Breaking News

ಬೆಳಗಾವಿಯ, ದೇವದಾಸಿ ಅಮ್ಮನ ಸಂಕಷ್ಟಕ್ಕೆ ಮನಕುಲಕುವ ಸ್ಪಂದನೆ…….!

ಬೆಳಗಾವಿ- ದೇವದಾಸಿ ಅಮ್ಮ ಈ ಅಮ್ಮನಿಗೆ ಇಬ್ಬರು ಮಕ್ಕಳು,ತಗಡಿನ ಸೆಡ್ಡಿನಲ್ಲಿ ವಾಸ,ಮಗಳ ಆನ್ ಲೈನ್ ಕ್ಲಾಸಿಗೆ ಮೋಬೈಲ್ ಖರೀದಿ ಮಾಡಲು ಕಿವಿಯೊಲೆ ಮಾರಿದ ಮಹಾತಾಯಿಯ ಸಂಕಷ್ಟಕ್ಕೆ ಬೆಳಗಾವಿಯ ಬಿಜೆಪಿ ನಾಯಕನೊಬ್ಬ ಸ್ಪಂದಿಸಿ ಬೆಳಗಾವಿಯಲ್ಲಿ ಮಾನವೀಯತೆಯ ಶಿಲನ್ಯಾಸ ಮಾಡಿದ ಅಪರೂಪದ ಪ್ರಸಂಗ ಬೆಳಗಾವಿಯಲ್ಲಿ ನಡೆಯಿತು

ಇಡೀ ದೇಶವೇ ಶ್ರೀರಾಮ ಮಂದಿರದ ಶಿಲನ್ಯಾಸ ಕಾರ್ಯಕ್ರಮ ದಲ್ಲಿ ಮುಳುಗಿರುವಾಗ ಬೆಳಗಾವಿಯ ವೀರೇಶ ಕಿವಡಸಣ್ಣವರ ಸಂಕಷ್ಟದಲ್ಲಿದ್ದ ಆ ದೇವದಾಸಿ ಮಹಾತಾಯಿಗೆ ಹೊಸ ಕಿವಿಯೊಲೆ ಕೊಡಿಸಿ,ಅಗತ್ಯ ಸಾಮಗ್ರಿಗಳನ್ನು ಕೊಡಿಸಿ,ಅಮ್ಮಾ ನೀ ಹೆದೆಬೇಡ ನಿನ್ನ ಮಕ್ಕಳಿಗೆ ಶಿಕ್ಷಣ ಕೊಡಿಸುವ ಜವಾಬ್ದಾರಿ ನನ್ನದು,ನಿನಗೆ ಒಳ್ಳೆಯ ಸೂರು ಒಸಗಿಸುವೆ ಪ್ರತಿಯೊಂದು ಸಂಕಷ್ಟದಲ್ಲಿಯೂ ನಾನಿರುವೆ ಎನ್ನುವ ಧೈರ್ಯ ಹೇಳಿದ ಪ್ರಸಂಗ ಅಲ್ಲಿದ್ದವರ ಮನಕುಲಕಿತು.

ಬಿಜೆಪಿ ನಾಯಕ ವೀರೇಶ ಕಿವಡಸಣ್ಣವರ ಮಾದ್ಯಮಗಳಲ್ಲಿ ಪ್ರಕಟವಾದ ವರದಿಗೆ ಸ್ಪಂದಿಸಿ ಆ ಮಹಾತಾಯಿಯನ್ನು ಹುಡುಕಿ ಅವಳಿಗೆ ಎಲ್ಲ ರೀತಿಯ ಸಹಾಯ ಮಾಡಿ ವೀರೇಶ್ ಇಂದು ಬೆಳಗಾವಿಯಲ್ಲಿ ಮಾನವೀಯತೆಯ ಸಮಂಧಕ್ಕೆ ಶಿಲನ್ಯಾಸ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ

