ಬೆಳಗಾವಿ- ವಿನಯ ಕುಲಕರ್ಣಿ ವಿರುದ್ಧ ಅಪಪ್ರಚಾರ ಮಾಡಿದ ಆರೋಪದ ಮೇಲೆ 2008 ರಲ್ಲಿ ಧಾರವಾಡದ ಮುರುಘಾಮಠದ ಮುಖ್ಯ ಪೀಠಾಧಿಪತಿ ಸ್ಥಾನದಿಂದ ಎತ್ತಂಗಡಿಯಾಗಿ ಮಠದಿಂದ ಹೊರಕಾಲ್ಪಟ್ಡಿದ್ದ ಶಿವಯೋಗಿ ಸ್ವಾಮಿಗಳು ಅನಾರೋಗ್ಯದಿಂದ ಬಳಲುತ್ತಿದ್ದು ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಾಗಿದ್ದಾರೆ
ವಿನಯ ಕುಲಕರ್ಣಿ ಅವರಿಗೆ ಮತಹಾಕಬೇಡಿ ಎಂದು ನಾನು ಹೇಳಿದೆ,ಮಠದ ಹೊಲ ಮಾರಾಟ ಮಾಡಿದೆ ,ನನಗೆ ಹೆಂಡತಿ ಮಕ್ಕಳಿದ್ದಾರೆ, ಎಂದು ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ವಿನಯ ಕುಲಕರ್ಣಿ ಗುಂಡಾಗಿರಿ ಮಾಡಿ ನನ್ನನ್ನು ಮಠದಿಂದ ಹೊರಹಾಕಿಸಿದ್ದಾರೆ ಎಂದು ಶಿವಯೋಗಿ ಸ್ವಾಮಿಗಳು ವಿನಯ ಕುಲಕರ್ಣಿ ವಿರುದ್ಧ ಅಸಮಾಧಾನ ವ್ಯೆಕ್ತ ಪಡಿಸಿದ್ದಾರೆ
ವಿನಯ ಕುಲಕರ್ಣಿಯವರು ಮಾಡಿದ ಸುಳ್ಳು ಆರೋಪ ಮತ್ತು ಗುಂಡಾಗಿರಿಯಿಂದಾಗಿ ನಾನು ಮಠ ಬಿಡುವಂತಾಯಿತು ಹತ್ತು ವರ್ಷದಿಂದ ಮಠಬಿಟ್ಟು ಅಲ್ಲಲ್ಲಿ ಬಿಕ್ಷೆ ಬೇಡಿ ಬದುಕುತ್ತಿದ್ದೇನೆ ಈಗ ನನ್ನ ಕಣ್ಣಿಗೆ ತೊಂದರೆ ಆಗಿದೆ ಚಿಕಿತ್ಸೆಗಾಗಿ ಕೆಎಲ್ಇ ಆಸ್ಪತ್ರೆಗೆ ದಾಖಲಾಗಿದ್ದೇನೆ ಭಕ್ತರು ನನಗೆ ನ್ಯಾಯ ಕೊಡಿಸಬೇಕು ಎಂದು ಶಿವಯೋಗಿ ಸ್ವಾಮಿಗಳು ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ
ಕೆಎಲ್ಇ ಆಸ್ಪತ್ರೆಯಲ್ಲಿ ಕಣ್ಣಿನ ಆಪರೇಶನ್ ಮಾಡಿಸಿಕೊಂಡಿರುವ ಶಿವಯೋಗಿ ಸ್ವಾಮಿಗಳು ನಾನು ಮತ್ತೇ ಮಠಕ್ಕೆ ಹೋಗಬೇಕು ಭಕ್ತರ ಸೇವೆ ಮಾಡಬೇಕು ಮಠ ಬಿಟ್ಡು ಹತ್ತು ವರ್ಷ ಬಿಕ್ಷೆ ಬೇಡಿದ್ದೇನೆ ವಿನಯ ಕುಲಕರ್ಣಿ ನನಗೆ ಅನ್ಯಾಯ ಮಾಡಿದ್ದಾರೆ ಭಕ್ತರು ನನಗೆ ನ್ಯಾಯ ಕೊಡಿಸಬೇಕು ಎಂದು ಧಾರವಾಡದ ಶಿವಯೋಗಿ ಸ್ವಾಮಿಗಳು ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ
ಚುನಾವಣೆಯ ಸಂಧರ್ಭದಲ್ಲಿ ಶಿವಯೋಗಿ ಸ್ವಾಮಿ ಗಳು ಪ್ರತ್ಯಕ್ಷವಾಗಿ ಸಚಿವ ವಿನಯ ಕುಲಕರ್ಣಿ ವಿರುದ್ಧ ಗರಂ ಆಗಿದ್ದು ಅನೇಕ ಸಂಶಯಗಳಿಗೆ ಕಾರಣವಾಗಿದೆ