ಬೆಳಗಾವಿ-ಬೆಳಗಾವಿ ನಗರದ ಶ್ರೀ ನಗರದಲ್ಲಿ ಸೋಮವಾರ ರಾತ್ರಿ ಶ್ರೀ ಗಣೇಶನ ಮೂರ್ತಿಯನ್ನು ಅಲ್ಲಿಯ ಸಾರ್ವಜನಿಕ ಗಣೇಶ ಉತ್ಸವ ಮಂಡಳದವರು ಪ್ರತಿಷ್ಠಾಪಿಸಲು ತಂದಾಗ ಮೂರ್ತಿ ವೀರೂಪಗೊಂಡ ಹಿನ್ನಲೆಯಲ್ಲಿ ಮಂಡಳದವರು ಮೂರ್ತಿಯನ್ನು ಪ್ರತಿಷ್ಠಾಪಣೆ ಮಾಡದೇ ಈ ಮೂರ್ತಿಯನ್ನು ಮಂಗಳವಾರ ಮಧ್ಯಾಹ್ನ 12 ಘಂಟೆಗೆ ನಗರದ ಕಿಲ್ಲಾ ಕೆರೆಯಲ್ಲಿ ವಿಸರ್ಜನೆ ಮಾಡಿದ ಘಟಣೆ ನಡೆದಿದೆ
ವಿರೂಪಗೊಂಡ ಮೂರ್ತಿಯನ್ನು ಮಂಗಳವಾರ ಮಧ್ಯಾಹ್ನ ನಗರದ ಕಿಲ್ಲಾ ಕೆರೆಯಲ್ಲಿ ವಿಸರ್ಜನೆ ಮಾಡಿದ ಶ್ರೀ ನಗರದ ಸಾರ್ವಜನಿಕ ಗಣೇಶ ಮಂಡಳದ ಯುವಕರು ಸುಮ್ಮನೇ ಕುಳಿತುಕೊಳ್ಳದೇ ತಕ್ಷಣ ಮೂರ್ತಿಕಾರನನ್ನು ಬೇಟಿಯಾಗಿ ನಾಲ್ಕು ಘಂಟೆಯಲ್ಲಿಯೇ ಬೆರೊಂದು ಮೂರ್ತಿ ತಯಾರಿಸಿ ಮಂಗಳವಾರ ರಾತ್ರಿ 9-30 ಘಂಟೆಗೆ ಪಾರ್ವತಿಯ ಕಂದ ವಿಘ್ನ ನಿವಾರಕ ವಿನಾಯಕನನ್ನು ಮರು ಪ್ರತಿಷ್ಠಾಪನೆ ಮಾಡಿದ ಅಪರೂಪದ ಘಟನೆ ನಡೆದಿದೆ
ಮಂಗಳವಾರ ಮಧ್ಯಾಹ್ನ ಭಕ್ತರಿಂದ ದೂರವಾದ ವಿನಾಯಕ ರಾತ್ರಿ ಮತ್ತೆ ರಾತ್ರಿ 9-30 ಕ್ಕೆ ಭಕ್ತರ ಆರಾಧನೆಗೆ ಸಿದ್ಧನಾದ
ಆದರೆ ಈ ಘಟನೆಯಿಂದ ವಿಚಲಿತರಾದ ಪೋಲಿಸರಿಗೆ ಗಣೇಶ ಪ್ರತಿಷ್ಟಾಪಣೆ ಹಾಗೂ ವಿಸರ್ಜನೆಯ ಅನುಭವ ಒಂದೇ ದಿನದಲ್ಲಿ ಆಯಿತು ಜೈಣೇಶ ಜೈ ಪಾರ್ವತಿ ಪುತ್ರ ಜೈ ವಿಘ್ನ ನಿವಾರಕ ಜೈ ಲಂಭೋಧರ
Check Also
ಕರ್ನಾಟಕ ರಾಜ್ಯೋತ್ಸವ: ನಾಳೆ ಮಂಗಳವಾರ ಪೂರ್ವಭಾವಿ ಸಭೆ
ಬೆಳಗಾವಿ, -ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯನ್ನು ನವಂಬರ್ 1, 2024 ರಂದು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ (ಅಕ್ಟೋಬರ್ 8) ಜಿಲ್ಲಾ ಪಂಚಾಯತ …