ಸಾರ್ವಜನಿಕರ ಮನಕರಗುವ ಈ ಘಟನೆಯಲ್ಲಿ ಜನಮಾಸದ ಪರವಾಗಿ ಸಮಾಜ ಸೇವಕ ವಿರೇಶ ಕಿವಡಸನ್ನವರ ಇಂದು ಆ ಮಹಾತಾಯಿಗೆ ಹೊಸ ಚಿನ್ನದ ಕಿವಿಯೊಲೆಗಳನ್ನು ಕೊಡಿಸಿ ಅವಳ ಮೊಗದಲ್ಲಿ ಮಂದಹಾಸ ಕಂಡ ದೃಶ್ಯ ವಿಶೇಷವಾಗಿತ್ತು.
ಸರಕಾರಿ ಸರದಾರ್ಸ್ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿರುವ ಮಗಳು ರೇಣಕಾಳ ವಿದ್ಯಾಭ್ಯಾಸಕ್ಕಾಗಿ ತಾಯಿ ಸರೋಜಿನಿ ಬೇವಿನಕಟ್ಟಿ ಪಡುತ್ತಿರುವ ಕಷ್ಟ ನಷ್ಟ ಸಮಾಜದ ಕಣ್ಣು ತೆರೆಸಿದೆ.
ಶಕ್ತಿದೇವಿ ಸವದತ್ತಿ ಯಲ್ಲಮ್ಮನ ದೇವದಾಸಿಯಾಗಿ ಬೇಡಿ ತಿನ್ನುವ ಸರೋಜಮ್ಮನಿಗೆ ತಗಡಿನ ಸೆಡ್ಡೊಂದೆ ತಲೆಗೆ ಸೂರು…!
ಉಣ್ಣಲು ಆಹಾರವಿಲ್ಲದೇ ಪರದಾಡುವ ಪರಿಸ್ಥಿತಿಯ ಈ ಕುಟುಂಬಕ್ಕೆ ಆಕೆಯ ಮಗನೊಬ್ಬ ಎರಡೂ ಕಾಲುಗಳು ಸ್ವಾಧೀನವಿಲ್ಲದೇ ಹಾಸಿಗೆ ಹಿಡಿದಿರುವುದು ಇನ್ನೊಂದು ಆಘಾತ ಸೃಷ್ಟಿಸಿದ್ದು, ನೋಡುಗರ ಕಣ್ಣಂಚಲ್ಲಿ ನೀರು ತರಿಸುತ್ತದೆ.
ಭಾರಿ ಮಳೆಗೆ ತಗಡಿನ ಸೆಡ್ಡು ಸೋರಿ ಆತಂಕದ ಜೀವನ ತಳ್ಳುತ್ತಿದ್ದ ಕುಟುಂಬದ ಬಳಿ ಇಂದು ವಿರೇಶ ಕಿವಡಸನ್ನವರ ಮತ್ತು ಮಾಧ್ಯಮಗಳು ತೆರಳಿದಾಗ ಭಾವನಾತ್ಮಕ ಸಂದರ್ಭ ಸೃಷ್ಟಿಯಾಯಿತು.
ಕುಟುಂಬಕ್ಕೆ ರೇಷನ್ ಸಹಿತ ಮನೆಗೆ ಬೇಕಾಗುವ ಎಲ್ಲ ಸಾಮಗ್ರಿ ಸಹ ಕೊಡಿಸಲಾಯಿತು.
ಓದುವ ಉತ್ಸುಕತೆ ಹೊಂದಿರುವ ರೇಣುಕಾಳನ್ನು ಶೈಕ್ಷಣಿಕ ದತ್ತು ತೆಗೆದುಕೊಳ್ಳಲಾಗುವುದು, ಆ ಕುಟುಂಬಕ್ಕೆ ಯೋಗ್ಯವಾದ ವಸತಿ ವ್ಯವಸ್ಥೆ ತತಕ್ಷಣ ಮಾಡಲಾಗುವುದು, ಹಾಸಿಗೆ ಹಿಡಿದ ಸರೋಜಮ್ಮನ ಮಗನಿಗೆ ತಮ್ಮ ಕಚೇರಿಯಲ್ಲಿ ರಿಶಪ್ಶನ್ ಕೆಲಸ ನೀಡುವುದಾಗಿ ವಿರೇಶ ಕಿವಡಸನ್ನವರ ಇದೇ ಸಂದರ್ಭ ಘೋಷಿಸಿದರು.
ರೇಣುಕಾ ಯಲ್ಲಮ್ಮನ ದೇವದಾಸಿಯಾಗಿ ಬೇಡಿ ಹೊಟ್ಟೆ ಹೊರೆಯುವ ಸರೋಜಮ್ಮನಿಗೆ ಸಾಮಾಜಿಕವಾಗಿ ಸಿಕ್ಕ ಆಸರೆ ಮತ್ತು ಭರವಸೆ ದುಖಃಭರಿತ ಆನಂದಭಾಷ್ಪ ಅವಳಲ್ಲಿ ಉಂಟು ಮಾಡಿತು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಉಜ್ವಲಾ ಬಡವನಾಚೆ, ವಿರೇಶ ಕಿವಡಸನ್ನವರ ಅವರ ಸಹೋದರಿ ಮಂಜುಳಾ ಕೋಟಗಿ, ಸಮಾಜ ಸೇವಕ ಕನ್ನುಭಾಯಿ ಠಕ್ಕರ್ ಇತರರು ಉಪಸ್ಥಿತರಿದ್ದರು.

Check Also

ಬೆಳಗಾವಿ- ಗೋಕಾಕ್ ರಸ್ತೆಯಲ್ಲಿ ಪೋಲೀಸರಿಗೆ ಸಿಕ್ಕಿದ್ದೇನು ಗೊತ್ತಾ.?

ಬೆಳಗಾವಿ- ಬೆಳಗಾವಿ- ಗೋಕಾಕ್ ರಸ್ತೆಯಲ್ಲಿ ಬೆಳಗಾವಿಗೆ ಸಾಗಿಸಲಾಗುತ್ತಿದ್ದ ಗಾಂಜಾ ,ಬೆಳಗಾವಿಯ ಸಿಇಎನ್ ಸೈಬರ್ ಕ್ರೈಂ ಪೋಲೀಸರು ವಶಪಡಿಸಿಕೊಂಡಿದ್ದಾರೆ. ಬೆಳಗಾವಿ ನಗರದ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.