ಬೆಳಗಾವಿ-ಬೆಳಗಾವಿಯಲ್ಲಿ ರಾಷ್ಟ್ರೀಯ ಪ್ರತಿನಿಧಿಗಳ ಮಹಾಸಮಾವೇಶದ ಅಂಗವಾಗಿ ಪೂರ್ವಭಾವಿ ಸಭೆ ನಡೆದಿದೆ.ಸಭೆ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ಕುರುಬ ನಾಯಕರ ಜಂಟಿ ಸುದ್ದಿಗೋಷ್ಠಿ ನಡೆಸಿ ಸಮಾವೇಶದ ಕುರಿತು ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎಚ್. ವಿಶ್ವನಾಥ್ ಮಾತನಾಡಿ,ಅಹಲ್ಯಾಬಾಯಿ ಪುಣ್ಯಸ್ಮರೆ ನಿಮಿತ್ತ ಬೃಹತ್ ಸಮಾವೇಶ ಆಯೋಜನೆ ಮಾಡಕಾಗಿದೆ.
ಶೆಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್ ಸ್ಥಾಪನೆ ಆಗಿ ಒಂಬತ್ತು ವರ್ಷ ಆಗಿದೆ.ಈ ಹಿನ್ನೆಲೆ ಅಕ್ಟೋಬರ್ 2ರಂದು ಸಂಘಟನೆಯ ರಾಷ್ಟ್ರೀಯ ಕಾರ್ಯಕಾರಣಿ ಸಭೆ ನಡೆಯಲಿದೆ.ಅಕ್ಟೋಬರ್ 3ರಂದು ಬೃಹತ್ ಸಮಾವೇಶ ಆಯೋಜನೆಗೆ ನಿರ್ಧರಿಸಲಾಗಿದೆ.
ಒಂದು ಲಕ್ಷಕ್ಕೂ ಅಧಿಕ ಸಮುದಾಯದ ಜನ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಎಂದು ವಿಶ್ವನಾಥ್ ತಿಳಿಸಿದ್ದಾರೆ.
ಸಮಾವೇಶದಲ್ಲಿಸಿಎಂ ಸಿದ್ದರಾಮಯ್ಯನವರು, ಸಚಿವ ಸತೀಶ ಜಾರಕಿಹೊಳಿ,ಲಕ್ಷ್ಮೀಹೆಬ್ಬಾಳ್ಕರ್ಭಾಗಿಯಾಗ್ತಾರೆ.ಪಕ್ಷಾತೀತವಾಗಿ ಎಲ್ಲ ನಾಯಕರು ಸಮಾವೇಶದಲ್ಲಿಭಾಗಿಯಾಗಲಿದ್ದಾರೆ.ದೇಶದ ವಿವಿಧ ಭಾಗಗಳಿಂದ ಸಮುದಾಯದ ನಾಯಕರು ಆಗಮಿಸಲಿದ್ದಾರೆ.ಬೆಳಗಾವಿ ನಗರದ ಸಿಪಿಎಡ್ ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಇಡೀ ದೇಶದಲ್ಲಿ ವಿವಿಧ ಹೆಸರುಗಳಲ್ಲಿ 12ಕೋಟಿ ಕುರುಬ ಸಮುದಾಯದ ಜನ ಇದ್ದಾರೆ.ಬೆಳಗಾವಿ ಸಮಾವೇಶಕ್ಕೂ ಮುಂದೆ ಬರುವ ಲೋಕಸಭಾ ಚುನಾವಣೆಗೂ ಸಂಬಂಧ ಇಲ್ಲ ಎಂದ ವಿಶ್ವನಾಥ ಹೇಳಿದ್ದಾರೆ.