ಬೆಳಗಾವಿ- ಚುನಾವಣೆಗೆ ಸ್ಪರ್ದಿಸಿದ ಅಭ್ಯರ್ಥಿಗಳು ಕೋಟಿ ಕೋಟಿ ಖರ್ಚು ಮಾಡಿ ಚಡ್ಡಿ ಹರ್ಕೋಳುವ ಜಮಾನಾದಲ್ಲಿ ಓಟು ಕೇಳಲು ಹೋದ ಅಭ್ಯರ್ಥಿಗೆ ಮತದಾರರೇ ನೋಟು ಕೊಟ್ಟು ಆತನ ಜೋಳಿಗೆ ತುಂಬಿಸುತ್ತಿರುವ ದೃಶ್ಯ ನೀವು ಖಾನಾಪೂರ ಕ್ಷೇತ್ರದಲ್ಲಿ ನೋಡಬಹುದಾಗಿದೆ
ಖಾನಾಪೂರ ಕ್ಷೇತ್ರದಿಂದ ಎಂಈಎಸ್ ಬಂಡುಖೋರ ಅಭ್ಯರ್ಥಿಯಾಗಿ ಸ್ಪರ್ದಿಸಿರುವ ವಿಲಾಸ ಬೆಳಗಾಂವಕರ ಅವರು ಕ್ಷೇತ್ರದಲ್ಲಿ ಮತಯಾಚನೆ ಮಾಡಲು ಹೋದ ಸಂಧರ್ಭದಲ್ಲಿ ಮತದಾರರು ನಮ್ಮ ದುಡ್ಡಿನಲ್ಲೇ ಇಲೆಕ್ಷನ್ ಮಾಡಿ ಎಂದು ನೂರು ,ಐನೂರು,ಸಾವಿರದ ನೋಟುಗಳನ್ನು ಅಭ್ಯರ್ಥಿ ಬೆಳಗಾಂಕರ ಜೋಳಿಗೆಗೆ ಹಾಕಿ ದಿನನಿತ್ಯ ಜೋಳಿಗೆ ಫುಲ್ ಮಾಡಿ ಕಳಿಸುತ್ತಿರುವ ದೃಶ್ಯ ನಿಮಗೆ ಖಾನಾಪೂರದಲ್ಲಿ ಮಾತ್ರ ಸಿಗುತ್ತದೆ
ವಿಲಾಸ ಬೆಳಗಾಂಕರ ಎಂಈಎಸ್ ಬಂಡುಖೋರ ಅಭ್ಯರ್ಥಿಯಾದರೂ ಸರಳ ಸಜ್ಜನಿಕೆಯ ವ್ಯೆಕ್ತಿ ಗಡಿ ವಿವಾದದ ಹೋರಾಟಕ್ಕಾಗಿ ಮಾಸ್ತರ್ ನೋಕರಿ ಬಿಟ್ಟಿರುವ ಆಸಾಮಿ ಹಲವಾರು ದಶಕಗಳಿಂದ ಎಂಈಎಸ್ ಹೋರಾಟದಲ್ಲಿರುವ ವಿಲಾಸ ಬೆಳಗಾಂವಕರ ತನ್ನ ಚಾರಿತ್ರ್ಯ ಕೆಡಿಸಿಕೊಂಡಿಲ್ಲ ಎಲ್ಲರ ಜೊತೆ ನಯ ವಿನಯದಿಂದ ಮಾತನಾಡಿಸಿ ಬಡವರ ಸೇವೆ ಮಾಡುತ್ತರುವ ವಿಲಾಸ ಬೆಳಗಾಂವಕರಗೆ ಕ್ಷೇತ್ರದ ಜನ ನೋಟು ಕೊಟ್ಟು ಜೊತೆಗೆ ಓಟು ಕೊಡುವ ವಾಗ್ದಾಣ ಮಾಡುತ್ತಿದ್ದಾರೆ
ಖಾನಾಪೂರ ಕ್ಷೇತ್ರದಿಂದ ಕೋಟಿ ಒಡೆಯರು ಸ್ಪರ್ದಿಸಿದ್ದಾರೆ ಜೆಡಿಎಸ್ ಪಕ್ಷದಿಂದ ಕುಬೇರ ನಾಸೀರ ಬಾಗವಾನ್,ಕಾಂಗ್ರೆಸ್ ಪಕ್ಷದಿಂದ ಕೋಟಿ ಒಡೆತಿ ಅಂಜಲಿ ನಿಂಬಾಳ್ಕರ್ ಸ್ಪರ್ದೆ ಮಾಡಿದ್ದು ಕೋಟಿ ಕುಬೇರರು ಸ್ಪರ್ದಿಸಿರುವ ಕ್ಷೇತ್ರದಲ್ಲಿ ಅಭ್ಯರ್ಥಿಯೊಬ್ನ ಜೋಳಿಗೆಗೆ ಮತದಾರರ ನೋಟು ಹಾಕುತ್ತಿರುವದರಿಂದ ಖಾನಾಪೂರ ಕ್ಷೇತ್ರದಲ್ಲಿ ರಾಮರಾಜ್ಯದ ಪರಿಕಲ್ಪನೆ ಶುರುವಾಗಿದೆ
ಇದೇ ವಿಲಾಸ ಬೆಳಗಾಂವಕರ ಖಾನಾಪೂರದ ಮಾಜಿ ಶಾಸಕ ಅಶೋಕ ಪಾಟೀಲ ಅವರನ್ನು ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಸೋಲಿಸಿದ್ದರು ಆದರೆ ಈ ಚುನಾವಣೆಯಲ್ಲಿ ಬೆಳಗಾಂವಕರ ಯಾರಿಗೆ ಗೆಲ್ಲಿಸುತ್ತಾರೆ ಯಾರಿಗೆ ಸೋಲಿಸುತ್ತಾರೆ ಕಾದು ನೋಡಬೇಕು
ಚುನಾವಣೆಯಲ್ಲಿ ಅಭ್ಯರ್ಥಿಗಳು ಕೋಟಿ,ಕೋಟಿ ಖರ್ಚು ಮಾಡಿ ಮತದಾರರ ಕಾಲಿಗೆ ಬಿದ್ದು ಮತಯಾಚಿಸುವ ಸಂಧರ್ಭದಲ್ಲಿ ಮತದಾರರೇ ಅಭ್ಯರ್ಥಿಗೆ ದುಡ್ಡು ಕೊಟ್ಟು ಇಲೆಕ್ಷನ್ ಮಾಡುತ್ತಿರುವದು ಅಪರೂಪ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