ಬೆಳಗಾವಿ-ಬೆಳಗಾವಿಯ ಸಮಸ್ಯೆಗಳ ಕುರಿತು ಬೆಂಗಳೂರಿನಿಂದ ಬೆಳಗಾವಿಗೆ ಬರುವಾಗ ಹಿರೇಬಾಗೇವಾಡಿ ಟೋಲ್ ಬಳಿ ಪೋಲೀಸರ ವಶವಾಗುತ್ತಿದ್ದ ವಾಟಾಳ್ ನಾಗರಾಜ್ ಈ ಬಾರಿ ಪೋಲೀಸರ ಕಣ್ಣು ತಪ್ಪಿಸಿ ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ತಲುಪುವಲ್ಲಿ ಯಶಸ್ವಿ ಆಗಿದ್ದಾರೆ.
ಪ್ರತಿ ಬಾರಿ ಕಾರಿನಲ್ಲಿ ಬೆಳಗಾವಿಗೆ ಬರುವಾಗ ಹಿರೇಬಾಗೇವಾಡಿ ಟೋಲ್ ನಾಕಾದ ಬಳಿ ಪೋಲೀಸರ ಕೈಗೆ ಸಿಗುತ್ತಿದ್ದ ವಾಟಾಳ್ ನಾಗರಾಜ್ ಈ ಬಾರಿ ಧಾರವಾಡದವರೆಗೆ ಕಾರಿನಲ್ಲಿ ಬಂದು ಧಾರವಾಡದಲ್ಲಿ ವೇಷ ಬದಲಾಯಿಸಿ ಕಾರಿನಿಂದ ಇಳಿದು ಬಸ್ ಏರಿ ಬೆಳಗಾವಿಗೆ ತಲುಪಿದ್ದಾರೆ
ಟೋಪಿ , ಮತ್ತು ಗಾಗಲ್ ನೋಡಿದ್ರೆ ಇವರೇ ವಾಟಾಳ್ ಎಂದು ಗೊತ್ತಾಗುತ್ತದೆ,ಆದ್ರೆ ಬಸ್ ಏರುವಾಗ ಟೋಪಿಗೂ ಬಿಳಿ ಬಟ್ಟೆ ಸುತ್ತಿ,ಬಾಯಿಗೂ ಮಾಸ್ಕ್ ಹಾಕಿಕೊಂಡು ಮೋಡಿ ಮಾಡಿದ ವಾಟಾಳ್ ಬೆಳಗಾವಿಗೆ ತಲುಪಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದ ಅವರು, ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ನಡೆಸಲು ವಾಟಾಳ್ ನಾಗರಾಜ್ ಆಗ್ರಹಪಡಿಸಿದರು.
ಬೆಳಗಾವಿ ರಾಜಕಾರಣಿಗಳ ವಿರುದ್ಧ ವಾಟಾಳ್ ನಾಗರಾಜ್ ತೀವ್ರ ವಾಗ್ದಾಳಿ ನಡೆಸಿದರು.
ಬೆಳಗಾವಿ ಶಾಸಕರು ಎಲ್ಲಿ ಹೋಗಿದ್ದೀರಿ? ಮಂತ್ರಿ ಆಗಬೇಕು, ಒಳ್ಳೆ ಪೊರ್ಟಪೊಲಿಯೋ ಎಲ್ಲಾ ಬೇಕು
ಆದರೆ ನೀವೆಲ್ಲಾ ಮರಾಠಿ ಏಜೆಂಟರು, ಮರಾಠಿ ಗುಲಾಮರು ಎಂದು ವಾಟಾಳ್ ಆಕ್ರೋಶ ವ್ಯೆಕ್ತ ಪಡಿಸಿದರು
ಬೆಳಗಾವಿಯ ಎಂಪಿಗಳು, ರಾಜ್ಯಸಭಾ ಸದಸ್ಯರು, ಶಾಸಕರು ಮರಾಠಿ, ಶಿವಸೇನೆ ಗುಲಾಮರು ಎಂದು ಆರೋಪಿಸಿದ ಅವರು, ಮಾನ ಮರ್ಯಾದೆ ಇದ್ರೆ ರಾಯಣ್ಣ ಸರ್ಕಲ್ ಆರಂಭ ಆಗಬೇಕು,ಪೀರನವಾಡಿ ಬಳಿ ಶಿವಾಜಿ ಸರ್ಕಲ್ ಆಗಬಾರದು,
ಶಿವಾಜಿ ಸರ್ಕಲ್ ಮಾಡಿದ್ರೆ, ನಾನೇ ಗುದ್ದಲಿ, ಪಿಕಾಸಿ ತಂದು ಹೊಡೆದು ಹಾಕ್ತೀನಿ,ಎಂದು ವಾಟಾಳ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಮಳೆ ನಿಂತು ಹೋದ ಮೇಲೆ ಹೆಲಿಕಾಪ್ಟರ್ ನಲ್ಲಿ ಬಂದು ಷೋ ಮಾಡಿ ಹೋದ್ರಿ ಯಡಿಯೂರಪ್ಪ ಅವರೇ,ಮನೆ ಬಿದ್ದು ಜನ ಕಣ್ಣೀರಲ್ಲಿದ್ದಾರೆ ಜನರ ಪರಿಸ್ಥಿತಿ ಹೀನಾಯವಾಗಿದೆ,ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್ ನೀಡಬೇಕು.
