ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗದ ಸಿಬ್ಬಂದಿಗಳು ಪಟಾಕಿ ಸಿಡಿಸದೇ ಇದೇ ಹಣವನ್ನು ಅಸಹಾಯಕರಿಗೆ ಸಹಾಯ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ
ಪಾಲಿಕೆ ಆವರಣದಲ್ಲಿ ಪ್ರತಿವರ್ಷ ಸಾರ್ವಜನಿಕ ಗಣೇಶನನ್ನು ಪರತಿಷ್ಟಾಪನೆ ಮಾಡುತ್ತಾರೆ ಪಾಲಿಕೆ ವಿವಿಧ ವಿಭಾಗದವರು ಒಂದೊಂದು ದಿನ ಶ್ರೀ ಗಣೇಶನಿಗೆ ಮಹಾ ಪೂಜೆ ನೆರವೇರಿಸಿ ಪಟಾಕಿ ಸಿಡಿಸಿ ಆರತಿ ಮಾಡುವದು ಸಂಪ್ರದಾಯವಾಗಿದೆ ಆದರೆ ಪಾಲಿಕೆಯ ಆರೋಗ್ಯ ವಿಭಾಗದವರು ಪಟಾಕಿ ಸಿಡಿಸದೇ ಇದೇ ಹಣವನ್ನು ರೈಲ ನಗರದಲ್ಲಿರುವ ಸ್ಪಂದನ ದಾಮದ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ಖರೀದಿಸಿದ್ದಾರೆ
ಆರೋಗ್ಯ ವಿಭಾಗದ ಮುಖ್ಯಸ್ಥ ನಾಡಗೌಡರು ಪಟಾಕಿ ಹಣದಲ್ಲಿ ಮಕ್ಕಳಿಗೆ ಟೀಪಾಯ ಖುರ್ಚಿ ಸೇರಿದಂತೆ ಇತರ ವಸ್ತುಗಳನ್ನು ನೀಡಿದ್ದಾರೆ
ಸುಮಾರು ಹತ್ತು ಸಾವಿರ ಪಟಾಕಿ ಹಣವನ್ನು ಉಳಿತಾಯ ಮಾಡಿರುವ ಪಾಲಿಕೆ ಆರೋಗ್ಯ ವಿಭಾಗದ ಸಿಬ್ಬಂಧಿಗಳು ಈ ಹಣವನ್ನು ಕಳೆದ ಮೂರು ವರ್ಷಗಳಿಂದ ಊರಿತಾಯ ಮಾಡಿ ಅಸಹಾಯಕರಿಗೆ ಸಹಾಯ ಮಾಡಿ ಮೆಚ್ಚಗೆಗೆ ಪಾತ್ರರಾಗಿದ್ದಾರೆ
Check Also
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …