ಬೆಳಗಾವಿ -ಉತ್ತರ ಕರ್ನಾಟಕದ ಅಭಿವೃದ್ಧಿಯ ಹರಿಕಾರ ಸಿಎಂ ಕುಮಾರಸ್ವಾಮಿ ಬಜೆಟ್ ಕೇವಲ ಹಾಸನ ಮತ್ತು ಚಾಮರಾಜ ನಗರಕ್ಕೆ ಸೀಮೀತವಾಗಿದೆ ತವರು ಜಿಲ್ಲೆಗಳಿಗೆ ಕಮಾಲು ಉಳಿದವರೆಲ್ಲ ಕಂಗಾಲು ಎನ್ನುವಂತಿದೆ ಕುಮಾರಸ್ವಾಮಿ ಬಜೆಟ್
ಮುಖ್ಯಮಂತ್ರಿಕುಮಾರಸ್ವಾಮಿ ಚೊಚ್ಚಲು ಬಜೆಟ್ ನಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ನ್ಯಾಯ ದೊರಕಿಸಿ ಕೊಡಬಹುದು ಹಿಂದುಳಿದ ಭಾಗಕ್ಕೆ ಬಂಪರ್ ಕೊಡುಗೆಗಳು ಸಿಗಬಹುದು ಎನ್ನುವ ಜನರ ನೀರೀಕ್ಷೆಗಳು ಹುಸಿಯಾಗಿದ್ದು ಹಾಸನಕ್ಕೆ ತೆಲೆದಿಂಬು ಉತ್ತರ ಕರ್ನಾಟಕಕ್ಕೆ ಬರೀ ಚಂಬು ಎನ್ನುವಂತೆ ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಭರಪೂರ ಕೊಡುಗೆ ನೀಡಿರಿರುವ ಕುಮಾರಸ್ವಾಮಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಕಿಕ್ ನೀಡಿದ್ದಾರೆ
ಕುಮಾರಸ್ವಾಮಿ ಮಂಡಿಸಿದ ಬಜೆಟ್ ನಲ್ಲಿ ಬೆಳಗಾವಿ ಜಿಲ್ಲೆಗೆ ಸಿಕ್ಕಿದ್ದು ಶೂನ್ಯ ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿದ್ದ ಸೂಪರ್ ಮಲ್ಟೀ ಸ್ಪೇಶ್ಯಾಲಿಟಿ ಆಸ್ಪತ್ರೆ ನಿರ್ಮಾಣದ ಮರು ಘೋಷಣೆ ಮಾಡಿ ಹೊಸ ಬಾಟಲಿಯಲ್ಲಿ ಹಳೆ ಮದ್ಯ ಹಾಕಿ ಗಡಿನಾಡ ಕನ್ನಡಿಗರ ಮೂಗಿಗೆ ತುಪ್ಪು ಸವರುವ ಕೆಲಸ ಮಾಡಿದ್ದಾರೆ
ಸಿಎಂ ಕುಮಾರಸ್ವಾಮಿ ಮಂಡಿಸುವ ಬಜೆಟ್ ನಲ್ಲಿ ಬೆಳಗಾವಿಯ ಸುವರ್ಣ ಸೌಧಕ್ಕೆ ಕಚೇರಿಗಳ ಸ್ಥಳಾಂತರ ,ಸುವರ್ಣ ಸೌಧದ ಪಕ್ಕದಲ್ಲಿ ಶಾಸಕರ ಭವನ ನಿರ್ಮಾಣದ ತೀರ್ಮಾಣ ಆಗಬಹುದು ಎಂದು ಬೆಳಗಾವಿಯ ಜನ ನಂಬಿ ಕಾದು ಕುಳಿತ್ತಿದ್ದರು ಆದರೆ ಕುಮಾರಸ್ವಾಮಿ ಜನರ ನಂಬಿಕೆ ದ್ರೋಹ ಬಗೆದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ನಾಂದಿ ಹಾಡಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