ಬೆಳಗಾವಿಯಲ್ಲಿ ಉಪ್ಪಿ..ಅಟೋ ಓಡಿಸಿದ್ರಲ್ಲ ..ಕಾಂತಾ..ಕಾಂತಾ…!
ಬೆಳಗಾವಿ-
ಕುಂದಾನಗರಿ ಬೆಳಗಾವಿಗೆ ಆಗಮಿಸಿದ ನಟ ಉಪೇಂದ್ರ ಪ್ರಜಾಕೀಯ
ಕೆಪಿಜೆಪಿ ಪಕ್ಷದ ಪ್ರಚಾರ ಮಾಡಿದ್ರು ನಗರದ ಚನ್ನಮ್ಮ ವೃತ್ತದಲ್ಲಿ ಚೆನ್ನಮ್ಮ ಮೂರ್ತಿಗೆ ಉಪ್ಪಿ ಮಾಲಾರ್ಪಣೆ ಮಾಡಿದ ರಿಯಲ್ ಸ್ಟಾರ್ ಉಪ್ಪಿ ಚನ್ನಮ್ಮ ವೃತ್ತದಿಂದ ಸುದ್ದಿಗೋಷ್ಠಿ ಸ್ಳಳದವ ವರೆಗೂ ಆಟೋ ಓಡಿಸಿ ಎಲ್ಲರ ಗಮನ ಸೆಳೆದ್ರು
ಬೆಳಗಾವಿ ಮಿಲನ್ ಹೊಟೇಲನಲ್ಲಿ ಉಪೇಂದ್ರರಿಂದ ಸುದ್ದಿಗೋಷ್ಠಿ ನಡೆಯಿತು ಸುದ್ಧಗೋಷ್ಠಿಯಲ್ಲಿ ಉಪೇಂದ್ರ ತಮ್ಮ ಪಕ್ಷದ ಸಿದ್ಧಾಂತ ಬಿಚ್ಚಿಟ್ಟರು
ಎಲ್ಲರಿಗೂ ಈಗೀರುವ ರಾಜಕೀಯ ವ್ಯವಸ್ಥೆ ಬೇಸತ್ತು ಹೋಗಿದೆ. ವಿಷಯಾಧಾರಿತ ರಾಜಕೀಯ ನಡೆಯುತ್ತಿದೆ ಹೊಸ ರಾಜಕಾರಣಕ್ಕೆ ವೇದಿಕೆ ರೂಪಿಸಿದ್ದೇನೆ. ಸಾಕಷ್ಟು ಜನರು ನನಗೆ ಕೈಜೋಡಿಸುತ್ತಿದ್ದಾರೆ.
ಕೇವಲ ೨೦ ರಷ್ಟು ಜನರ ಕೈಯಲ್ಲಿ ಅಧಿಕಾರವಿದೆ. ಶೇ.೮೦ ಜನರು ಸುಮ್ಮನಾಗಿದ್ದೇವೆ. ಅಕೌಂಟಬಿಲಿಟಿ ನಮಗೆ ಬೇಕಾಗಿದೆ ಎಂದು ಉಪೇಂದ್ರ ಹೇಳಿದರು
ನಮ್ಮ ಮೈಂಡ್ ಸೆಟ್ ಹೇಗಾಗಿದೆ ಅಂದ್ರೆ ಹಣವಿದ್ರೆ ಮಾತ್ರಾ ರಾಜಕಾರಣ ಅಂತಾ ಆಗಿ ಹೋಗಿದೆ ಮೈಕ್ರೋ ಲೇವಲ್ ಪ್ಲಾನಿಂಗ್. ರಾಜ್ಯ ಮಟ್ಟದ ಪ್ಲಾನಿಂಗ್ ನಮ್ಮ ಪ್ರಣಾಳಿಕೆಯಲ್ಲಿದೆ ಜನೆವರಿ ಅಂತ್ಯವರೆಗೂ ಕೆಪಿಜೆಪಿ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡುವ ಉದ್ದೇಶ ತಮ್ಮದಾಗಿದ್ದು ಅರ್ಹತೆ ಇರುವ ಅಭ್ಯರ್ಥಿಗಳನ್ನ ಸಂದರ್ಶನ ಮಾಡಿ ಆಯ್ಕೆ ಮಾಡ್ತಿವಿ ಅಂತ ಹೇಳಿದ್ರು
ನಾನು ನಮ್ಮಣ್ಣ ಸೇರಿ ಜಮೀನು ತೆಗೆದುಕೊಂಡಿದ್ದೇವೆ. ಕೃಷಿಗಂತ ತೆಗೆದುಕೊಂಡ ಸ್ಥಳದಲ್ಲಿ ಕೃಷಿ ಮಾಡ್ತಿದ್ದೇವೆ ರೆಸಾರ್ಟ್ ಹಿಂದಗಡೆ ಈ ಕೃಷಿ ಭೂಮಿಯಿದೆ. ಕೆ.ಎಸ್.ಡಿಯಿಂದ ನೆರವು ಪಡೆದು ರೆಸಾರ್ಟ್ ಮಾಡಿದ್ದೇವೆ
ಕೋರ್ಟ ನಿರ್ಧಾರ ತೆಗೆದುಕೊಂಡಿದೆ. ಹಿರೇಮಠ ಅವರು ಕೋರ್ಟ ನಿರ್ಧಾರವನ್ನ ಪ್ರಶ್ನೆ ಮಾಡ್ತಾರೆ ? ಎಂದು ಉಪ್ಪಿ ಹಿರೇಮಠ ಅವರಿಗೆ ತಿರಗೇಟು ನೀಡಿದರು
ಬೆಳಗಾವಿಯಲ್ಲಿ ನಟ ಉಪೇಂದ್ರ ನೋಡಲು ಅಭಿಮಾನಿಗಳ ನೂಕು ನುಗ್ಗಲು ಉಂಟಾಯಿತು ನೂಕು ನುಗ್ಗಲು ವೇಳೆ ಹೊಟೆಲ ಗಾಜು ಪುಡಿ ಪುಡಿಯಾಯಿತು ಗುಂಪನ್ನು ಚದುರಿದ ಪೊಲಿಸರ ಹರಸಾಹಸ ಪಡಬೇಕಾಯಿತು
ಬೆಳಗಾವಿಗೂ ಉಪೇಂದ್ರ ಪ್ರಜಾಕೀಯ ಬಂತಲ್ಲ ಕಾಂತಾ..ಕಾಂತಾ…!