ಬೆಳಗಾವಿ-ಗುಜರಾತನ ಪಟೇಲ್ ಸಮುದಾಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಡಿ.22ರಂದು ಬೆಳಗಾವಿಯ ಸುವರ್ಣ ವಿಧಾನಸೌಧ ಮುಂದೆ ನಮ್ಮ 25 ಲಕ್ಷ ಪಂಚಮಸಾಲಿಗರನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡೋಣ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಎಂದು ಕರೆ ನೀಡಿದರು.
ಮೀಸಲಾತಿ ಕೊಟ್ಟರೆ ಸನ್ಮಾನ ಕೊಡದಿದ್ದರೆ ಡಿ.22ರಂದು ಸುವರ್ಣವಿಧಾನಸೌಧ ಎದುರಿಗೆ ವಿರಾಟ ಪಂಚಶಕ್ತಿ ಸಮಾವೇಶದ ಅಂಗವಾಗಿ ಸೋಮವಾರ ನಗರದ ಗಾಂಧಿ ಭವನದಲ್ಲಿ ಕೂಡಲಸಂಗಮ ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪಂಚಮಸಾಲಿ ರಾಜ್ಯ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅಂತಿಮ ಘಟ್ಟಕ್ಕೆ ನಮ್ಮ ಹೋರಾಟ ಬಂದಿದೆ. ನಮ್ಮಲ್ಲಿ ಯಾವುದೇ ಡೆಡಲೈನ್, ಲೈಫಲೈನ್ ಪ್ರಶ್ನೆಯೇ ಇಲ್ಲ. ಸಿಎಂ ಬೊಮ್ಮಾಯಿ ಅವರೇ ಕೊಡುತ್ತೇನೆ ಎಂದು ಹೇಳಿ, ಈಗ ಸುಮ್ಮನಾಗಿದ್ದಾರೆ. ಹೋರಾಟದ ಕಾವು ಇಳಿಸಬಾರದು ಎಂದು ಡಿ.22ರಂದು ವಿರಾಟ ಸಮಾವೇಶ ನಡೆಸುತ್ತಿದ್ದೇವೆ. ಪಕ್ಷದ ವಿರುದ್ಧ ನಾನು ಮಾತನಾಡಿದರೂ ನನ್ನ ವಿರುದ್ಧ ಕ್ರಮ ಆಗದೇ ಇರುವುದು ಬೆಂಗಳೂರಿನ ನಮ್ಮ ಪಂಚಮಸಾಲಿ ಸಮಾಜದ ಶಕ್ತಿ ಪ್ರದರ್ಶನದ ಪರಿಣಾಮ. ದಿಲ್ಲಿಗೆ ಹೋದರೆ ಅಪಾಯಂಟ್ಮೆಂಟ ಕೊಡುತ್ತಿರಲಿಲ್ಲ. ಆದರೆ ಈಗ ಅವರೇ ಬಂದು ಭೇಟಿ ಆಗುತ್ತಿದ್ದಾರೆ. ಚನ್ನಮ್ಮನ ನಾಡಿನಲ್ಲಿ ಐತಿಹಾಸಿಕ ತೀರ್ಮಾನ ಆಗಲಿದೆ.ಎಂದರು
ನೂರಕ್ಕೆ ನೂರು ಗಟ್ಟಿಯಾಗಿ ನಿಂತಿದ್ದೇನೆ. ಪಕ್ಷದಿಂದ ನನ್ನ ಹೊರ ಹಾಕಲು ಸಾಧ್ಯವಿಲ್ಲ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಿಕ್ಕೇ ಸಿಗುತ್ತದೆ. ಮೀಸಲಾತಿ ಸಿಕ್ಕ ತಕ್ಷಣ ಶ್ರೀಗಳಿಗೆ ಕೂಡಲಸಂಗಮದಲ್ಲಿ ಮಠ ಕಟ್ಟಲು 1 ಕೋಟಿ ರೂಪಾಯಿ ಕೊಡುತ್ತೇನೆ. ಸಿ.ಸಿ. ಪಾಟೀಲರು ಕೊಡುತ್ತೇವೆ ಎಂದಿದ್ದಾರೆ. ತುಮಕೂರಿನ ಸಿದ್ಧಗಂಗಾ ಮಠದ ಮಾದರಿಯಲ್ಲಿ ಮಠ ಕಟ್ಟುತ್ತೇನೆ. ಸಮಾಜದ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತೇವೆ ಎಂದರು.
