ಬೆಳಗಾವಿ- ಎಪಿಎಂಸಿ ಅದ್ಯಕ್ಷ ಯುವರಾಜ್ ಕದಂ ಇಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಸಾಹುಕಾರ್ ಗೆ ಎಪಿಎಂಸಿಯಲ್ಲಿ ಔತನಕೂಟ ಏರ್ಪಡಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಇಂದು ಮದ್ಯಾಹ್ನ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ಎಪಿಎಂಸಿ ಗೆ ಭೇಟಿ ನೀಡಿ ಯುವರಾಜ್ ಕದಂ ಅವರ ಜೊತೆ ಲಂಚ್ ಮಾಡಿದ್ರು.
ಯುವರಾಜ್ ಕದಂ,ರಮೇಶ್ ಸಾಹುಕಾರ್ ಜೊತೆ ಲಂಚ್ ಮಾಡುವದರ ಜೊತೆ ಪ್ರತ್ಯೇಕವಾಗಿ ಕಾಲಕಳೆದರು.ಯುವರಾಜ್ ಕದಂ ಅವರು ಸಚಿವ ರಮೇಶ್ ಜಾರಕಿಹೊಳಿ ಅವರ ಜೊತೆ ತಮ್ಮ ಚೇಂಬರ್ ನಲ್ಲಿ ಪ್ರತ್ಯೇಕವಾಗಿ ಚರ್ಚೆ ಮಾಡಿದರು.
ಯುವರಾಜ ಕದಂ ಸಾಹುಕಾರ್ ಜೊತೆ ಚರ್ಚೆ ಮಾಡಿದ್ದೇನು ? ಸಚಿವರಿಗೆ ಎಪಿಎಂಸಿಯಲ್ಲಿ ಔತಣಕೂಟ ಏರ್ಪಡಿಸಿ ಎಪಿಎಂಸಿ ಅದ್ಯಕ್ಷರನ್ನಾಗಿಸಿದ್ದಕ್ಕೆ ಕೃತಜ್ಞೆತೆ ಸಲ್ಲಿಸಿದ್ರಾ ಕದಂ ? ಯುವರಾಜ್ ಕದಂ ಅವರನ್ನು ಬಿಜೆಪಿಗೆ ಸೆಳೆಯಲು ಸಾಹುಕಾರ್ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದಾರೆಯೇ ? ಎನ್ನುವ ಹಲವಾರು ಪ್ರಶ್ನೆಗಳು ಎದುರಾಗಿವೆ.
ಯುವರಾಜ್ ಕದಂ ಸಚಿವ ರಮೇಶ್ ಜೊತೆ ಲಂಚ್ ಮಾಡುವದಲ್ಲದೇ ಸಚಿವರ ಕಾರಿನಲ್ಲಿಯೇ ಸರ್ಕ್ಯುಟ್ ಹೌಸ್ ಗೆ ತೆರಳಿ ಅಲ್ಲಿಯೂ ಸಾಹುಕಾರ್ ರಮೇಶ್ ಜಾರಕಿಹೊಳಿ ಅವರು ಯುವರಾಜ್ ಕದಂ ಅವರ ಜೊತೆ ಗುಪ್ತ ಸಮಾಲೋಚನೆ ನಡೆಸಿದ್ದು ಎಲ್ಲರಲ್ಲಿ ಕುತೂಹಲ ಕೆರಳಿಸಿದೆ.
ಇಂದು ಬೆಳಿಗ್ಗೆ ಸಚಿವ ರಮೇಶ್ ಜಾರಕಿಹೊಳಿ ಅವರು ಯುವರಾಜ್ ಕದಂ ಅವರನ್ನು ಎಪಿಎಂಸಿ ಅದ್ಯಕ್ಷ ಮಾಡಿದ್ದು ನಾನೇ ಎಂದು ಹೇಳಿದ ಬಳಿಕ ಇದು ಬೇಜವಾಬ್ದಾರಿ ಹೇಳಿಕೆ,ಚೈಲ್ಡೀಶ್ ಹೇಳಿಕೆ ಎಂದು ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದನ್ನು ಗಮನಿಸಿದರೆ ಸಾಹುಕಾರ್ ಮತ್ತು ಲಕ್ಷ್ಮೀ ಹೆಬ್ಬಾಳಕರ ನಡುವೆ ವಾಕ್ ಸಮರ ಶುರುವಾಗಿದೆ.
ಲಕ್ಷ್ಮೀ ಹೆಬ್ಬಾಳಕರ ಅವರ ಪರಮಾಪ್ತರಾಗಿರುವ ಯುವರಾಜ್ ಕದಂ ಅವರ ಮುಂದಿನ ನಡೆ,ಯಾವ ಕಡೆ ಎನ್ನುವದು ನಿಗೂಢವಾಗಿದೆ.ಆದ್ರೆ ಯುವರಾಜ್ ಕದಂ ಸಾಹುಕಾರ್ ಗರಡಿಯತ್ತ ಮುಖ ಮಾಡಿರುವದು ಸತ್ಯ.