ಬೆಳಗಾವಿ- ಕೊಲೆ ಪ್ರಕರಣದಲ್ಲಿ ಸಿಬಿಐ ತನಿಖೆಯಿಂದಾಗಿ ಬಂಧನಕ್ಕೊಳಗಾಗಿ ಹಲವಾರು ತಿಂಗಳುಗಳಿಂದ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಇಂದು ಬಿಡುಗಡೆಯಾಗಲಿದ್ದಾರೆ.
ಮಾನ್ಯ ಸುಪ್ರೀಂ ಕೋರ್ಟ್ ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಷರತ್ತುಬದ್ಧ ಜಾಮೀನು ನೀಡಿದ ಹಿನ್ನಲೆಯಲ್ಲಿ ಇಂದು ಶನಿವಾರ ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಅವರನ್ನು ಬೆಳಗಾವಿಯ ಹಿಂಡಲಗಾ ಜೈಲಿನಿಂದ ಬಿಡುಗಡೆಯಾಗಲಿದೆ.
ಪಂಚಮಸಾಲಿ ಸಮಾಜದ ಹೋರಾಟದ ನೇತ್ರತ್ವ ವಹಿಸಿದವರಲ್ಲಿ ವಿನಯ ಕುಲಕರ್ಣಿ ಅವರೂ ಒಬ್ಬರಾಗಿದ್ದು,ಅವದೇ ಆದ ಯುವ ಅಭಿಮಾನಿಗಳ ಪಡೆಯನ್ನು ಹೊಂದಿದ್ದಾರೆ.ಇಂದು ಬೆಳಿಗ್ಗೆಯಿಂದಲೇ ವಿನಯ ಕುಲಕರ್ಣಿ ಅವರ ಅಭಿಮಾನಿಗಳು ಬೆಳಗಾವಿಯತ್ತ ಮುಖ ಮಾಡುವ ಸಾಧ್ಯತೆ ಇದೆ. ಜೈಲಿನಿಂದ ಬಿಡುಗಡೆ ಆಗಲಿರುವ ವಿನಯ ಕುಲಕರ್ಣಿಯವರನ್ನು ಅವರ ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಲಿದ್ದು,ಪಂಚಮಸಾಲಿ ಜಗದ್ಗುರು ಬಸವ ಮೃತ್ಯುಂಜಯ ಮಹಾಸ್ವಾಮಿಗಳೂ ಸಹ ಇಂದು ಬೆಳಗಾವಿಗೆ ಆಗಮಿಸುತ್ತಿರುವದು ವಿಶೇಷವಾಗಿದೆ.