ಕೂಡಲಸಂಗಮ ಸ್ವಾಮೀಜಿ ಮಾತನಾಡಿ ಸವದತ್ತಿಯಲ್ಲಿ ಸೆಮಿಫೈನಲ್, ಬೆಳಗಾವಿ ಸುವರ್ಣಸೌಧ ಮುಂದೆ ಫೈನಲ್ ಹೋರಾಟ ನಡೆಯಲಿದೆ. ಡಿ.19ರಂದು ಸವದತ್ತಿಯಲ್ಲಿ ಸಮಾವೇಶ ನಡೆಯಲಿದೆ ಎಂದು ವಿವರಿಸಿದರು.
ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ ಮೀಸಲಾತಿ ಹೋರಾಟದ ಅಂತಿಮ ಘಟ್ಟಕ್ಕೆ ಬಂದು ನಿಂತಿದ್ದೇವೆ. ಒಂದೇ ಸಮಾಜದಿಂದ ಎನೂ ಮಾಡಲು ಆಗೋದಿಲ್ಲ. ಆದರೆ ನಮ್ಮ ಸಮಾಜಕ್ಕೆ ಏನಾದರು ಕೊಡಬೇಕಲ್ಲ. ರಾಷ್ಟ್ರಿಯ ಮಾಧ್ಯಮಗಳಲ್ಲಿಯೂ ನಮ್ಮ ಹೋರಾಟದ ಬಗ್ಗೆ ಚರ್ಚೆ ಆಗುತ್ತಿದೆ. ಕೊನೆಯ ಘಳಿಗೆಯಲ್ಲಿ ಜಾಸ್ತಿ ಶ್ರಮ ಹಾಕೋಣ, ಸ್ಮಾರ್ಟ ಕೆಲಸ ಮಾಡೋಣ, ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರ ಸೇರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ಸಿಎಂ ಬೊಮ್ಮಾಯಿ ಅವರು ಯಾವುದೇ ನಿರ್ಣಯ ಕೈಗೊಳ್ಳುವ ಮುನ್ಸೂಚನೆ ಕಾಣುತ್ತಿಲ್ಲ. ಇದು ನಮ್ಮ ದುರ್ದೈವ. ಇದರಿಂದ ನಮ್ಮ ಸ್ವಾಮೀಜಿಗಳಿಗೆ ಹಾಗೂ ದೊಡ್ಡ ಸಮುದಾಯಕ್ಕೆ ಅಪಮಾನ ಮಾಡುತ್ತಿದ್ದಾರೆ.
ನಮ್ಮ ವಿರಾಟ ಸಮಾವೇಶದ ತಯಾರಿ ನೋಡಿಯೇ ಸಿಎಂ ಬೊಮ್ಮಾಯಿ ಅವರು ಏನಾದರೂ ನಿರ್ಧಾರ ಕೈಗೊಳ್ಳುವಂತೆ ಮಾಡೋಣ.ಗ್ರಾಮೀಣ ಕ್ಷೇತ್ರದಲ್ಲಿ ನನ್ನ ಸಮಾಜದ ಸಂಖ್ಯೆ ಬಹಳಷ್ಟು ಕಡಿಮೆಯಿದೆ. ಆದರೂ ವಿರಾಟ ಸಮಾವೇಶಕ್ಕೆ ನಾನು ಮತ್ತು ನನ್ನ ಕುಟುಂಬ ಎಲ್ಲ ರೀತಿಯ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ. ಕರ್ನಾಟಕದಲ್ಲಿ ಈ ಸಮಾಜ ಬಿಟ್ಟರೆ ನಡೆಯೋದಿಲ್ಲ ಎಂಬ ಸಂದೇಶ ಕೊಡೋಣ.ಎಂದು ಹೇಳಿದ್ರು.
ವಿಧಾನಪರಿಷತ ಸದಸ್ಯ ಪ್ರಕಾಶ ಹುಕ್ಕೇರಿ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ,
ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ, ಮಹಾಂತೇಶ ದೊಡ್ಡಗೌಡರ, ಮಾಜಿ ಸಚಿವರಾದ ಎ.ಬಿ. ಪಾಟೀಲ, ಶಶಿಕಾಂತ ನಾಯಿಕ, ಕಾಡಾ ಅಧ್ಯಕ್ಷ ಡಾ. ವಿಶ್ವನಾಥ ಪಾಟೀಲ, ಆರ್.ಕೆ. ಪಾಟೀಲ, ರೋಹಿಣಿ ಪಾಟೀಲ,
ಯುವ ಘಟಕದ ಜಿಲ್ಲಾಧ್ಯಕ್ಷ ಗುಂಡು ಪಾಟೀಲ ಸ್ವಾಗತಿಸಿದರು. ಸ್ವಾಗತ ಸಮಿತಿ ಅಧ್ಯಕ್ಷರಾಗಿ ಎ.ಬಿ. ಪಾಟೀಲರನ್ನು ಆಯ್ಕೆ ಮಾಡಲಾಯಿತು.