ಬೆಳಗಾವಿ-,ಬೆಳಗಾವಿ ಜಿಲ್ಲೆಯ ಸುಪ್ರಸಿದ್ಧ ಮಂದಿರಗಳಾದ ಸವದತ್ತಿ ಯಲ್ಲಮ್ಮನ ದೇವಸ್ಥಾನ, ಮತ್ತು ಚಿಂಚಲಿ ಮಾಯಕ್ಕ ಮಂದಿರಗಳು ಸಾರ್ವಜನಿಕರ ದರ್ಶನಕ್ಕೆ ಓಪನ್ ಮಾಡುವ ಸಾಧ್ಯತೆ ಇದೆ.
ಈ ಎರಡೂ ದೇವಸ್ಥಾನಗಳಿಗೆ ಪಕ್ಕದ ಮಹಾರಾಷ್ಟ್ರ,ಮತ್ತು ಗೋವಾ ರಾಜ್ಯಗಳಿಂದ ದಿನನಿತ್ಯ ಸಾವಿರಾರು ಭಕ್ತರು ಬರುತ್ತಾರೆ,ಕೊರೋನಾ ಮಹಾಮಾರಿಯಿಂದಾಗಿ ಈ ಎರಡೂ ದೇವಸ್ಥಾನಗಳಲ್ಲಿ ಸಾರ್ವಜನಿಕರ ದರ್ಶನ ಬಂದ್ ಮಾಡಿ ಒಂದು ವರ್ಷ ಕಳೆದಿದ್ದುಒಂದು ವರ್ಷದ ಬಳಿಕ ಈ ಎರಡೂ ದೇವಸ್ಥಾನಗಳಲ್ಲಿ ದರ್ಶನದ ಭಾಗ್ಯ ಮತ್ತೆ ಬರಲಿದೆ.
ಬೆಳಗಾವಿ ಜಿಲ್ಲಾಡಳಿತ ಜಿಲ್ಲೆಯ ಈ ಎರಡೂ ಪ್ರಸಿದ್ಧ ಮಂದಿರಗಳನ್ನು ಫೆಬ್ರುವರಿ 1ರಂದು ತೆರೆಯಲು ಚಿಂತನೆ ನಡೆಸಿದ್ದು ನಾಳೆ ಈ ಕುರಿತು ಜಿಲ್ಲಾಡಳಿತದಿಂದ ಅಧಿಕೃತ ಆದೇಶ ಹೊರಬೀಳುವ ನಿರೀಕ್ಷೆ ಇದೆ.