Breaking News
Home / Breaking News / ಚುನಾವಣೆ ದಿನಾಂಕ ಪ್ರಕಟವಾಗುವ ಮೊದಲೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಚುನಾವಣೆ ದಿನಾಂಕ ಪ್ರಕಟವಾಗುವ ಮೊದಲೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಬೆಳಗಾವಿ- ಕರ್ನಾಟಕದಲ್ಲಿ ಬಿಜೆಪಿ 150 ಮಿಶನ್ ಅಚಲ ಈ ಕುರಿತು ರಾಜ್ಯದ ಬಿಜೆಪಿ ನಾಯಕರು ಹಗಲಿರಳು ಶ್ರಮ ಪಡುತ್ತಿದ್ದಾರೆ ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ದಿನಾಂಕ ಪ್ರಕಟವಾಗುವ ಮೊದಲೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತವೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳಿಧರ ರಾವ್ ಹೇಳಿದ್ದಾರೆ

ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಗುಜರಾತ ಹಾಗೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಗೆಲವು ಶತಸಿದ್ದ ಈ ಎರಡೂ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಕರ್ನಾಟಕದಲ್ಲಿ ಭಾರೀ ರಾಜಕೀಯ ಬದಲಾವಣೆ ಆಗುತ್ತದೆ ಬಿಜೆಪಿಯಿಂದ ಯಾರೂ ಬೇರೆ ಪಕ್ಷಕ್ಕೆ ಹೋಗೋಲ್ಲ ಬೇರೆ ಪಕ್ಷದಿಂದ ಬಿಜೆಪಿಗೆ ಅನೇಕ ಜನ ನಾಯಕರು ಬರಲಿದ್ದಾರೆ ಎಂದು ಮುರಳಿಧರ ರಾವ್ ಹೇಳಿದರು

ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದ ಮಂತ್ರಿಗಳು ಭ್ರಷ್ಟಾಚಾರ ದಲ್ಲಿ ಮುಳುಗಿದ್ದಾರೆ ವಿನಯ ಕುಲಕರ್ಣಿ ಮತ್ತು ಜಾರ್ಜ ಅವರು ಕೊಲೆ ಆರೋಪ ಹೊತ್ತು ಮಂತ್ರಿಗಳಾಗಿ ಮುಂದುವರೆದಿದ್ದಾರೆ ರಾಜ್ಯದ ಮುಖ್ಯಮಂತ್ರಿ ಹಿಂದೂ ವಿರೋಧಿಯಾಗಿದ್ದು ರಾಜ್ಯದ ಜನ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಮುರಳಿಧರ ರಾವ್ ಹೇಳಿದರು

ಮಾಜಿ ಮುಖ್ಞಮತ್ರಿ ಯಡಿಯೂರಪ್ಪ ಅವರ ಪರಿವರ್ತನಾ ಯಾತ್ರೆಗೆ ರಾಜ್ಯದಲ್ಲಿ ಸ್ಪಂದನೆ ಸಿಕ್ಕಿದೆ ಪರಿವರ್ತನಾ ಯಾತ್ರೆಯ ಸಮಾರೋಪ ಬೆಂಗಳೂರಿನಲ್ಲಿ ಜನೇವರಿ ತಿಂಗಳಲ್ಲಿ ನಡೆಯಲಿದ್ದು ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಬರಲಿದ್ದಾರೆ ಎಂದು ಮುರಳಿಧರ ರಾವ್ ಹೇಳಿದರು

ರಾಜ್ಯದಲ್ಲಿ ಗೆಲ್ಲುವ ಕುದುರೆಗಳಿಗೆ ಟೆಕೆಟ್ ಕೊಡಲು ಬಿಜೆಪಿ ಹೈಕಮಾಂಡ್ ತಯಾರಿ ನಡೆಸಿದೆ ಸಂಸದರಿಗೆ ವಿಧಾನಸಭೆ ಚುನಾವಣೆಯ ಟಿಕೆಟ್ ಕೊಡಬೇಕೋ ಇಲ್ಲವೋ ಅನ್ನೋದರ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ ಎಂದರು

ಮಾಜಿ ಮಂತ್ರಿ ಉಮೇಶ ಕತ್ತಿ ಬಿಜೆಪಿ ಕುರಿತು ಅವಾಚ್ಯವಾಗಿ ಯಾವುದೇ ಹೇಳಿಕೆ ನೀಡಿಲ್ಲ ಇದು ಮಾದ್ಯಮಗಳ ಸೃಷ್ಠಿ ಎಂದರು ಮುರಳಿಧರ ರಾವ್

ಪತ್ರಿಕಾಗೋಷ್ಠಿಯಲ್ಲಿ ಸಂಸದ ಸುರೇಶ ಅಂಗಡಿ ಹರಕುಣಿ ಮತ್ತು ಮಹಾಂತೇಶ ಕವಟಗಿಮಠ ಇದ್ದರು

About BGAdmin

Check Also

ಪತ್ರಿಕಾ ಛಾಯಾಗ್ರಾಹಕನ ಮನೆ ದೋಚಿದ. ಕಳ್ಳರು

ಬೆಳಗಾವಿ- ಬೆಳಗಾವಿಯ ಖ್ಯಾತ ಪತ್ರಿಕಾ ಛಾಯಾಗ್ರಾಹಕ ಸದಾಶಿವ ಸಂಕಪ್ಪಗೋಳ ಮನೆ ಕಳುವಾಗಿದ್ದು ಸುಮಾರು ಐದು ಲಕ್ಷ ರೂ ಬೆಲೆಬಾಳುವ ಸಾಮುಗ್ರಿಗಳು …

Leave a Reply

Your email address will not be published. Required fields are marked *