Breaking News

ಆಸ್ಪತ್ರೆ ಆಯ್ತು ಕಸದ ತೊಟ್ಟಿ…ಅದನ್ನು ಸ್ವಚ್ಛ ಮಾಡಿದ ಅಭಯ ಪಾಟೀಲರ ಮನಸ್ಸು ಗಟ್ಟಿ..!

ಬೆಳಗಾವಿ- ಗೌಡರ ಕೋಣ ಬರ್ತಾ ಬರ್ತಾ ಕತ್ತೆ ಆಯ್ತು ಎನ್ನುವಂತೆ ಬೆಳಗಾವಿಯ ಜಿಲ್ಲಾ ಆಸ್ಪತ್ರೆ ಸುಧಾರಿಸುವ ಲಕ್ಷಣಗಳು ಕಾಣಿಸುತ್ತಿಲ್ಲ ಈ ಆಸ್ಪತ್ರೆ ದವಾಖಾನೆ ಎಂದು ಕರೆಯಲು ಲಾಯಕ್ಕಿಲ್ಲ ಇದು ಕಸಾಯಿಖಾನೆ ಎಂದು ಕರೆಯಲು ಯೋಗ್ಯವಾಗಿದೆ ಈ ಆಸ್ಪತ್ರೆ

ಬೆಳಗಾವಿ ಜಿಲ್ಲಾ ಆಸ್ಪತ್ರೆ ಅಕ್ಷರಶಹ ಕಸದ ತೊಟ್ಟಿಯಾಗಿದೆ ಇಲ್ಲಿಯ ಗಲೀಜು ವ್ಯೆವಸ್ಥೆ ನೋಡಿ ಬೇಸತ್ತ ಮಾಜಿ ಶಾಸಕ ಅಭಯ ಪಾಟೀಲ ಒಂದು ತಿಂಗಳ ಹಿಂದೆ ಆಸ್ಪತ್ರೆಯಲ್ಲಿ ತಮ್ಮ ಪಡೆಯೊಂದಿಗೆ ಸ್ವಚ್ಛತಾ ಅಭಿಯಾನ ನಡೆಸಿ ಕ್ಲೀನ್ ಮಾಡಿತ್ತು

ಮಾಜಿ ಶಾಸಕ ಅಭಯ ಪಾಟೀಲರು ಆಸ್ಪತ್ರೆಯ ಅಧಿಕಾರಿಗಳಿಗಾಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡದಿದ್ದರೆ ಪ್ರತಿ ಭಾನುವಾರ ಆಸ್ಪತ್ರೆಯಲ್ಲಿ ಸ್ವಚ್ಛತಾ ಅಭಿಯಾನ ನಡೆಸುವದಾಗಿ ಎಚ್ಚರಿಕೆ ನೀಡಿದರೂ ಆಸ್ಪತ್ರೆಯ ಅಧಿಕಾರಿಗಳು ಸುಧಾರಿಸಲಿಲ್ಲ ಹೀಗಾಗಿ ಮಾಜಿ ಶಾಸಕ ಅಭಯ ಪಾಟೀಲ ಸುಮಾರು ಎರಡು ನೂರು ಯುವಕರೊಂದಿಗೆ ಭಾನುವಾರ ಆಸ್ಪತ್ರೆಯಲ್ಲಿ ಸ್ವಚ್ಛತಾ ಅಭಿಯಾನ ನಡೆಸಿತು

ಆಸ್ತ್ರೆಯ ಶೌಚಾಲಯ ಹೆರಿಗೆ ವಿಭಾಗ ಆಸ್ಪತ್ರೆಯ ಆವರಣ ಸೇರಿದಂತೆ ಇಡೀ ಆಸ್ಪತ್ರೆಯನ್ನು ಕ್ಲೀನ್ ಮಾಡಿ ಅಭಯ ಪಾಟೀಲರ ಪಡೆ ಎಲ್ಲರ ಗಮನ ಸೆಳೆಯಿತು

ಪ್ರತಿ ಭಾನುವಾರ ತಪ್ಪದೇ ನಗರದ ವಿವಿಧ ಪ್ರದೇಶಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸುವ ಮಾಜಿ ಶಾಸಕ ಮತ್ತು ಅವರ ಹುಡುಗರು ದೇಶಕ್ಕೆ ಮಾದರಿಯಾಗಿದ್ದಾರೆ ಬಡ ರೋಗಿಗಳ ಆಸ್ಪತ್ರೆಯನ್ನು ಸ್ವಚ್ಛ ಮಾಡಿದ ಯುವಕರಿಗೆ ನಮ್ಮದೊಂದು ಸಲಾಂ

 

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *