ಚಿಕ್ಕೋಡಿ-ವಿಜೇಂದ್ರನಿಗೆ ಕ್ಷೇತ್ರ ಬಿಟ್ಟ ಯಡಿಯೂರಪ್ಪ,ಚಿಕ್ಕೋಡಿಯಲ್ಲಿ ಬಸನಗೌಡ ಯತ್ನಾಳ ಪ್ರತಿಕ್ರಿಯೆ ನೀಡಿದ್ದಾರೆ.ವಿಜಯಪುರ ಶಾಸಕ ಬಸನಗೌಡ್ ಯತ್ನಾಳ ಚಿಕ್ಕೋಡಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿ ಹಲವಾರು ವಿಚಾರಗಳ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಮೋದಿಯವರು ಪ್ರಧಾನಿ ಆದಾಗಿಂದ ೭೫ನೇ ವರ್ಷಕ್ಕೆ ಚುನಾವಣೆ ನಿವೃತ್ತಿಯ ಪರಿ ಪಾಠ ಪ್ರಾರಂಭವಾಗಿದೆ.ಪಾಪ ಅವರು ಅದಕ್ಕೆ ಚುನಾವಣಾ ರಾಜಕೀಯದಿಂದ ನಿವೃತ್ತಿರಾಗಿದ್ದಾರೆ.ಆದರೆ ಉಳಿದ ರಾಜಕಾರಣದಲ್ಲಿ ಅವರು ಮುಂದುವರೆಯುವ ಸಂಕೇತ ಇದೆ.ವಿಜೇಂದ್ರಗೆ ಮೈಸುರು ಭಾಗದ ಕ್ಷೇತ್ರದಲ್ಲಿ ಚುನಾವಣೆ ಎದುರಿಸುವ ಒತ್ತಡ ವಿಚಾರ ಪ್ರಸ್ತಾಪಿಸಿದ ಅವರುಒತ್ತಡ ಇದೆ ಎಂದು ಎಲ್ಲರು ಹೇಳಿಕೊಳ್ಳುವರು,
ಮೈಸರುನಿಂದ ಇದೆ, ಬೀದರನಿಂದ ಇದೆ, ಬಸವಕಲ್ಯಾಣನಿಂದ ಒತ್ತಡ ಇದೆ ಎಂದು ಎಲ್ಲರು ಹೇಳಿಕೊಳ್ಳುತ್ತಾರೆ.ಆದರೆ ಶಿಕಾರಿಪುರದಲ್ಲಿ ತಂದೆ ಇಚ್ಚೆಯಂತೆ ಮಗ ನಡೆದುಕೊಳ್ಳುತ್ತಿದ್ದಾರೆ. ಎಂದು ಯತ್ನಾಳ ಗೌಡ್ರು ಪ್ರತಿಕ್ರಿಯೆ ನೀಡಿದ್ರು.
*ಸಿದ್ರಾಮೋತ್ಸವದ ವಿಚಾರ*
ಇವೆಲ್ಲ ನಿವೃತ್ತಿ ಉತ್ಸವಗಳು
ಸಿದ್ದರಾಮಯ್ಯಮವರಿಗೆ ಇನ್ನು ೭೫ ವರ್ಷ ಆಗಿಲ್ಲಒಂದು ವರ್ಷ ಮೊದಲೇ ಆಚರಣೆ ಮಾಡಿಕೊಳ್ಳುತ್ತಿದ್ದಾರೆ.
ಅವರಿಗೆ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲ್ಲ,ಅದಕ್ಕೆ ಟೂ ಇನ್ ಒನ್ ಉತ್ಸವ ಹಾಗು ನಿವೃತ್ತಿ ಎರಡು ಮಾಡಿಕೊಳ್ಳುತ್ತಿದ್ದಾರೆ. ಎಂದು ಬಸನಗೌಡ ಯತ್ನಾಳ ಹೇಳಿದ್ರು.
