ಬೆಳಗಾವಿ-ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾಲಯ ಆಗಿರುವ ಬೆಳಗಾವಿಯ ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾಲದ ಕುಲಪತಿ ಹುದ್ದೆಗೆ ಒಟ್ಟು 80ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು ಇದೇ ವಾರದಲ್ಲಿ ಕುಲಪತಿ ನೇಮಕ ಆಗಲಿದೆ
ಆರ್ಥಿಕವಾಗಿ ಬಲಾಡ್ಯವಾಗಿರುವ ಬೆಳಗಾವಿಯ ವಿಟಿಯು ಕುಲಪತಿ ಹುದ್ದೆಗೆ ಇದೇ ಮೊದಲ ಬಾರಿ 80 ಜನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಅಚ್ಚರಿ ಮೂಡಿಸಿದ್ದಾರೆ ಕುಲಪತಿ ಹುದ್ದೆಗೆ ಬಂದಿರುವ ಅರ್ಜಿಗಳನ್ನು ಪರಶೀನೆ ಮಾಡುವ ಶೋಧನಾ ಸಮೀತಿ 80 ಜನರಲ್ಲಿ ಎಂಟು ಜನರ ಹೆಸರಗಳನ್ನು ರಾಜ್ಯಪಾಲರಿಗೆ ಶಿಫಾರಸು ಮಾಡಲಿದೆ
ಶೋಧನಾ ಸಮೀತಿ ಶಿಫಾರಸು ಮಾಡಿದ ಎಂಟು ಜನರಲ್ಲಿ ರಾಜ್ಯಪಾಲರು ಒಬ್ಬರನ್ನು ನೇಮಕಮಾಡಲಿದ್ದಾರೆ ಶನಿವಾರದ ಒಳಗೆ ವಿಟಿಯು ಗೆ ಹೊಸ ಕುಲಪತಿಗಳು ಕಾರ್ಯಭಾರವನ್ನು ಆರಂಭಿಸಲಿದ್ದಾರೆ
80 ಜನ ಆಕಾಂಕ್ಷಿಗಳಲ್ಲಿ ವಿಶ್ರಾಂತ ಕುಲಪತಿ ಬಲವೀರ ರೆಡ್ಡಿ ಅವರ ಅಳಿಯ ಆರ್‍ಪಿ ರೆಡ್ಡಿ , ಎಚ್ ಜಿ ಶೇಖರಪ್ಪ, ವೇಣು ಗೋಪಾಲ ಸೇರಿದಂತೆ ಅನೇಕ ಜನ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ
ವಿಟಿಯು ಸ್ಥಾಪನೆಯಾದ ಬಳಿಕ ಈ ವರೆಗೆ ನಾಲ್ಕು ಜನ ಕುಲಪತಿಗಳು ಆಡಳಿತ ನಡೆಸಿದ್ದಾರೆ ಐದನೇಯ ಕುಲಪತಿ ಹುದ್ದೆಗೆ ಬಿರುಸಿನ ಕಸರತ್ತು ನಡೆದಿದೆ
Check Also
ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!
ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …