Breaking News

ಅತ್ಯಾಚಾರಿಗಳ ಎನ್ ಕೌಂಟರ್ ಮಾಡಿದ ವಿಶ್ವನಾಥ ಸಜ್ಜನ ಅವರ ಹುಬ್ಬಳ್ಳಿ ಮನೆಯಲ್ಲಿ ಸಂಬ್ರಮ

ಹುಬ್ಬಳ್ಳಿ-ಹುಬ್ಬಳ್ಳಿಯ ಖ್ಯಾತಿ ದೇಶಾದ್ಯಂತ ಎಲ್ಲೆಡೆಯೂ ಪಸರಿಸುತ್ತಿದೆ. ಹೈದರಾಬಾದ್ ಪಶುವೈದ್ಯೆ ಅತ್ಯಾಚಾರ ಕೊಲೆ ಪ್ರಕರಣದ ಆರೋಪಿಗಳನ್ನು ಎನ್ ಕೌಂಟರ್ ಮಾಡಿರುವ ವಿಶ್ವನಾಥ ಸಜ್ಜನವರ ಸಾಹಸಕ್ಕೆ ಗಂಡು ಮೆಟ್ಟಿದ ನಾಡಿನ ಕೀರ್ತಿಯನ್ನು ಹೆಚ್ವಿಸಿದ್ದು, ಸಜ್ಜನರ್ ಅವರ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ ಸಜ್ಜನವರ ಸಂಬಂಧಿಗಳು ಆಪ್ತರು ಅವರ ಮನೆಗೆ ಆಗಮಿಸಿ ಶುಭಕೋರುವ ದೃಶ್ಯಗಳು ಸಾಮಾನ್ಯವಾಗಿವೆ.
ಮನೆಯಿಂದಲೇ ವಿಶ್ವನಾಥ ಸಜ್ಜನವರ ಸಾಹಸಕ್ಕೆ ಹೆಚ್ಚಿನ ಪ್ರಶಂಸೆ ಹಾಗೂ ಕರ್ತವ್ಯ ಪ್ರೋತ್ಸಾಹ ದೊರೆತಿರುವುದು ಶ್ಲಾಘನೀಯವಾಗಿದೆ. ಇತಿಹಾಸದಲ್ಲಿಯೇ ಇಂತಹ ಮಹತ್ವದ ಕರ್ತವ್ಯ ನಿರ್ವಹಿಸಿರುವ ವಿಶ್ವನಾಥ ಸಜ್ಜನವರು ನಮ್ಮ ಹುಬ್ಬಳ್ಳಿಯವರು ಎಂಬುವುದು ನಮ್ಮ ಹೆಮ್ಮೆ

ಹುಬ್ಬಳ್ಳಿ ಮೂಲದ ಐಪಿಎಸ್ ಅಧಿಕಾರಿ ವಿಶ್ವನಾಥ ಸಜ್ಜನರತಂದೆ ಚನ್ನಪ್ಪ ಸಜ್ಜನರ್, ತಾಯಿ ಗಿರಿಜಮ್ಮ ಸಜ್ಜನರ್.ಮೂರು ಜನ ಅಣ್ಣತಮ್ಮಂದಿರಲ್ಲಿ
ಮೂರನೇಯ ಮಗ ವಿಶ್ವನಾಥ ಸಜ್ಜನರ್. ಮೂವರು ಸಹೋದರರ ಪೈಕಿ ವಿಶ್ವನಾಥ ಕೊನೆಯವರು.ಇವರ ಇನ್ನೊಬ್ಬ ಸಹೋದರ ಪ್ರಕಾಶ ಸಜ್ಜನರ ಹುಬ್ಬಳ್ಳಿಯಲ್ಲಿ ವೈದ್ಯರಿದ್ದು,ಪಗಡಿ ಓಣಿಯಲ್ಲಿ ಆಸ್ಪತ್ರೆ ಹೊಂದಿದ್ದಾರೆ.

