇನ್‌ನಿಂದ ಸುಮಾರು ಹದಿನೈದು ಸಾವಿರ ಜನ ವಾಪಸ್ ಬಂದಿದ್ದಾರೆ.ಇನ್ನೂ ಹದಿನೈದು ಸಾವಿರ ಜನ ವಾಪಾಸ್ ಬರುವವರಿದ್ದಾರೆ ಅವರನ್ನ ವಾಪಾಸ್ ಕರೆದುಕೊಂಡು ಬರಲು ಪ್ರಧಾನಿ ಮೋದಿಯವರು ನಾಲ್ಕು ಜನ ಮಂತ್ರಿಗಳನ್ನ ನಿಯೋಜನೆ ಮಾಡಿದ್ದಾರೆ. ಎರಡ್ಮೂರು ದಿನಗಳಲ್ಲಿ ಎಲ್ಲರನ್ನೂ ವಾಪಾಸ್ ತರುವ ಕೆಲಸ ಮಾಡಬಹುದು ಎಂದು ಉಮೇಶ್ ಕತ್ತಿ ಹೇಳಿದ್ರು.
ಆಪರೇಷನ್ ಗಂಗಾ ಬಗ್ಗೆ ಕಾಂಗ್ರೆಸ್ ಲೇವಡಿ ವಿಚಾರ ಪ್ರಸ್ತಾಪಿಸಿದ ಅವರು ಈಗ ಉಕ್ರೇನ್ ದಿಂದ ಬಂದವರನ್ನ ಸ್ವಾಗತ ಮಾಡೋಣ ಆಮೇಲೆ ಅವರ ಬಗ್ಗೆ ಮಾತಾಡೋಣ,ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ದೇಶದ ಮಕ್ಕಳನ್ನ ತಂದು ಅವರನ್ನ ಊರಿಗೆ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ.ಉಕ್ರೇನ್‌ದಿಂದ ವಿದ್ಯಾರ್ಥಿ ನವೀನ್ ಮೃತದೇಹ ತರುವ ವಿಚಾರ ಯುದ್ದ ನಡೆದಾಗ ಡೆತ್ ಆಗಿದ್ದಾನೆ ನಿಜ,ಶವ ಎಲ್ಲಿಯೂ ಹೋಗಿಲ್ಲ ಬಾಡಿ ತಂದೇ ತರ್ತಾರೆ,ಮುಖ್ಯಮಂತ್ರಿಗಳು‌ ನವಿನ್ ಮೃತದೇಹ ತರಿಸುವುದಾಗಿ ಹೇಳಿದ್ದಾರೆ.ಮೃತದೇಹ ತರ್ತಾರೆ ಅನ್ನೋ ವಿಶ್ವಾಸವಿದೆ,ಎಂದುಬೆಳಗಾವಿಯಲ್ಲಿ ಸಚಿವ ಉಮೇಶ್ ಕತ್ತಿ ಹೇಳಿದ್ರು.

ವಿದ್ಯಾರ್ಥಿನಿ ಬ್ರಾಹ್ಮಿ ಪಾಟೀಲ್ ಹೇಳಿದ್ದು…

ಯುದ್ಧಪೀಡಿತ ಉಕ್ರೇನ್‌ನಿಂದ ಬೆಳಗಾವಿಗೆ ವಾಪಸ್ ಆದ ವಿದ್ಯಾರ್ಥಿನಿ ಬ್ರಾಹ್ಮಿ ಪಾಟೀಲ್ ಮಾದ್ಯಮಗಳ ಜೊತೆ ಉಕ್ರೇನ್ ಅನುಭವ ಹಂಚಿಕೊಂಡರು.ಕೀವ್‌ನಲ್ಲಿ ಭಾರತೀಯ ರಾಯಬಾರ ಕಚೇರಿಯಲ್ಲಿ ಆಶ್ರಯ ಪಡೆದಿದ್ದೆವು,ಫೆಬ್ರವರಿ 24ರಂದು ನಮ್ಮ ಫ್ಲೈಟ್ ಇತ್ತು ಆದ್ರೆ ಬಾಂಬ್ ಸ್ಫೋಟ ಹಿನ್ನೆಲೆ ರದ್ದಾಯಿತು.ಪರಿಸ್ಥಿತಿ ತುಂಬಾ ಕೆಟ್ಟವಿತ್ತು,ಎಂಬಿಬಿಎಸ್ ಮೊದಲನೇ ವರ್ಷ ವ್ಯಾಸಂಗ ಮಾಡ್ತಿದ್ದೆ, ಕೀವ್‌ನಿಂದ ರೈಲಿನ ಮೂಲಕ ಗಡಿ ತಲುಪಿದ್ವಿ,
ಖಾರ್ಕಿವ್, ಕೀವ್ ಸೇರಿ ವಿವಿಧೆಡೆ ಸಿಲುಕಿರುವ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಬೇಕು.ತುಂಬಾ ಕೆಟ್ಟ ಪರಿಸ್ಥಿತಿ ಇದೆ, ಬೇಗ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಿ ಎಂದು ಮನವಿ ಮಾಡಿಕೊಂಡ ಬ್ರಾಹ್ಮಿ,ನಮ್ಮ ಯೂನಿವರ್ಸಿಟಿಯ ಎಲ್ಲಾ ವಿದ್ಯಾರ್ಥಿಗಳು ವಾಪಸ್ ಆಗಿದ್ದಾರೆ.ರೊಮೇನಿಯಾ ಸರ್ಕಾರದವರೂ ತುಂಬಾ ಸಹಾಯ ಮಾಡಿದ್ರು,ಉಕ್ರೇನ್‌ನಲ್ಲಿ ಪರಿಸ್ಥಿತಿ ತುಂಬಾ ಕೆಟ್ಟಿದೆ, ಪ್ರತಿ ಹತ್ತು ನಿಮಿಷಕ್ಕೊಂದು ಸಾರಿ ಬಾಂಬ್ ಸ್ಫೋಟವಾಗ್ತಿದೆ ಎಂದು ಬ್ರಾಹ್ಮಿ ಉಕ್ರೇನ್ ಯುದ್ಧಭೂಮಿಯ ಪರಿಸ್ಥಿತಿಯನ್ನು ಬಿಚ್ವಿಟ್ಟರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *