ಖಾನಾಪೂರ-ಖಾನಾಪೂರದ ಭಾಗ್ಯಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಯನ್ನು ಲೀಜ್ ಮೇಲೆ ನಡೆಸುತ್ತಿರುವ ಖಾನಾಪೂರ ಶಾಸಕ ವಿಠ್ಠಲ ಹಲಗೇಕರ್ ಅವರಿಗೆ ಈಗ ಆಕ್ರಮ ವ್ಯವಹಾರದ ತನಿಖೆ ಎದುರಾಗಿದೆ ಸರ್ಕಾರ ಆಕ್ರಮ ತನಿಖೆಗೆ ಆದೇಶ ಹೊರಡಿಸಿದೆ.
ಖಾನಾಪೂರದ ಭಾಗ್ಯಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಲೀಜ್ ಆಧಾರದ ಮೇಲೆ ಪಡೆದು ಈ ಕಾರ್ಖಾನೆಯಲ್ಲಿ ಸಹಕಾರಿ ಬ್ಯಾಂಕಿನ ಹಣ ತೊಡಗಿಸಿ,ನಂತರ ಕಾರ್ಖಾನೆಯಿಂದ ಈ ಹಣವನ್ನು ದುರುಪಯೋಗ ಮಾಡಿಕೊಂಡ ಆರೋಪವನ್ನು ಎದುರಿಸುತ್ತಿರುವ ಖಾನಾಪೂರ ಶಾಸಕ ವಿಠ್ಠಲ ಹಲಗೇಕರ್ 600 ಕೋಟಿಯ ಗೋಲ್ ಮಾಲ್ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಖಾನಾಪೂರ ಕ್ಷೇತ್ರದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ನೀಡಿದ ದೂರಿನ ಮೇರೆಗೆ ಸರ್ಕಾರ ಹಾಲಿ ಶಾಸಕ ವಿಠ್ಠಲ ಹಲಗೇಕರ್ ಒಡೆತನದ ಕಂಪನಿ ನಡೆಸಿರುವ ಆಕ್ರಮ ತನಿಖೆಗೆ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರ ತನಿಖೆ ನಡೆಸಲು ನಿವೃತ್ತ ಜಿಲ್ಲಾ ನ್ಯಾಯಾಧೀಶರೊಬ್ಬರನ್ನು ನೇಮಿಸಿದೆ. ಖಾನಾಪೂರದ ಭಾಗ್ಯಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರವನ್ನು ತನಿಖೆ ಮಾಡಲು ಸರ್ಕಾರ ನೇಮಿಸಿರುವ ಈ ತಂಡ ಇಂದು ಖಾನಾಪೂರದ ಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿ ತನಿಖೆ ಆರಂಭಿಸಲಿದೆ.
ಖಾನಾಪೂರ ಶಾಸಕ ವಿಠ್ಠಲ ಹಲಗೇಕರ್ ಅವರು ಒಟ್ಟು 600 ಕೋಟಿ ರೂ ಆಕ್ರಮ ವ್ಯವಹಾರ ನಡೆಸಿದ್ದಾರೆ.ಸಹಕಾರಿ ಬ್ಯಾಂಕಿನ ಹಣವನ್ನು ದುರುಪಯೋಗ ಪಡೆಸಿಕೊಂಡಿದ್ದಾರೆ ಎನ್ನುವ ಆರೋಪವನ್ನು ಎದುರಿಸುತ್ತಿದ್ದಾರೆ.
ಇಂದು ಬೆಳಗ್ಗೆ 11-00 ಗಂಟೆಗೆ ತನಿಖೆಗೆ ಅಧಿಕಾರಿಗಳ ತಂಡ ಖಾನಾಪೂರಕ್ಕೆ ಆಗಮಿಸಲಿದ್ದು ಆಕ್ರಮ ವ್ಯವಹಾರದ ತನಿಖೆ ಶುರುವಾಗಲಿದೆ. ಆಕ್ರಮ ವ್ಯವಹಾರವನ್ನು ತನಿಖೆ ಮಾಡಿ 30 ದಿನಗಳಲ್ಲಿ ವರದಿ ಒಪ್ಪಿಸುವಂತೆ ಸರ್ಕಾರ ಸೂಚಿಸಿದೆ.
enquiry….
*Govt orders Enquiry into alleged massive corruption of more than 600 Cr in Bhagyalaxmi Sugar Factory by Vittal Halgekar, BJP MLA of Khanapur and his company*
To investigate into Massive Corruption Charges against Vittal Halgekar, BJP MLA Khanapur and his company which is running the factory presently, Government of Karnataka has appointed Sri SB Vastramath, Rtd District & Sessions Judge as Special Enquiry Officer.
The enquiry has been ordered on the complaint given by Dr Anjali Nimbalkar, Ex MLA of Khanapur. Dr Anjali Nimbalkar in her complaint has expressly stated that the farmers money and trust is continuously abused by Topinkatti Sri Mahalaxmi Sugars Pvt Ltd promoted and owned majorly by BJP MLA Sri Vittal Halagekar.
The Special Enquiry Officer Sri SB Vastramath, Rtd Judge is visiting the factory premises in person on 12.12.2023 at 11 am and has summoned factory management to produce all the relevant documents in support of respective claims and counterclaims.
The Enquiry Officer is directed to submit the report within 30 days.