ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ದಿನೇದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಬೆಳಗಾವಿ ಡಿಸಿ ಕಚೇರಿಯಲ್ಲಿ ಸಚಿವ ಉಮೇಶ ಕತ್ತಿ ನೇತೃತ್ವದಲ್ಲಿ ಸಭೆ ನಡೆಯಿತು.
ಗಡಿಯಲ್ಲಿ ಹೆಚ್ಚಿನ ಮುಂಜಾಗ್ರತಾ ಕ್ರಮ ವಹಿಸಲು ಸಚಿವ ಉಮೇಶ್ ಕತ್ತಿ ಸೂಚನೆ ನೀಡಿದ್ರು.ನಿತ್ಯವೂ 15 ಸಾವಿರ ಜನರಿಗೆ ವಾಕ್ಸಿನ್ ನೀಡಬೇಕು,ಜತೆಗೆ ಜಿಲ್ಲೆಯಲ್ಲಿ ನಿತ್ಯ 5 ಸಾವಿರ ಜನರಿಗೆ ಕೋವಿಡ್ ಟೆಸ್ಟ್ ಮಾಡಬೇಕು, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಲು ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ತಾಲೂಕು ಕೇಂದ್ರಗಳಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಿ,ಬೆಳಗಾವಿ ಜಿಲ್ಲೆಯಲ್ಲಿ ಜಾತ್ರೆ, ಉತ್ಸವ ಸಂಪೂರ್ಣ ಬಂದ್ ಮಾಡುವದರ ಜೊತೆಗೆ,ಬೆಳಗಾವಿ ಎಪಿಎಂಸಿ ಮಾರ್ಕೆಟ್ ವಿಭಜನೆ ಮಾಡಲು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇವತ್ತಿನ ಪರಿಸ್ಥಿತಿ ಮಾಹಿತಿ ಪಡೆದಿರುವೆ, ಪ್ರತಿ 15 ದಿನಕ್ಕೊಮ್ಮೆ ಸಭೆ ಮಾಡ್ತಿನಿ,ಕೋವಿಡ್ ತೊಂದರೆ ಜಿಲ್ಲೆಯಲ್ಲಿ ಆಗಬಾರದು. ಕೊರೊನಾ ದಿಂದ ಜನರ ಸಾವು ನೋವು ಆಗಬಾರದು.ಕೋವಿಡ್ ನಿಯಮ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸೂಚಿಸಿರುವೆ,ಕೋವಿಡ್ ವಿಚಾರದಲ್ಲಿ ನಾವು ಯಾರು ಜನಪ್ರತಿನಿಧಿಗಳು ಹಸ್ತಕ್ಷೇಪ ಮಾಡುವುದಿಲ್ಲ.ಮಹಾರಾಷ್ಟ್ರ, ಗೋವಾ ಗಡಿಯಲ್ಲಿ ಚೆಕ್ ಪೋಸ್ಟ್ ಬೀಗಿಗೊಳಿಸಲು ಸೂಚಿಸಿರುವೆ,ಚೆಕ್‌ಪೋಸ್ಟ್‌ಗಳಲ್ಲಿ ಅಗತ್ಯ ಸಿಬ್ಬಂದಿ ನಿಯೋಜಿಸಲು ಹೇಳಿರುವೆ,ಬಂದು ಹೋಗುವವರ ಹೆಸರು ಬರೆದುಕೊಳ್ಳಲು, ಬಂದ ಉದ್ದೇಶ, ಹೋಗುವ ಉದ್ದೇಶ ಮಾಹಿತಿ ಪಡೆಯಲು ಸೂಚಿಸಿರುವೆ,ದಿನವೂ 5 ಸಾವಿರ ಟೆಸ್ಟ್ ಮಾಡಬಹುದು, 15 ಸಾವಿರ ವ್ಯಾಕ್ಸಿನ್ ಬರುತ್ತಿದೆ,ಎಂದು ಸಚಿವ ಉಮೇಶ್ ಕತ್ತಿ ಮಾಹಿತಿ ನೀಡಿದರು.
ಬಿಜೆಪಿ ಗೆಲುವು ನಿಶ್ಚಿತ
ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ10 ಲಕ್ಷದಷ್ಟು ಜನರು ಮತದಾನ ಮಾಡಿದ್ದಾರೆ,ನನ್ನ ವೈಯಕ್ತಿಕ ಪ್ರಕಾರ ಎರಡೂವರೆ ಲಕ್ಷ ಮತಗಳ ಅಂತರದಿಂದ ಬಿಜೆಪಿ ಗೆಲುವು ಸಾಧಿಸಲಿದೆ,ಎಂಇಎಸ್ ಅಭ್ಯರ್ಥಿ ಸ್ಪರ್ಧೆಯಿಂದ ಪರಿಣಾಮ ಬೀರುವುದಿಲ್ಲ,ಅನುಕಂಪದ ಅಲೆ, ಸುರೇಶ್ ಅಂಗಡಿ ಅಭಿವೃದ್ಧಿ ಕೆಲಸ ನಮಗೆ ಶ್ರೀರಕ್ಷೆ ಬಿಜೆಪಿ ಗೆಲುವು ನಿಶ್ಚಿತ ಎಂದು ಸಚಿವ ಉಮೇಶ್ ಕತ್ತಿ ವಿಶ್ವಾಸ ವ್ಯೆಕ್ತಪಡಿಸಿದರು.
ಸುರೇಶ್ ಅಂಗಡಿ ಪತ್ನಿ ಬಿಎಸ್‌ಸಿ ಪದವೀಧರೇ, ಮುಂದಿನ ಮೂರು ವರ್ಷ ಉತ್ತಮ ಕೆಲಸ ಮಾಡಲಿದ್ದಾರೆ.ಬೆಳಗಾವಿ ಜಿಲ್ಲೆಗೆ ಉಸ್ತುವಾರಿ ಸಚಿವರಿಲ್ಲ ಎಂದು ಮಾಧ್ಯಮಗಳ ಪ್ರಶ್ನೆ,ಮಾಧ್ಯಮಗಳ ಪ್ರಶ್ನೆಗೆ ಸಚಿವ ಉಮೇಶ್ ಕತ್ತಿ ಉತ್ತರ ಹಿಂದೆ ಜೆ.ಹೆಚ್.ಪಟೇಲ್, ಯಡಿಯೂರಪ್ಪ ಸಿಎಂ ಇದ್ದಾಗ ಜಿಲ್ಲಾ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿರುವೆ,ಆ ಅನುಭವದ ಮೇಲೆ ಅಧಿಕಾರಿ ಮೀಟಿಂಗ್ ಮಾಡಿದ್ದೀನಿ.ನನ್ನ ಜಿಲ್ಲೆಗೆ ಯಾವುದೇ ತೊಂದರೆ ಆಗಬಾರದೆಂದು ಸಭೆ ಮಾಡಿರುವೆ.ಎಂದರು