ಬಾಲ್ಯದಲ್ಲಿಯೇ ತಾಯಿಯನ್ನ ಕಳೆದುಕೊಂಡ ವಿಶ್ವನಾಥ ಸಜ್ಜನರು,ಚಿಕ್ಕಮ್ಮ ಮಲ್ಲಮ್ಮ ಸಜ್ಜನರ ಅವರ ಮಡಿಲಲ್ಲಿ ಬೆಳೆದಿದ್ದಾರೆ.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ- ಲೈನ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ವಿಜಯನಗರ ಹುಬ್ಬಳ್ಳಿಯಲ್ಲಿ ಪೂರ್ಣಗೊಳಿಸಿ.ಪಿಯುಸಿ-ಪದವಿ ಜಗದ್ಗುರು ಗಂಗಾಧರ ಕಾಮರ್ಸ್ ಕಾಲೇಜು ವಿದ್ಯಾನಗರ ಹುಬ್ಬಳ್ಳಿಯಲ್ಲಿ ವ್ಯಾಸಂಗ ಮಾಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ‌ ಮುಗಿಸಿ ಹೈದ್ರಾಬಾದ್ ನಲ್ಲಿ ಐ ಎಎಸ್ ಕೋಚಿಂಗ್ ಪಡೆದಿದ್ದಾರೆ. 1996 ರಲ್ಲಿ ಯುಪಿಎಸ್‌ಸಿ ತೇರ್ಗಡೆ.
ಡಿವೈಎಸ್‌ಪಿ ಆಗಿ ಆಂದ್ರಪ್ರದೇಶದ ಕಡಪಾ ಜಿಲ್ಲೆಯ ಪುಲಿವಂದಲಾದಿಂದ ವೃತ್ತಿ ಜೀವನ ಆರಂಭ ಮಾಡಿದರು‌.

ಹೈದ್ರಾಬಾದ್ ಕಾಮುಕರಿಗೆ ಎನ್‌ಕೌಂಟರ್ ಪ್ರಕರಣದ ಹಿನ್ನೆಲೆಯಲ್ಲಿ ವಿಶ್ವನಾಥ ಸಜ್ಜನರ್ ಅವರ ಸಹೋದರ ಮಲ್ಲಿಕಾರ್ಜುನ ಅವರಿಗೆ ಹಾಗೂ ಚಿಕ್ಕಪ್ಪನಾದ ಗ್ಯಾನಪ್ಪ ಸಜ್ಜನರ್ ಅವರಿಗೆ ಹೂಗುಚ್ಚ ನೀಡಿ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದರು.
ಇದೇ ವೇಳೆ ಮಾಧ್ಯಮದ ಜೊತೆಗೆ ಮಾತನಾಡಿದ ಸಜ್ಜನವರ ಚಿಕ್ಕಪ್ಪ ಗ್ಯಾನಪ್ಪ ಸಜ್ಜನವರ,ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ವಿಶ್ವನಾಥ ನೀಡುತ್ತಿದ್ದರು.ಅಲ್ಲದೇ ಶಿಸ್ತು ಬದ್ದ ಜೀವನವನ್ನು ನಡೆಸುತ್ತಿದ್ದ ವಿಶ್ವನಾಥ ಕರ್ತವ್ಯ ನಿಷ್ಠೆ ಹಾಗೂ ವಿಶ್ವಾಸಕ್ಕೆ ಸೂಕ್ತ ನಿದರ್ಶನ ಎಂದರು.
ನಮ್ಮ ಅಣ್ಣನ ಮಗ ಇಂತಹ ಧೀರ ಕಾರ್ಯ ಮಾಡಿರುವುದು ನಮಗೆ ಹೆಮ್ಮೆ ಅನಿಸುತ್ತದೆ. ಒಟ್ಟಿನಲ್ಲಿ ಕಾಮುಕರಿಗೆ ತಕ್ಕ ಪಾಠ ಕಲಿಸಿ ಭಾರತದ ಪ್ರಜಾಪ್ರಭುತ್ವಕ್ಕೆ ಗೌರವ ತಂದುಕೊಟ್ಟಿರುವ ವಿಶ್ವನಾಥ ನಮ್ಮ ಹುಬ್ಬಳ್ಳಿಯ ಹೆಮ್ಮೆಯ ಮಗ ಎಂದು ಹೇಳಿಕೊಳ್ಳಲು ಸಂತೋಷ ಎನಿಸುತ್ತದೆ ಎಂದು ವಿಶ್ವನಾಥ ಸಜ್ಜನವರ ಚಿಕ್ಕಪ್ಪ ಗ್ಯಾನಪ್ಪ ಅವರು ತಮ್ಮ ಅಣ್ಣನ ಮಗನ ಸಾಹಸವನ್ನು ಹಾಡಿ ಹೋಗಳಿದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *