ಬೆಳಗಾವಿ- ಮಳೆಯ ಅರ್ಭಟದಿಂದ ಉತ್ತರ ಕರ್ನಾಟಕ ತತ್ತರಿಸಿ ಹೋಗಿದ್ದು ಪ್ರಧಾನಿ ನರೇಂದ್ರ ಮೋದಿ ಉತ್ತರ ಕರ್ನಾಟಕಕ್ಕೆ ಭೇಟಿ ನೀಡಿ 25 ಸಾವಿರ ಕೋಟಿ ಪ್ಯಾಕೇಜ್ ಘೋಷಣೆ ಮಾಡುವಂತೆ ಆಗ್ರಹಿಸಿ ಹಿರಿಯ ಕನ್ನಡಪರ ಹೋರಾಟಗಾರ, ವಾಟಾಳ್ ನಾಗರಾಜ್ ಅವರು ಇಂದು ಶುಕ್ರವಾರ ಬೆಳಿಗ್ಗೆ ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿ,ಪ್ರಧಾನಿ ಬರಲೇ ಬೇಕು,ಪರಿಹಾರ ಸಿಗಲೇ ಬೇಕು ಎಂದು ಚಳವಳಿ ಮಾಡಿದ್ದಾರೆ.
ಬೆಳಗಾವಿ ಸುವರ್ಣ ಸೌಧ ಮುಂದೆ ಪ್ರತಿಭಟಿಸಿ ಮಾತನಾಡಿದ ವಾಟಾಳ್ ನಾಗರಾಜ್ ,ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು, ಉತ್ತರ ಕರ್ನಾಟಕದಲ್ಲಿ ಪ್ರವಾಹ, ಮಳೆಯಿಂದ ಭಾರಿ ಹಾನಿ
ಆಗಿದೆ, ಈವರೆಗೂ ಮಳೆಯಿಂದ ಒಂದು ಲಕ್ಷ ಸಾವಿರ ಕೋಟಿ ನಷ್ಟವಾಗಿದೆ ಎಂದರು.
ಆದ್ರು ಕೇಂದ್ರ ಸರ್ಕಾರದಿಂದ ಸೂಕ್ತ ಪರಿಹಾರ ಸಿಕ್ಕಿಲ್ಲ, ಅನ್ಯ ರಾಜ್ಯಗಳಲ್ಲಿ ಪ್ರವಾಹ ಬಂದ್ರೆ ಪ್ರಧಾನಿ ಮೋದಿ ಹೋಗ್ತಾರೆ, ಪರಿಹಾರ ಕೊಡ್ತಾರೆ,ಕರ್ನಾಟಕ ಕ್ಕೆ ಮಾತ್ರ ಪ್ರಧಾನಿ ಮೋದಿ ಪರಿಹಾರ ನೀಡುತ್ತಿಲ್ಲ, ಶಾಸಕರು, ಸಚಿವರು,ಸಂಸದರು ಧ್ವನಿ ಎತ್ತುತ್ತಿಲ್ಲ, ತಕ್ಷಣವೇ ಸರ್ಕಾರ 25 ಸಾವಿರ ಕೋಟಿ ಪರಿಹಾರ ಘೋಷಿಸಬೇಕು, ಇಲ್ಲವಾದ್ರೆ ಸಿಎಂ ಯಡಿಯೂರಪ್ಪ ಸರ್ಕಾರ ರಾಜೀನಾಮೆ ನೀಡಬೇಕು ಎಂದು ವಾಟಾಳ್ ಆಗ್ರಹಿಸಿದರು.
ಇನ್ನೂ ವಿದ್ಯಾಗಮ ಯೋಜನೆ ಪೂರ್ಣ ಪ್ರಮಾಣದಲ್ಲಿ ನಿಲ್ಲಿಸಬೇಕು,ಕೊರೊನಾದಿಂದ ಮಕ್ಕಳ, ಉಪಾದ್ಯಾಯರು ಸತ್ತರೆ ಸರ್ಕಾರ ತಲಾ ಒಂದೊಂದು ಕೋಟಿ ಪರಿಹಾರ ನೀಡಬೇಕು,
ಬೆಳಗಾವಿಯಲ್ಲಿ ವಾಟಾಳ್ ನಾಗರಾಜ್ ಒತ್ತಾಯಿಸಿದರು.