ಬೆಳಗಾವಿ- ಸರ್ಕಾರದ ಕಾರ್ಯಕ್ರಮ ಯಾವುದೇ ಇರಲಿ ಅದನ್ನು ದಾಖಲೆ ಪ್ರಮಾಣದಲ್ಲಿ ಬೆಳಗಾವಿ ಜಿಲ್ಲಾಡಳಿತ ಅನುಷ್ಠಾನಗೊಳಿಸುತ್ತ ಬಂದಿದ್ದು, ಈಗ ಮಕ್ಕಳಿಗೆ ವ್ಯಾಕ್ಸೀನ್ ಕೊಡುವ ವಿಚಾರದಲ್ಲೂ ಬೆಳಗಾವಿ ಜಿಲ್ಲೆ ರಾಜ್ಯದಲ್ಲೇ ದಾಖಲೆ ಮಾಡಿದ್ದು ನಂಬರ್ ಒನ್ ಸ್ಥಾನ ಪಡೆದಿದೆ.
15 ರಿಂದ 18 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡುವ ವಿಚಾರದಲ್ಲಿ,ಮಕ್ಕಳ ಲಸಿಕಾಕರಣ ಅಭಿಯಾನದಲ್ಲಿ ಬೆಳಗಾವಿ ಜಿಲ್ಲಾಡಳಿತ ದಾಖಲೆ ಮಾಡಿದ್ದು,ಮಕ್ಕಳ ಲಸಿಕಾಕರಣ ಅಭಿಯಾನಕ್ಕೆ ಬೆಳಗಾವಿಯಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
*ನಿನ್ನೆ ಒಂದೇ ದಿನ 60,252 ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗಿದೆ.235 ವಿಶೇಷ ಕೇಂದ್ರಗಳನ್ನು ತೆರೆದು,ಬೆಳಗಾವಿ ಜಿಲ್ಲೆಯ ಒಟ್ಟು 60,252 ಮಕ್ಕಳಿಗೆ ಲಸಿಕೆ ನೀಡಲಾಗಿದೆ.ನಿನ್ನೆ ಒಂದೇ ದಿನ 41,880 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಿದ್ದ ಜಿಲ್ಲಾಡಳಿತ,ಗುರಿ ದಾಟಿ ದಾಖಲೆ ಮಾಡಿದೆ
ಬೆಳಗಾವಿಯಲ್ಲಿ ಒಟ್ಟು 2 ಲಕ್ಷ 47 ಸಾವಿರ ಮಕ್ಕಳಿಗೆ ಲಸಿಕೆ ನೀಡುವ ಗುರಿ ಇದೆ ಈ ಗುರಿಯನ್ನು,ಒಂದು ವಾರದಲ್ಲಿ ರೀಚ್ ಆಗ್ತೀವಿ ಎಂದು ಅಧಿಕಾರಿಗಳು ವಿಶ್ವಾಸ ವ್ಯೆಕ್ತ ಪಡಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