Breaking News

ಗಾಂಜಾ ಮಾರಾಟಕ್ಕೆ ಹ್ಯಾಂಡ್ ಬ್ರೇಕ್ ಹಾಕುತ್ತಿದೆ ಖಾಕಿ ಪಡೆ….

ಬೆಳಗಾವಿ-ಬೆಳಗಾವಿ ಮಹಾನಗರ ಗಾಂಜಾ ಮತ್ತು ಮಾದಕ ವಸ್ತುಗಳ ಮಾರಾಟದಿಂದ ಸಂಪೂರ್ಣವಾಗಿ ಮುಕ್ತವಾಗಬೇಕು ಎನ್ನುವ ಸಂಕಲ್ಪ ಮಾಡಿರುವ ಬೆಳಗಾವಿ ಡಿಸಿಪಿ ವಿಕ್ರಂ ಅಮಟೆ ಅವರು ಬೆಳಗಾವಿ ನಗರದಲ್ಲಿ ಎಡೆಬಿಡದೆ ದಾಳಿಗಳನ್ನು ಮಾಡುವ ಮೂಲಕ ಗಾಂಜಾ ಮಾರಾಟಕ್ಕೆ ಹ್ಯಾಂಡ್ ಬ್ರೇಕ್ ಹಾಕುತ್ತಿದ್ದಾರೆ.

ನಿನ್ನೆ ರಾತ್ರಿ ಡಿಸಿಪಿ ವಿಕ್ರಂ ಅಮಟೆ ಅವರ ಮಾರ್ಗದರ್ಶನ ದಲ್ಲಿ ಮಾರ್ಕೆಟ್ ಎಸಿಪಿ ಕಟ್ಟೀಮನಿ ಬೆಳಗಾವಿ ನಗರದ ಶಹಾಪೂರ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದಾಳಿ ಮಾಡಿ ಓರ್ವ ಆರೋಪಿಯನ್ನು ಬಂಧಿಸಿ ಸುಮಾರು ಒಂದುವರೆ ಕೆ.ಜಿ ಗಾಂಜಾ ವಶಪಡಿಸಿಕೊಂಡೊದ್ದಾರೆ.

ಬೆಳಗಾವಿಯ ಯಡಿಯೂರಪ್ಪ ಮಾರ್ಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಜ್ಞಾನೇಶ್ವರ ಪಾಟೀಲ 22  ಸಾ ಧಾಮಣೆ ಎಂಬಾತನನ್ನು ಬಂಧಿಸಿ ಸುಮಾರು ಒಂದುವರೆ ಕೆ.ಜಿ ಯಷ್ಟು ಗಾಂಜಾ ವಶಪಡಿಸಿಕೊಂಡಿದ್ದು ತನಿಖೆ ಮುಂದುವರೆದಿದೆ.

ಒಟ್ಟಾರೆ ಬೆಳಗಾವಿ ಪೋಲೀಸರು,ಮಟಕಾ,ಜೂಜಾಟ,ಗಾಂಜಾ ವಿರುದ್ಧ ದೊಡ್ಡ ಹೋರಾಟವನ್ನೇ ಮಾಡುತ್ತಿದ್ದು,ಡಿಸಿಪಿ ವಿಕ್ರಂ ಅಮಟೆ ಅವರು ನಿರಂತರವಾಗಿ ದಾಳಿಗಳನ್ನು ನಡೆಸುತ್ತಲೇ ಇದ್ದಾರೆ.

ನಿಮ್ಮ ಏರಿಯಾದಲ್ಲಿ ಯಾರಾದ್ರೂ ಗಾಂಜಾ ಮಾರಾಟ,ಜೂಜಾಟ ನಡೆಸುತ್ತಿದ್ದರೆ,ಅಥವಾ ಇನ್ಯಾವುದೋ ಮಾದಕ ವಸ್ತುಗಳ ಮಾರಾಟ ನಡೆಸುವುದು ಕಂಡರೆ,ಮಟಕಾ ದಂಧೆಯನ್ನು ಯಾರಾದ್ರೂ ನಡೆಸುತ್ತಿದ್ದರೆ ಕೂಡಲೇ ಡಿಸಿಪಿ ವಿಕ್ರಂ ಅಮಟೆ ಅವರನ್ನು ಸಂಪರ್ಕ ಮಾಡಿ ಪೋಲೀಸರ ಈ ಮಹತ್ವದ ಕಾರ್ಯಾಚರಣೆಗೆ ಸಾರ್ವಜನಿಕರೂ ಸಹಕಾರ ನೀಡುವದು ಅತ್ಯಗತ್ಯವಾಗಿದೆ.

Check Also

ಬೆಳಗಾವಿ ಜಿಲ್ಲೆಯ ರೇಲ್ವೆ ಸಮಸ್ಯೆಗಳ ಪರಿಹಾರಕ್ಕೆ ಹುಬ್ಬಳ್ಳಿಯಲ್ಲಿ ಮೀಟಿಂಗ್

ಬೆಳಗಾವಿ – ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿಗಳಾದ ಜಗದೀಶ ಶೆಟ್ಟರ, ಇವರು ಇಂದು …

Leave a Reply

Your email address will not be published. Required fields are marked *