ಬೆಳಗಾವಿಯಲ್ಲಿ ಗೋವಾ ಸಿಎಂ ಭಾವಚಿತ್ರ ದಹನ

ಬೆಳಗಾವಿ- ಮಹಾದಾಯಿ ಸಭೆಗೆ ಕೈ ಕೊಟ್ಡ ಗೋವಾ ಮುಖ್ಯಮಂತ್ರಿಗಳ ಹಠಮಾರಿ ಧೋರಣೆ ಖಂಡಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಬೆಳಗಾವಿಯಲ್ಲಿ ಗೋವಾ ಸಿಎಂ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿತು

ಮಹಾದಾಯಿ ನದಿ ನೀರಿನ ಹಂಚಿಕೆ ವಿವಾದ ಕುರಿತು ನಾಳೆ ನಡೆಯಬೇಕಿದ್ದ ಗೋವಾ, ಕರ್ನಾಟಕ, ಮಹಾರಾಷ್ಟ್ರ ಮುಖ್ಯಮಂತ್ರಿಗಳ ಇತ್ಯರ್ಥ ಸಭೆಗೆ ಆಗಮಿಸಲು ಕುಂಟು ನೆಪ ಹಾಕಿ ಗೈರಾಗಲು ಉದ್ದೇಶಿರುವ ಗೋವಾ ಮುಖ್ಯಮಂತ್ರಿ ವಿರುದ್ದ ಬೆಳಗಾವಿಯಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಇಂದು ಬೆಳಿಗ್ಗೆ ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕನ್ನಡ ಹೋರಾಟಗಾರರು ಲಕ್ಷ್ಮೀಕಾಂತ್ ವಿರುದ್ದ ಘೋಷಣೆ ಕೂಗಿದರು. ಗೋವಾಕ್ಕೆ ಕರ್ನಾಟಕದೊಂದಿಗೆ ಸಹಕರಿಸಿ ಕುಡಿಯುವ ನೀರಿನ ಹಂಚಿಕೆ ಬಗೆಹರಿಸಿಕೊಳ್ಳುವ ಸೌಜನ್ಯ ಮತ್ತು ಮನಸ್ಸಿಲ್ಲ ಎಂದು ಭೀಮಾಶಂಕರ ಆರೋಪಿಸಿದರು.

Check Also

ಕುಂಭಮೇಳದಿಂದ ವಾಪಸ್ ಬರುವಾಗ ಬೆಳಗಾವಿಯ ನಾಲ್ವರ ಸಾವು

ಬೆಳಗಾವಿ- ಮಹಾ ಕುಂಭಮೇಳಕ್ಕೆ ಹೋಗಿ ವಾಪಾಸ್ ಆಗುವಾಗ ಟಿ.ಟಿ ವಾಹನ ಅಪಘಾತಕ್ಕೀಡಾಗಿ ಬೆಳಗಾವಿಯ ನಾಲ್ವರು ಮೃತಪಟ್ಟಿರುವ ಘಟನೆ ನಡೆದಿದೆ.ಬೆಳಗಾವಿಯ ಶಹಾಪುರ …

Leave a Reply

Your email address will not be published. Required fields are marked *