ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ನಿಶ್ಚಿತವಾಗಿ ಬಹುಮತ ಸಿಗಲಿದೆ: ಬಿಎಸ್ವೈ
ಚಿಕ್ಕೋಡಿ:ರಾಜ್ಯದ 20ಸ್ಥಾನಗಳ ವಿಧಾನ ಪರಿಷತ್ ಚುನಾವಣೆಗಳಲ್ಲಿ ಬಿಜೆಪಿ ಕನಿಷ್ಠ 17ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಮಾಜಿ ಸಿಎಂ ಬಿಎಸ್.ಯಡಿಯೂರಪ್ಪ ಹೇಳಿದರು.
ಚಿಕ್ಕೋಡಿ ಪಟ್ಟಣದ ಮಹಾಂತೇಶ ಕವಟಗಿಮಠ ಫಾರ್ಮ್ ಹೌಸ್ ನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಬಿಎಸ್ವೈ, ವಿಧಾನ ಪರಿಷತ್ 25 ಕ್ಷೇತ್ರಗಳ ಪೈಕಿ 20ರಲ್ಲಿ ಮಾತ್ರ ಬಿಜೆಪಿ ಪಕ್ಷ ಸ್ಪರ್ಧೆ ಮಾಡಿದೆ.ಅಭ್ಯರ್ಥಿಗಳ ಘೋಷಣೆ ಮಾಡುವ ಮುನ್ನವೇ ರಾಜ್ಯದಲ್ಲಿ ಪ್ರಚಾರ ಪಕ್ಷದಿಂದ ಮಾಡಿದ್ದೇವೆ.ನಾವು 20ಅಭ್ಯರ್ಥಿಗಳ ಪಟ್ಟಿ ಬಿಟ್ಟರು ಕಾಂಗ್ರೆಸ್ ನವರು ಮಾತ್ರ ಇದುವರೆಗೂ ಪಟ್ಟಿ ಬಿಡುತ್ತಿಲ್ಲ ಎಂದರು.
ಚಿಕ್ಕೋಡಿಯಲ್ಲಿ 8942 ಮತದಾರರಿದ್ದಾರೆ. ಮೂರು ಬಾರಿ ಗೆಲುವು ಸಾಧಿಸಿರುವ ಮಹಾಂತೇಶ್ ಕವಟಗಿಮಠ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಈ ಬಾರಿ ಮೊದಲೇ ಸುತ್ತಿನಲ್ಲಿ ಕವಟಗಿಮಠ ಗೆಲುವು ಸಾಧಿಸುವ ವಿಶ್ವಾಸವಿದೆ.ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಎಲ್ಲ ಕಡೆಯೂ ಉತ್ತಮ ರೀತಿಯಲ್ಲಿ ಪ್ರತಿಕ್ರಿಯೆ ಸಿಗುತ್ತಿದೆ.ವಿಧಾನ ಪರಿಷತ್ ನಲ್ಲಿ ಬಿಜೆಪಿಗೆ ಬಹುಮತವಿಲ್ಲ.ಈ ಚುನಾವಣೆಯಲ್ಲಿ ನಿಶ್ಚಿತವಾಗಿ ಬಹುಮತ ಸಿಗಲಿದ್ದು ಕನಿಷ್ಠ 17ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದರು.
ಕಾಂಗ್ರೇಸ್ ನ ಮುಖಂಡರು ಹಗಲುದರೋಡೆ ಮಾಡಿ,ಅಭಿವೃದ್ಧಿ ಕಾರ್ಯಗಳಿಗೆ ಗಮನ ಕೊಡದೇ ಇರುವ ಪರಿಣಾಮವೇ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನ ಹುಡುಕುವ ಪರಿಸ್ಥಿತಿ ಎದುರಾಗಿದ್ದು, ಕರ್ನಾಟಕದಲ್ಲಿ ಮಾತ್ರ ಉಸಿರಾಡುತ್ತಿದೆ.ಇದೀಗ ಬಿಜೆಪಿ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ತಮ್ಮ ಅಸ್ತಿತ್ವವನ್ನ ಇಲ್ಲಿಯೂ ಕಳೆದುಕೊಳ್ಳಲಿದ್ದಾರೆ ಎಂದರು.
ಅಕಾಲಿಕ ಮಳೆಗೆ ವಿಚಾರಕ್ಕೆ, ನೆರೆ ಜಿಲ್ಲಾಧಿಕಾರಿಗಳ ಸಭೆಯನ್ನ ಸಿಎಂ ಬಸವರಾಜ ಬೊಮ್ಮಾಯಿಯವರ ಮಾಡಿದ್ದಾರೆ. ನಮ್ಮ ನಿರೀಕ್ಷೆ ಮೀರಿ ರೈತರ ಬೆಳೆ ನಾಶವಾಗಿದೆ.ಹೀಗಾಗಿ ಚುನಾವಣೆ ಪ್ರಚಾರವಷ್ಟೇ ಅಲ್ಲದೇ ರೈತರು ಸಂಕಷ್ಟಕ್ಕೆ ಧ್ವನಿಯಾಗುವ ಕೆಲಸ ಮಾಡುತ್ತಿದ್ದೇವೆ.ಅವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಜೊತೆಗೂಡಿ ಪರಿಹಾರ ಕೊಡುತ್ತದೆ ಎಂದರು.
ಜೆಡಿಎಸ್ ಅಭ್ಯರ್ಥಿ ಹಾಕದ ಸ್ಥಳದಲ್ಲಿ ನಮಗೆ ಕುಮಾರಸ್ವಾಮಿ ಅವರು ಬೆಂಬಲವನ್ನು ಸೂಚಿಸಬೇಕು. ಕುಮಾರಸ್ವಾಮಿ ಅವರಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ ನಮಗೆ ಬೆಂಬಲ ಸೂಚಿಸಬೇಕು.ಎಂದರು