ಬೆಳಗಾವಿ:ತೀವ್ರ ಕುತೂಹಲ ಕೆರಳಿಸಿದ್ದ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಘೋಷಣೆ ಆಗಿದ್ದು, ಕತ್ತಿ ಸಹೋದರರಿಗೆ ತೀವ್ರಮುಖಭಂಗವಾಗಿದೆ.
ಕೊನೆ ಕ್ಷಣದಲ್ಲಿ ಉದ್ಯಮಿ ಅಣ್ಣಾಸಾಹೇಬ್ ಜೊಲ್ಲೆಗೆ ಬಿಜೆಪಿ ಟಿಕೆಟ್ ನೀಡಿದೆ. ಹೀಗಾಗಿ ಚಿಕ್ಕೋಡಿ ಕ್ಷೇತ್ರ ಬಂಡಾಯದ ಬಲೆಗೆ ಸಿಲುಕುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಟಿಕೆಟ್ ಕೈ ತಪ್ಪಿದ್ದರಿಂದ ಶಾಕ್ಗೆ ಒಳಗಾಗಿರುವ ಕತ್ತಿ ಸಹೋದರರು ಮುಂದಿನ ನಡೆ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ.
ಚಿಕ್ಕೋಡಿ ಕ್ಷೇತ್ರದ ಟಿಕೆಟ್ ಘೋಷಣೆ ವೇಳೆ
ಆರ್ ಎಸ್ ಎಸ್ ಪ್ರಭಾವ ವರ್ಕೌಟ್ ಆಗಿದೆ. ಈ ಸಂಗತಿಯೇ ನಾಲ್ಕು ದಶಕಗಳಿಂದ ರಾಜಕಾರಣ ಮಾಡುತ್ತ ರಾಜ್ಯ ಮಟ್ಟದಲ್ಲಿ ಪ್ರಭಾವ ಹೊಂದಿದ್ದ ಕತ್ತಿ ಸಹೋದರರಿಗೆ ತೀವ್ರ ಹಿನ್ನಡೆ ಆಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