Breaking News

ಗೋವಾ ಕಡಲ ಕಿನಾರೆಯಲ್ಲಿ ಬೆಳಗಾವಿ ಗಾಳಿಪಟ

ಬೆಳಗಾವಿ: ಗೋವಾ ಪ್ರವಾಸಿಗರನ್ನು ಬೆಳಗಾವಿಯತ್ತ ಸೆಳೆಯಲು ಮಾಜಿ ಶಾಸಕ ಅಭಯ ಪಾಟೀರು ಮಾಡುತ್ತಿರುವ ಪ್ರಯತ್ನ ಇಂದು ನಿನ್ನೆಯದಲ್ಲ ಹಲವಾರು ವರ್ಷಗಳಿಂದ ಅವರು ಈ ಪ್ರಯತ್ನವನ್ನು ಮುಂದುವರೆಸಿದ್ದಾರೆ

ಇದರ ಒಂದು ಭಾಗವಾಗಿ ಅಭಯ ಪಾಟೀರು ಕಳೆದ ಮೂರು ವರ್ಷಗಳಿಂದ ಗೋವಾ ಕಡಲ ಕಿನಾರೆಯಲ್ಲಿ ಗಾಳಿಪಟ ಉತ್ಸವವನ್ನು ಆಯೋಜಿಸುತ್ತಿದ್ದು ಈ ವರ್ಷದ ಗಾಳಿಪಟ ಉತ್ಸವ ಜನವರಿ 17 ಹಾಗು 18 ರಂದು ಎರಡು ದಿನಗಳ ಕಾಲ ಗೋವಾ ಕಡಲ ಕಿನಾರೆಯಲ್ಲಿ ನಡೆಯಲಿದೆ

ಗೋವಾದ ಪಣಜಿ ಮೀನಾಮಾರ ಬೀಚ್ ನಲ್ಲಿ ಗಾಳಿಪಟ ಉತ್ಸವವನ್ನು ಅಭಯ ಪಾಟೀಲ ಆಯೋಜಿಸಿದ್ದು ಇಲ್ಲಿ ಹದಿನೇಳು ದೇಶಗಳ ಅಂತರಾಷ್ಟ್ರೀಯ ಗಾಳಿಪಟ ಹಾರಿಸುವ ಕೈಟ್ ಪ್ಲೇಯರ್ಸಗಳು ಭಾಗವಹಿಸಲಿದ್ದು ಜೊತೆಗೆ ದೇಶದ ವಿವಿಧ ರಾಜ್ಯಗಳ ಕೈಟ್ ಪ್ಲೇಯರ್ಸ ಭಾಗವಹಿಸಲಿದ್ದಾರೆ

ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಅವರು ಗೋವಾದಲ್ಲಿ ನಡೆಯುವ ಗಾಳಿಪಟ ಉತ್ಸವಕ್ಕೆ ಗೋವಾ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡುತ್ತಿದೆ ಇದನ್ನು ಸದುಪಯೋಗ ಪಡೆದುಕೊಂಡು ಬೆಳಗಾವಿಯ ಪ್ರವಾಸೋದ್ಮಮ ಸ್ಥಳಗಳ ಬಗ್ಗೆ ವಿದೇಶಿ ಪ್ರವಾಸಿಗರುಗೆ ಮಾಹಿತಿ ನೀಡಿ ಅವರನ್ನು ಬೆಳಗಾವಿಯ ಕಡೆಗೆ ಆಕರ್ಷಿಸುವ ಉದ್ದೇಶದಿಂದಲೇ ಗೋವಾದಲ್ಲಿ ಗಾಳಿ ಪಟಗಳನ್ನು ಹಾರಿಸಲಾಗುತ್ತುದೆ

ಗೋವಾ ಪ್ರವಾಸೋದ್ಯಮ ಇಲಾಖೆಯ ಮಹಾ ನಿರ್ದೇಶಕರು ಪಣಜಿಯ ಮೀನಾಮಾರ ಬೀಚ್ ನಲ್ಲಿ ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ

ಗೋವಾ ಗಾಳಿಪಟ ಉತ್ಸವ ಮುಗಿಸಿಕೊಂಡು ಜನೇವರಿ ೨೧ ರಿಂದ ೨೪ ರವರೆಗೆ ಗಾಳಿಪಟ ಉತ್ಸವದ ಜೊತೆಗೆ ಬೇರೆ ಬೇರೆ ಉತ್ಸವಗಳ ಪರ್ವ ಬೆಳಗಾವಿಯಲ್ಲಿ ನಡೆಯಲಿದೆ

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *