ಬೆಳಗಾವಿ-ಕರ್ನಾಟಕದ ಗಡಿಯಲ್ಲಿ ನುಗ್ಗಿ ಪುಂಡಾಟಿಕೆ ಪ್ರದರ್ಶಿಸಲು ಮುಂದಾಗಿದ್ದ ಮಹಾರಾಷ್ಟ್ರದ 8 ಜನ ಶಿವಸೇನೆ ನಾಯಕರ ವಿರುದ್ಧ ಬೆಳಗಾವಿಯ ಕಾಕತಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿವಸೇನೆ ಅದ್ಯಕ್ಷ ವಿಜಯ ದೇವಣೆ ಸೇರಿದಂತೆ ಒಟ್ಟು 8 ಜನ ಶಿವಸೇನೆಯ ನಾಯಕರ ವಿರುದ್ಧ ಪ್ರಕರಣ ದಾಖಲಾಗಿದ್ದು,ಬೆಳಗಾವಿಗೆ ಬಂದು ಪುಂಡಾಟಿಕೆ ಮಾಡಿ ಹೋದರೆ ಯಾರೂ ಏನೂ ಮಾಡುವದಿಲ್ಲ ಎಂದು ತಿಳಿದುಕೊಂಡಿದ್ದ ಶಿವಸೇನೆಯ ನಾಯಕರಿಗೆ ಬೆಳಗಾವಿ ಪೋಲೀಸರು ಶಾಕ್ ಕೊಟ್ಟಿದ್ದಾರೆ.
1986 ರಲ್ಲಿ ಆಗಿನ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯಾಗಿದ್ದ ಕೆ ನಾರಾಯಣ ಅವರು ಮಹಾರಾಷ್ಟ್ರದ ಛಗನ್ ಭುಜಬಲ್ ವಿರುದ್ಧ ಬೆಳಗಾವಿಯಲ್ಲಿ ಪ್ರಕರಣ ದಾಖಲಿಸಿದ್ದರು.ಇದಾದ ಬಳಿಕ ಮಹಾರಾಷ್ಟ್ರದ ನಾಯಕರು ಬೆಳಗಾವಿಯಲ್ಲಿ ಎಷ್ಟೇ ದಾಂಧಲೆ ಮಾಡಿದ್ದರೂ ಅವರ ವಿರುದ್ಧ ಕೇಸ್ ಹಾಕುವ ದಿಟ್ಟತನ ತೋರಿಸಿರಲಿಲ್ಲ,ಆದರೆ,ಬೆಳಗಾವಿಯ ಡಿಸಿಪಿ ವಿಕ್ರಂ ಅಮಟೆ ಅವರು ಮಹಾರಾಷ್ಟ್ರದ 8 ಜನ ಶಿವಸೇನೆಯ ನಾಯಕರ ವಿರುದ್ಧ ಕೇಸ್ ಹಾಕಿ, ಖಾಕಿ ಖದರ್ ತೋರಿಸಿದ್ದಾರೆ.