ಸಚಿವ ಸ್ಥಾನದ ಆಕಾಂಕ್ಷಿಗಳ ಹೆಚ್ಚಳ.
ಬೊಮ್ಮಾಯಿ ಅವರಿಗೆ ಯಾರೂ ಸಚಿವ ಸ್ಥಾನ ಕೇಳುತ್ತಿಲ್ಲ, ಅವರೇ ಕ್ರಿಯೇಟ್ ಮಾಡುತ್ತಾರೆ.
ನಾನು ದೆಹಲಿಗೆ ಹೋಗುತ್ತಿದ್ದೇನೆ.
ವರಿಷ್ಠರೊಂದಿಗೆ ಮಾತನಾಡಿ ಸಂಪುಟ ರಚನೆ ಮಾಡುತ್ತೇನೆ ಎಂದು ಹೇಳುತ್ತಾರೆ.ಚುನಾವಣೆ ಸಮೀಪಿಸುತ್ತಿದೆ ನಮಗೆ ಯಾವ ಮಂತ್ರಿಗಿರಿ ಬೇಡ
ಇದ್ದ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಕೊಡಿ ಸಾಕು.
೮ ತಿಂಗಳಿಗೆ ಸಚಿವರಾಗಿ ಮಾಡುವುದೇನು ಇಲ್ಲ.
ನನ್ನ ಕ್ಷೇತ್ರದಲ್ಲಿ ನಾನು ಸಾವಿರ ಕೋಟಿಯ ಅಭಿವೃದ್ಧಿ ಮಾಡುತ್ತಿದ್ದೇನೆ.
ಮಂತ್ರಿ ಆದರೆ ಇಷ್ಟು ಅನುದಾನ ಬರಲ್ಲ.
ನಿನಗೆ ಮಂತ್ರಿ ಮಾಡೇವಿ ಅಂತ ಹೇಳ್ತಾರೆ. ಮಂತ್ರಿ ಮಾಡಿರುವ ಉಪಕಾರಕ್ಕೆ ನಾವು ಸುಮ್ಮನಿರಬೇಕಾಗುತ್ತೆ. ಎಂದು ಯತ್ನಾಳ ಹೇಳಿದ್ರು.
೪ ತಲೆ ಮಾರಿಗಾಗುವಷ್ಟು ಮಾಡಿಕೊಂಡಿದ್ದೇವೆ ಎಂದು ರಮೇಶ್ ಕುಮಾರ್ ಹೇಳಿಕೆ ವಿಚಾರ
ರಮೇಶ್ ಕುಮಾರ್ ಹೇಳಿದ್ದು ನೂರಕ್ಕೆ ನೂರು ಸತ್ಯ ಅವರು ಬಹಳ ವರ್ಷದ ನಂತರ ಸತ್ಯ ನುಡಿದಿದ್ದಾರೆ.೪೦ ವರ್ಷದ ರಾಜಕೀಯದಲ್ಲಿ ಇವತ್ತು ಸತ್ಯ ಹೇಳಿದ್ದಾರೆ.
೪ ೫ ತಲಿ ಎಲ್ಲ ರಾಜಕಾರಣಿಗಳು ಮಾಡಿಕೊಂಡಿದ್ದಾರೆ.
ಗಾಂಧಿ ಮನೆತನ, ಕಾಂಗ್ರೆಸ್ ಪಕ್ಷದ ಹೆಸರ ಮೇಲೆ ಮಾಡಿಕೊಂಡಿದ್ದಾರಲ್ಲ ಅದಕ್ಕೆ ಹೇಳಿದ್ದಾರೆ ಪಾಪ.
ಕಾಂಗ್ರೆಸ್ ಪಕ್ಷಕ್ಕೆ ಅಷ್ಟೆ ಹೇಳಿದ್ದಾರೆ ಉಳಿದ ಪಕ್ಷಗಳಿಗೆ ಹೇಳಿಲ್ಲ ಎಂದು ಯತ್ನಾಳ ವ್ಯಂಗ್ಯವಾಡಿದ್ರು.