ಬೆಳಗಾವಿಯಲ್ಲಿ ವೀಣಾ ಕಾಶಪ್ಪನವರ ಅವಾಜ್…..
ಬೆಳಗಾವಿ-ದೇಶದ ಸೈನಿಕರನ್ನು ಇಟ್ಟುಕೊಂಡು ಬಿಜೆಪಿ ಆಡಳಿತ ನಡೆಸುತ್ತಿದೆ,ರೈತ ವಿರೋಧಿ, ಜನ ವಿರೋಧಿ ನೀತಿ ಜಾರಿ ಮಾಡಿ ದೇಶದ ಜನತೆಯ ತುಳಿಯುವ ಹುನ್ನಾರ ಮಾಡುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಮಹಿಳಾ ನಾಯಕಿ ವೀಣಾ ಕಾಶಪ್ಪನವರ ಆರೋಪಿಸಿದ್ದಾರೆ.
ಬೆಳಗಾವಿಯಲ್ಲಿ,ಪತ್ರಿಕಾಗೋಷ್ಠಿ ನಡೆಸಿದ ಅವರು,ರಾಜ್ಯ ಸರ್ಕಾರದ ಬಜೆಟ್ ಯಾರಗೂ ಅನುಕೂಲವಾಗಿಲ್ಲ, ರಾಜ್ಯ ಸರ್ಕಾರ ಶೇ.50 ಕಮಿಷನ್ ಸರ್ಕಾರವಾಗಿದೆ. ರಾಜ್ಯದ ಬಿಜೆಪಿ ಸಚಿವರಲ್ಲಿ ಹೊಂದಾಣಿಕೆ ಕೊರತೆ ಇದೆ, ಎಂದು ಬೆಳಗಾವಿಯಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ವೀಣಾ ಕಾಶಪ್ಪನವರ ವಾಗ್ದಾಳಿ ಮಾಡಿದ್ರು.
ಬಿಜೆಪಿ ಸರ್ಕಾರ ನೋಡಿದ್ರೆ ಪತನವಾಗುದ್ರಲ್ಲಿ ಎರಡು ಮಾತಿಲ್ಲ,ಉಪ ಚುನಾವಣೆಯ ಬಳಿಕ ರಾಜ್ಯ ಬಿಜೆಪಿ ಸರ್ಕಾರ ಪತನಗೊಳ್ಳುತ್ತದೆ ಎಂದು ವೀಣಾ ಹೊಸ ಬಾಂಬ್ ಸಿಡಿಸಿದ್ರು, ಸಾಕಷ್ಟು ವೈಫಲ್ಯಗಳು ನೀಡಿದ ಬಿಜೆಪಿ ಸರ್ಕಾರಕ್ಕೆ ಯಾವುದೇ ನೈತಿಕತೆ ಇಲ್ಲ, ಜನರ ಮೇಲೆ ದಬ್ಬಾಳಿಕೆಯಾಗ್ತಿದೆ, ಸಿಎಂ ಯಾಕೆ ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ. ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ಮೀಣಾ ಕಾಶಪ್ಪನವರ ಕಿಡಿಕಾರಿದರು.
ಬೆಳಗಾವಿ ಲೋಕಸಭಾ ಕ್ಷೇತ್ರ ಬೈ ಎಲೆಕ್ಷನ್ ಕೇಂದ್ರದ ವಿಫಲತೆಗಳನ್ನು ನೋಡಿ ಮತ ಹಾಕ್ತಾರೆ, ಸತೀಶ ಜಾರಕಿಹೊಳಿ ಎರಡ್ಮೂರು ಲಕ್ಷ ಮತಗಳ ಅಂತರ ಗೆಲವು ಸಾಧಿಸುತ್ತಾರೆ.ಲೋಕಸಭಾ ಉಪಚುನಾವಣೆ ಬೆಳಗಾವಿಯಿಂದ ಹೊಸ ಇತಿಹಾಸ ಬರೆದಿದೆ,ಸಂಸತ್ತಿನಲ್ಲಿ ಬೆಳಗಾವಿ ಜನರ ಧ್ವನಿಯಾಗಲು ಸತೀಶ್ ಜಾರಕಿಹೊಳಿ ಅವರಿಗೆ ಮತದಾರರು ಅವಕಾಶ ನೀಡಬೇಕು,ಕೇಂದ್ರ ಸರ್ಕಾರದ ದುರಾಡಳಿತಕ್ಕೆ ತಕ್ಕ ಪಾಠ ಕಲಿಸಬೇಕು, ಸಾಮಾನ್ಯ ಜನರಿಗೆ ಬದುಕುವ ಸ್ಥಿತಿ ಮರಳಬೇಕೆಂದ್ರೆ ಬೆಳಗಾವಿಯಲ್ಲಿ ಕಾಂಗ್ರೆಸ್ ಜಯಭೇರಿ ಆಗಬೇಕು,ಕೇಂದ್ರದಲ್ಲೂ ಕೂಡ ಮುಂದಿನ ಬಾರಿ ಯುಪಿಎ ಸರ್ಕಾರ ಬರಲಿದೆ ವೀಣಾ ವಿಶ್ವಾಸ ವ್ಯೆಕ್ತಪಡಿಸಿದರು.
ಮಹಿಳಾ ಮಹಿಳಾ ರ್ಯಾಲಿಗೆ ಸಜ್ಜು
ಇದೇ 14ರಂದು ಬೆಳಗಾವಿಯಲ್ಲಿ ಮಹಿಳಾ ರ್ಯಾಲಿ ನಡೆಸಲಾಗುವುದು,ರ್ಯಾಲಿಯಲ್ಲಿ ರಾಜ್ಯದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರು ಭಾಗಿಯಾಗಲಿದ್ದಾರೆ,ರಾಲಿ ಪಾದಯಾತ್ರೆ ಮೂಲಕ ಜಿಲ್ಲೆಯ ಮತದಾರರನ್ನು ಎಚ್ಚರಿಸುವ ಕಾರ್ಯ ಮಾಡಲಿದ್ದೇವೆ.ಎಂದುಕಾಂಗ್ರೆಸ್ ಮಹಿಳಾ ರಾಜ್ಯ ಉಪಾಧ್ಯಕ್ಷ ವೀಣಾ ಕಾಶಪ್ಪನವರ್ ಹೇಳಿದರು.
ಪಂಚಮಸಾಲಿ…..
ಪಂಚಮಸಾಲಿ ಸಮುದಾಯ ಹೋರಾಟದ ವಿಚಾರ, ಆರು ತಿಂಗಳವರೆಗೂ ರಾಜ್ಯ ಸರ್ಕಾರ ಗಡವು ಕೊಟ್ಟಿದೆ,ಅಲ್ಲಿಯವರೆಗೆ ಕಾಯ್ತಿವಿ,ಆರು ತಿಂಗಳವರೆಗೂ ಹೋರಾಟ ಮುಂದುವರೆಯುತ್ತದೆ,
ಕೊಟ್ಟ ಮಾತಿಗೆ ರಾಜ್ಯ ಸರ್ಕಾರ ತಪ್ಪಿದರೆ ಉಗ್ರ ಹೋರಾಟ ಮಾಡುತ್ತೇವೆ. 20 ಲಕ್ಷ ಜನಸಂಖ್ಯೆಯೊಂದಿಗೆ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಮಾಡುತ್ತೇವೆ. ಪಂಚಮಸಾಲಿ ಶ್ರೀಗಳು ಹಾಗೂ ರಾಷ್ಟ್ರಾಧ್ಯಕ್ಷರ ತೀರ್ಮಾನದ ಬಳಿಕ ಸಮಾವೇಶ ಮಾಡಲಾಗುವುದು.
ಸರಕಾರದ ನೀಡಿದ ಅವಧಿಯೊಳಗೆ ಪಂಚಮಸಾಲಿ 2ಎ ಮೀಸಲಾತಿ ವಿಶ್ವಾವಿದೆ ಎಂದುಸುದ್ದಿಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ವೀಣಾ ಕಾಶಪ್ಪನವರ್ ಹೇಳಿದರು ಶಾಸಕಿ ಅಂಜಲಿ ನಿಂಬಾಳ್ಕರ್, ಕಾಂಗ್ರೆಸ್ ಮಹಿಳಾ ಘಟಕದ ಹಲವು ಕಾರ್ಯಕರ್ತೆಯರು ಮಾಧ್ಯಮಗೋಷ್ಠಿಯಲ್ಲಿ ಬಾಗಿಯಾಗಿದ್ದರು.