ಬೆಳಗಾವಿಯಲ್ಲಿ ಅಮಟೂರು ಬಾಳಪ್ಪ ಪ್ರತಿಮೆ ನಿರ್ಮಿಸಲು ಆಗ್ರಹ

ಬೆಳಗಾವಿ- ಕಾಡು ಗೊಲ್ಲ ನಿಗಮವನ್ನು ಯಾದವ್ ಗೊಲ್ಲ ಹಣಬರ ಅಭಿವೃದ್ಧಿ ನಿಗಮ ಎಂದು ಬದಲಿಸಲು ಜಿಲ್ಲಾಧಿಕಾರಿಗ ಮುಖಾಂತರ ಮುಖ್ಯಮಂತ್ರಿಗಳಿಗೆ ಸಮಾಜದ ಮುಖಂಡರು ಮನವಿ ಸಲ್ಲಿಸಿದರು.

ಬೆಳಗಾವಿಯಲ್ಲಿ ಸಾಂಕೇತಿಕವಾಗಿ ಪ್ರತಿಭಟಿಸಿದ ಮುಖಂಡರು, ವೀರಕೇಸರಿ ಅಮ್ಟೂರು ಬಾಳಪ್ಪನವರ ಸ್ಮಾರಕವನ್ನು ನಿರ್ಮಿಸಿ ಬೆಳಗಾವಿಯ ಒಂದು ವೃತ್ತಕ್ಕೆ ಅಮಟೂರು ಬಾಳಪ್ಪ ಎಂದು ನಾಮಕರಣ ಮಾಡಲು ಒತ್ತಾಯಿಸಿದರು.

ಸಂದರ್ಭದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ಸಮಾಜದ ಬಾಂಧವರು ಹೋರಾಟದಲ್ಲಿ ಭಾಗವಹಿಸಿದ್ದರು.

ಸಭೆಯನ್ನು ಉದ್ದೇಶಿಸಿ ಸಮಾಜದ ಹಿರಿಯ ನಾಯಕರಾದ ಹಾಗೂ ಪ್ರಾಚಾರ್ಯರು ಬಸವರಾಜ ಹಮಣ್ಣವರ ಮಾತನಾಡಿ ಸಮಾಜದ ಸ್ಥಿತಿಗತಿಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ
ಅಮ್ಟೂರು ಬಾಳಪ್ಪ ಯುವಸೇನೆ ಅಧ್ಯಕ್ಷರಾದ ರಮೇಶ ಯರಗಣ್ಣವರ .
ಕರ್ನಾಟಕ ಹಣಬರ ಯಾದವ ಸಾಮಾಜಿಕ ಜಾಲತಾಣ ತಂಡದ ಅಧ್ಯಕ್ಷರಾದ ನಾಗರಾಜ ಹಣಬರ . ಖಾನಾಪುರ ತಾಲೂಕಿನ ಘಟಕದ ಅಧ್ಯಕ್ಷರಾದ ಗಿರೀಶ ಹಣಬರ ಬಾಬು ಹಾಲಗಿಮರ್ಡಿ.
ಯಾದವ ಯುವಸೇನೆ ಜಿಲ್ಲಾಧ್ಯಕ್ಷರಾದ ಸಂಗಪ್ಪ ಕುಡಚಿ. ಉಪಾಧ್ಯಕ್ಷರು ಪ್ರಶಾಂತ್ ಕೌಲಗಿ . ರಾಘವೇಂದ್ರ ಹಣಬರ
ವಿಠ್ಠಲ್ ಅರ್ಜುನವಾಡಿ
ಕರ್ನಾಟಕ ಹಣಬರ ಯುವ ವೇದಿಕೆ ಜಿಲ್ಲಾಧ್ಯಕ್ಷರಾದ ಯಲ್ಲಪ್ಪ ಕೋಟಗಿ. ರಾಯಬಾಗ ತಾಲೂಕಿನ ರಮೇಶ ಹನುಮಂತಗೊಳ.
ಚಿಕ್ಕೋಡಿ ತಾಲೂಕಿನ ನಾಯಕರಾದ ಕಿರಣ ಶಿಂಗಾಯಿ.
ಸತ್ಯ ಅಸ್ತ್ರ ಮಾದ್ಯಮದ ಮುಖ್ಯಸ್ಥರಾದ ಮಾರುತಿ ನಂದವಾಡ, ತರುಣ ಭಾರತ ಪತ್ರಿಕೆಯ ವರದಿಗರಾರದ ಸತೀಶ್ ತೋಪಾಯಿ… ಹಾಗೂ ಇನ್ನಿತರರು ಬಾಗ ವಹಿಸಿದ್ದರು.

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *