ಬೆಳಗಾವಿ-ನಗರದ ಹನುಮಾನ ನಗರದಲ್ಲಿರುವ ಜಾಗೆಗೆ ಸಂಬದಿಸಿದ ಎಲ್ಲ ದಾಖಲೆಗಳು ನನ್ನ ಬಳಿ ಇವೆ ನಾನು ಯಾವ ನಾಲೆಯನ್ನು ಒತ್ತುವರಿ ಮಾಡಿಲ್ಲ ಕೆಲವರು ನನ್ನ ಹೆಸರು ಕೆಡಿಸಲು ಅಪಪ್ರಚಾರ ನಡೆಸಿದ್ದಾರೆ ಎಂದು ಮಾಜಿ ಶಾಸಕ ಶ್ಯಾಮ ಘಾಟಗೆ ಪ್ರತಿಕ್ರಿಯೆ ನೀಡಿದ್ದಾರೆ
ಶುಕ್ರವಾರ ಜಿಲ್ಲಾಧಿಕಾರಿಗಳನ್ನು ಭೇಟಿಯಾದ ಬಳಿಕ ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಎಂಟು ವರ್ಷ ಹಿಂದೆ ನಾನು ಹನುಮಾನ ನಗರದಲ್ಲಿ ಜಮೀನು ಖರಿದಿ ಮಾಡಿದ್ದೆ ಜಮೀನಿಗೆ ಸಂಬದಿಸಿದ ಎಲ್ಲ ದಾಖಲೆಗಳು ನನ್ನ ಬಳಿ ಇವೆ ನಾನು ಅಪಾರ್ಟಮೆಂಟ್ ನಿರ್ಮಿಸಿದ ಜಾಗೆಯಲ್ಲಿ ನಾಲೆಯೂ ಇಲ್ಲ ನಾನು ನಾಲೆಯನ್ನು ಅತೀಕ್ರಮಣ ಮಾಡಿಲ್ಲ ಈ ಜಾಗೆಯಲ್ಲಿ ನಾಲೆ ಇದೇ ಎಂದು ದಾಖಲೆಗಳಿದ್ದರೆ ಅವರು ನ್ಯಾಯಾಲಯದ ಮೊರೆ ಹೋಗಲಿ ಎಂದು ಶ್ಯಾಮ ಘಾಟಗೆ ಹೇಳಿದರು
