ಬೆಳಗಾವಿ- ಬೆಳಗಾವಿಯಲ್ಲಿ ವಾಟಾಳ್ ನಾಗರಾಜ್ ಅವರ ಹೋರಾಟದಲ್ಲಿ ಬಗೆ,ಬಗೆಯ ಕಾಮಿಡಿ ಪಂಚ್ ಗಳು ಕೇಳಿ ಬಂದವು,ಪೋಲೀಸರು ಅವರನ್ನು ಅರೆಸ್ಟ್ ಮಾಡಲು ಮುಂದೆ ಬಂದಾಗ,ಯಾಕ್ರೀ ನಮ್ಮನ್ನು ಅರೆಸ್ಟ್ ಮಾಡ್ತೀರಾ,ಹೋಗಿ ಮೊದಲು ಆ ಸಿಡಿ ಲೇಡಿಯನ್ನು ಅರೆಸ್ಟ್ ಮಾಡಿ ಎಂದು ಪೋಲೀಸರಿಗೆ ವಾಟಾಳ್ ಅವಾಜ್ ಹಾಕಿದ್ರು….
ಹೋರಾಟದ ಮೊದಲು ಮಾದ್ಯಮಗಳ ಜೊತೆ ಮಾತನಾಡಿದ ಅವರು, ನಾನು ಪದೇಪದೇ ಬೆಳಗಾವಿಗೆ ಬರ್ತೀನಿ,ನನಗೂ ಬೆಳಗಾವಿಗೂ ಅಗಾಧವಾದ ಸಂಬಂಧವಿದೆ, ಐವತ್ತು ವರ್ಷಗಳ ಹಿಂದೆ ಬೆಳಗಾವಿಯ ಲಿಂಗರಾಜ ಕಾಲೇಜು ಮೈದಾನದಲ್ಲಿ ಭಾಷಣ ಮಾಡಿದ್ದೆ, ಮರಾಠಿ ನಾಮಫಲಕ ಕಿತ್ತು ಹಾಕಲು
ಹೋರಾಟ ಮಾಡಿದ್ದಾಗ ಗಲಾಟೆಯಾಗಿತ್ತು,ಎಂದು ಬೆಳಗಾವಿ ಹೋರಾಟವನ್ನು ವಾಟಾಳ್ ಸ್ಮರಿಸಿದರು.
ಬೆಳಗಾವಿಯನ್ನು ಕರ್ನಾಟಕ ಸರ್ಕಾರ, ಸಿಎಂ ಗಂಭೀರವಾಗಿ ಪರಿಗಣಿಸಿಲ್ಲ,ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಅವರಪ್ಪ ಬಾಳಾ ಠಾಕ್ರೆ ತಮ್ಮ ಜೀವನವನ್ನೇ ಗಡಿಭಾಗಕ್ಕೆ ಇಟ್ಟಿದ್ದಾರೆ, ಕರ್ನಾಟಕ ಸಿಎಂ ಏನು ದನ ಕಾಯುತ್ತಿದ್ದಾರಾ? ಗಡಿನಾಡು ಸಮಿತಿ ಮಾಡಿದ್ದಾರೆ ಅದು ಏನಾಗಿದೆ ಪರಿಸ್ಥಿತಿ ಯಾರಿಗೂ ಗೊತ್ತಿಲ್ಲ.ಸುಪ್ರೀಂಕೋರ್ಟ್ ನಲ್ಲಿ ಬೆಳಗಾವಿ ಬಗ್ಗೆ ಮಹಾರಾಷ್ಟ್ರ ಸರ್ಕಾರ ತೀವ್ರವಾಗಿ ದಾಂಧಲೆ ಮಾಡಲು ಹೊರಟಿದ್ದಾರೆ, ಸುವರ್ಣಸೌಧ ಯಾವುದಕ್ಕಾಗಿ ಕಟ್ಟಿದ್ರು ಇದರ ಉಪಯೋಗ ಏನು? ಎಂದು ವಾಟಾಳ್ ಸರ್ಕಾರವನ್ನು ಪ್ರಶ್ನಿಸಿದರು.
ಕನಿಷ್ಠ ವರ್ಷಕ್ಕೆ ಒಂದು ಸಾರಿಯಾದರೂ ಪರಿಣಾಮಕಾರಿ ಚರ್ಚೆ ಆಗಲಿಲ್ಲ, ಸುವರ್ಣಸೌಧ ಒಂದು ರೀತಿ ದೆವ್ವದ ಮನೆಯಾಗಿದೆ,ಒಬ್ಬ ರಾಜಕಾರಣಿ, ಮಂತ್ರಿ ಹೋಗಲ್ಲ ಸರಿಯಾದ ಕಾರ್ಯಾಲಯ ಇಲ್ಲ,ಇದು ಕನ್ನಡಿಗರಿಗೆ ಮಾಡಿದ ದ್ರೋಹ ಎಂದು ವಾಟಾಳ್ ಆರೋಪಿಸಿದರು.
ಎಂಇಎಸ್‌ಗೆ ಬೆಳಗಾವಿ ಜಿಲ್ಲಾಡಳಿತ ಮಣೆ ಹಾಕಿ ಗೌರವ ಕೊಡ್ತಿದೆ, ಯಡಿಯೂರಪ್ಪ ಗೆ ಕರ್ನಾಟಕದ ಗಡಿ ಸಮಸ್ಯೆ ಗಡಿನಾಡಿನ ಪರಿಸ್ಥಿತಿ ಬೇಕಾಗಿಲ್ಲ, ಯಡಿಯೂರಪ್ಪ ಅತ್ಯಂತ ಕೆಳಮಟ್ಟದ ಸಿಎಂ, ಕರ್ನಾಟಕದ ಇತಿಹಾಸದಲ್ಲಿ ಇಂತಹ ಸಿಎಂ ಬಂದಿರಲಿಲ್ಲ,ಸಿಎಂ ಬಿಎಸ್‌ವೈ ವಿರುದ್ಧ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದರು…
ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಪ್ರತಿಭಟನೆ ನಡೆಸಿದವು, ರಾಜ್ಯದಲ್ಲಿ ಎಂಇಎಸ್, ಶಿವಸೇನೆ ನಿಷೇಧಿಸುವಂತೆ ಒತ್ತಾಯ ಮಾಡಿದ್ರು, ಕನ್ನಡ ಬಾವುಟ ಹಿಡಿದು ಕರ್ನಾಟಕ ಮಹಾರಾಷ್ಟ್ರ ಗಡಿ ನುಗ್ಗಲು ಹೊರಟವರಿಗೆ ತಡೆಯಲಾಯುತು. ಚನ್ನಮ್ಮ ವೃತ್ತದಲ್ಲಿಯೇ ತಡೆದು ವಾಟಾಳ್ ನಾಗರಾಜ್ ಅವರನ್ನು ಪೋಲೀಸರು ವಶಕ್ಕೆ ಪಡೆದರು. ಗಡಿಗೆ ಹೋಗಲು ಏಕೆ ಬಿಡ್ತಿಲ್ಲ ಎಂದು ಪೊಲೀಸರ ಜೊತೆ ವಾಗ್ವಾದ ಮಾಡಿದ ವಾಟಾಳ್ ರಸ್ತೆ ಮೇಲೆ ಕುಳಿತು ಧರಣಿ ನಡೆಸಿದರು. ವಾಟಾಳ್ ನಾಗರಾಜ್ ಹೊತ್ತುಕೊಂಡು ವಾಹನದಲ್ಲಿ ಪೋಲೀಸರು ಕರೆದೊಯ್ದರು.
ಸಿಡಿ ವಾಟಾಳ್ ಸಿಡಿಮಿಡಿ…
ಸದನದಲ್ಲಿ ‘ಸಿಡಿ’ ಚರ್ಚೆ ವಿಚಾರವಾಗಿ ಗರಂ ಆದ ವಾಟಾಳ್ ನಾಗರಾಜ್, 25 ದಿನ ಬಳಿಕ ಈಗೇಕೆ ‘ಸಿಡಿ’ ಪ್ರಕರಣ ಚರ್ಚೆ ಕೈಗೊಂಡ್ರಿ’,ಎಂದು ವಾಟಾಳ್ ನಾಗರಾಜ್ ಪ್ರಶ್ನೆ ಮಾಡಿದ್ರು.
ಸದನದಲ್ಲಿ ಚರ್ಚೆ ನಡೆಯುವ ವಿಧಾನ ಹದಗೆಟ್ಟಿ ಹೋಗಿದೆ ವಿಧಾನಸಭೆ ಕಲಾಪದಲ್ಲಿ ಪ್ರಾಮಾಣಿಕವಾದ ಚರ್ಚೆ ನಡಿತೀಲ್ಲ, ಸಿಡಿಯಲ್ಲಿದ್ದ ಯುವತಿ ಸಿಕ್ಕಿಲ್ಲ ನಮ್ಮನ್ನ ಹಿಡಿಯಲು ಗಡಿಭಾಗಕ್ಕೆ ಬರ್ತಾರೆ, ಆ ಹೆಣ್ಣು ಮಗಳನ್ನು ಹಿಡಿಯಲು ಆಗದಿದ್ದರೆ ಇವರಿನ್ನೇನು ಮಾಡ್ತಾರೆ?, ಕನ್ಮಡ ಬಾವುಟ ಹಿಡಿದು ನಾವು ಗಡಿಯೊಳಗೆ ಹೋಗ್ತೇವೆ, ಐಡಿ, ಪೊಲೀಸ್ ಎಲ್ಲಾ ಸಿಡಿ ಜೊತೆ ಇದ್ದಾರೆ, ಇವರಿಗೆ ರಾಜ್ಯ ಬೇಕಿಲ್ಲ, ಅದೆಲ್ಲೋ ಮಧ್ಯಪ್ರದೇಶ ರಾಜಸ್ಥಾನ ಹೋಗ್ತಿದ್ದಾರೆ, ಬಸವರಾಜ ಬೊಮ್ಮಾಯಿ ಕೆಳಮಟ್ಟದ ಗೃಹಮಂತ್ರಿ, ಅವನಿಗೇಕೆ ಗೃಹಮಂತ್ರಿ ಕೊಟ್ಟರೋ? ಕರ್ನಾಟಕದಲ್ಲಿ ಎಂತಂತಹ ಗೃಹ ಮಂತ್ರಿಗಳು ಇದ್ದರು,ನಿಜಲಿಂಗಪ್ಪ ಸರ್ಕಾರದಲ್ಲಿ ಎಂ.ವಿ.ರಾಮರಾವ್ ರಂತ ಗೃಹಮಂತ್ರಿ ಇದ್ದರು, ಸದನದಲ್ಲಿಯೇ ಎಂ.ವಿ.ರಾಮರಾವ್ ರಾಜೀನಾಮೆ ಕೊಟ್ಟಿದ್ರು, ಹೋಮ್ ಮಿನಿಸ್ಟರ್, ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ.ಬೆಳಗಾವಿ ಪೊಲೀಸರು ಎಂಇಎಸ್ ಶಿವಸೇನೆಗೆ ಹೆದರ್ತಾರೆ,ನಾವು ಇದರ ವಿರುದ್ಧ ಹೋರಾಟ ಮಾಡ್ತೇವೆ ಎಂದ ವಾಟಾಳ್ ಎಚ್ಚರಿಕೆ ನೀಡಿದ್ರು..
ರಮೇಶ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣ,25 ದಿನ ಮಾತನಾಡದವರು ಈಗ ಸಿಡಿ ಚರ್ಚೆ ಶುರು ಮಾಡಿದ್ದಾರೆ. ಸದನದಲ್ಲಿ ಶಿವಸೇನೆ, ಎಂಇಎಸ್ ಪುಂಡಾಟಿಕೆ ಬಗ್ಗೆ ಮಾತನಾಡಿಲ್ಲ ಯಡಿಯೂರಪ್ಪ ಏನೂ ಗೊತ್ತಿಲ್ಲದ ಮಂಗನ ರೀತಿ ವರ್ತಿಸುತ್ತಿದ್ದಾರೆ, ಇಂದು ಪಾರ್ಲಿಮೆಂಟ್ ನಲ್ಲಿ ಕನ್ನಡ ಬಗ್ಗೆ, ಈ ಅನ್ಯಾಯ ಬಗ್ಗೆ ಮಾತನಾಡೋರಿಲ್ಲ,ಅಂತ ಒಬ್ಬ ಶಕ್ತಿವಂತ ಪಾರ್ಲಿಮೆಂಟ್ ಗೆ ನಿಲ್ಲಬೇಕು, ಕನ್ನಡಿಗರು ತೀರ್ಮಾನಕ್ಕೆ ಬಂದು ಒಬ್ಬನನ್ನು ಚುನಾವಣೆಗೆ ನಿಲ್ಲಿಸಬೇಕು, ಇಲ್ಲಿ ಎಲ್ಲ ಕನ್ನಡಪರ ಸಂಘಟನೆ ನಿರ್ಧರಿಸಿದ್ರೆ ಒಬ್ನ ಅಭ್ಯರ್ಥಿ ನಿಲ್ಲಿಸಿದ್ರೆ ಅವರ ಪ್ರಚಾರಕ್ಕೆ ಸಿದ್ಧ ಎಂದು ವಾಟಾಳ್ ಹೇಳಿದ್ರು..
ವಿಧಾನಸಭೆ ಚುನಾವಣೆಗೆ ಕಡಿಮೆ ಅಂದ್ರೆ 25 ಕೋಟಿ, ಪಾರ್ಲಿಮೆಂಟ್ ಗೆ 50 ಕೋಟಿ ಖರ್ಚಾಗುತ್ತೆ, ಉಪಚುನಾವಣೆ ಗೆ 100 ಕೋಟಿ ರೂ. ಹೋಗಬಹುದು, ಉಪಚುನಾವಣೆ ಒಂದ್ ರೀತಿ ಇದು ಪಿಡಬ್ಲ್ಯೂಡಿ ಹರಾಜು ಎಂದ ವಾಟಾಳ್ ನಾಗರಾಜ್ ಲೇವಡಿ ಮಾಡಿದ್ರು..
ಲೋಕಸಭೆಯಲ್ಲಿ ಈ ಬಗ್ಗೆ ಮಾತನಾಡುವ ಒಬ್ಬ ಸದಸ್ಯನಿಲ್ಲ ಮಹಾರಾಷ್ಟ್ರದ ಗಡಿಗೆ ನುಗ್ಗಬೇಕು ಎಂಬುದು ನಮ್ಮ ಕಾರ್ಯಕ್ರಮ, ಮಹಾರಾಷ್ಟ್ರದ ಸೊಲ್ಲಾಪುರ ಕರ್ನಾಟಕಕ್ಕೆ ಸೇರಲೇಬೇಕು, ಸೊಲ್ಲಾಪುರದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಡಬೇಕು ಕನ್ನಡಿಗರ ಮೇಲಾಗುವ ದಾಂಧಲೆ ನಿಲ್ಲಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದ್ರು.
ಬೆಳಗಾವಿ ಉಪಚುನಾವಣೆ ನಿಲ್ಲಲು ನನಗೆ ಮನಸ್ಸಿಲ್ಲ
ಉಪಚುನಾವಣೆ ಒಂದು ರೀತಿ ದರೋಡೆ, ಕನ್ನಡಿಗರು ಒಂದಾಗಿ ಜಾತಿ, ಹಣ, ಎಲ್ಲಾ ಪಕ್ಷ ವಿರುದ್ಧ ಒಂದು ತೀರ್ಮಾನ ಕ್ಕೆ ಬರಲಿ, ಕನ್ನಡ ಎಂಬ ಹೆಸರಲ್ಲಿ ಅಭ್ಯರ್ಥಿ ನಿಂತ್ರೆ ನಾನು ಬೆಂಬಲಿಸುವೆ, ಜೇಬಲ್ಲಿ ದುಡ್ಡಿಲ್ಲ, ಎಲ್ಲಿ ಚುನಾವಣೆ ನಿಲ್ಲಲು ಚಿಂತನೆ ಮಾಡಲಿ, ಯಡಿಯೂರಪ್ಪ ಪ್ರಚಂಡ ರಾವಣ ಇದ್ದಂಗೆ, ಕನ್ನಡ ಹಿತಕ್ಕಾಗಿ ಅಲ್ಲ ತನ್ನ ಸ್ವಂತಕ್ಕೆ ಅಧಿಕಾರ ಉಳಿಸಿಕೊಳ್ಳಲು ಅವರು ಪರದಾಡುತ್ತಿದ್ದಾರೆ ಎಂದು ವಾಟಾಳ್ ಲೇವಡಿ ಮಾಡಿದ್ರು..