ಮುಂದಿನ ತಿಂಗಳು ಅಧಿವೇಶನ ನಡೆಸದಿದ್ರೆ ರಾಜ್ಯ ಸರ್ಕಾರ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.
ದ್ವೇಷ, ಅಸೂಯೆ, ಭ್ರಷ್ಟಾಚಾರದ ದೊರೆ, ಪಕ್ಷಾಂತರದ ಮಹಾಪ್ರಭು ಯಡಿಯೂರಪ್ಪ’, ‘ಕರ್ನಾಟಕದ ಇತಿಹಾಸದಲ್ಲಿ ಇಂತಹ ಸಿಎಂ ನೋಡಿರಲಿಲ್ಲ’
ಕರ್ನಾಟಕದಲ್ಲಿ ನಾನು ಹಿರಿಯ ರಾಜಕಾರಣಿ, ಯಡಿಯೂರಪ್ಪ ನನ್ನ ಜ್ಯೂನಿಯರ್ ಇವರಿಗೆ ರಾಜ್ಯ, ಪ್ರಜಾಪ್ರಭುತ್ವ, ಚಿಂತನೆ ಗೊತ್ತಿಲ್ಲ,ಶಾಸನಸಭೆಯನ್ನು ಅತ್ಯಂತ ಕೆಳಮಟ್ಟದಲ್ಲಿ ನಡೆಸಿಕೊಳ್ಳುತ್ತಿದ್ದಾರೆ ಪಕ್ಷಾಂತರ, ಲೂಟಿ ಮಾಡೋದು ಮಾತ್ರ ಇವರಿಗೆ ಗೊತ್ತು, ಯಡಿಯೂರಪ್ಪ ವರ್ಷಕ್ಕೆ ಒಂದೇ ಸಾರಿ ನಗೋದು ಎಂದು ವಾಟಾಳ್ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.
ಯಡಿಯೂರಪ್ಪ ಮೂರ್ನಾಲ್ಕು ಬಾರಿ ಸಿಎಂ ಆಗಿ ಎಂಟು ಸಾರಿ ನಕ್ಕಿರಬಹುದು,ನಗುವ ನರಗಳೇ ಇಲ್ಲ ಅವರಿಗೆ, ಆ ಮಾಂಸ ಖಂಡಗಳೇ ಇಲ್ಲ, ಬಹಳ ದ್ವೇಷ, ಅಸೂಯೆ ಇದೆ ಅವರಿಗೆ, ಯಾರನ್ನು ಕಂಡರೂ ದ್ವೇಷ ಇಂತವರ ಕೈಗೆ ನಮ್ಮ ರಾಜ್ಯ ಸಿಕ್ಕಿದೆ, ಇದು ಸರ್ವಾಧಿಕಾರಿಗಳ ರಾಜ್ಯ, ನಾನು ಚಾಲೆಂಜ್ ಮಾಡ್ತೀನಿ ಇರುವ ಮಂತ್ರಿಗಳು ಯಡಿಯೂರಪ್ಪಗೆ ಪ್ರಶ್ನೆ ಮಾಡಿ,ಯಡಿಯೂರಪ್ಪಗೆ ಪ್ರಶ್ನೆ ಮಾಡುವ ತಾಕತ್ತು ಯಾರಿಗೂ ಇಲ್ಲ, 224 ಶಾಸಕರಿಗೆ, ಯಡಿಯೂರಪ್ಪ ಮಂತ್ರಿಮಂಡಳಕ್ಕೆ ವಾಟಾಳ್ ನಾಗರಾಜ್ ಒಬ್ಬರೇ ಸಮ ಎಂದರು.
ನನ್ನ ಶಾಸನಸಭೆ, ವಿಧಾನಪರಿಷತ್‌ಗೆ ಬರದೇ ರೀತಿ ಯಡಿಯೂರಪ್ಪ ಪ್ರಯತ್ನ ಮಾಡಿದ್ದಾರೆ.
ನಾನು ಶಾಸನಸಭೆಗೆ ಬಂದ್ರೆ ಯಡಿಯೂರಪ್ಪನವರ ಚಡ್ಡೀಲಿ ನೀರು ಇಳಿಸ್ತೀನಿ, ಅದು ಅವರಿಗೆ ಗೊತ್ತು ಅಂದ್ರು ವಾಟಾಳ್