ಬೆಳಗಾವಿ-ಗುರುವಾರ ಮಧ್ಯಾಹ್ನ ನಾಲ್ಕು ಘಂಟೆಗೆ ಆರಂಭವಾದ ಗಣೇಶ ವಿರ್ಜನಾ ಮೆರವಣಿಗೆ ಶುಕ್ರವಾರ ಮಧ್ಯಾಹ್ನ ಮೂರು ಘಂಟೆಗೆ ಮುಕ್ತಾಯವಾಯಿತು
ಬೆಳಗಾವಿ ನಗರದಲ್ಲಿ ನಡೆದ ಐತಿಹಾಸಿಕ ಗಣೇಶ ವಿಸರ್ಜನೆಯ ಮೆರವಣಿಗೆಯಲ್ಲಿ 357 ಸಾರ್ವಜನಿಕ ಮಂಡಳಗಳ ಗಣೇಶ ಮೂರ್ತಿಗಳು ಭಾಗವಹಿದ್ದವು ಮೆರವಣಿಗೆಯಲ್ಲಿ ಭಾಗವಹಿಸಿದ್ದ ಲಕ್ಷಾಂತರ ಜನ ಭಕ್ತರು ವಿಘ್ನ ವಿನಾಯಕನಿಗೆ ಭಕ್ತಿಯ ವಿದಾಯ ಹೇಳಿದರು
ಅಲ್ಲಲ್ಲಿ ಸಣ್ಣ ಪುಟ್ಟ ಘರ್ಷಣೆಗಳನ್ನು ಹೊರತುಪಡಿಸಿದರೆ ಮೆರವಣಿಗೆ ಶಾಂತವಾಗಿ ಮುಕ್ತಾಯವಾಯಿತು ಹುತಾತ್ಮ ಚೌಕ ಮಂಡಳದ ಗಣೇಶ ಪ್ರಥಮವಾಗಿ ಕಪೀಲೇಶ್ವರ ಹೊಂಡದಲ್ಲಿ ವಿಸರ್ಜನೆಗೊಂಡರೆ ಶುಕ್ರವಾರ ಮಧ್ಯಾಹ್ನ ಮೂರು ಘಂಟೆಗೆ ಖಡಕ್ ಗಲ್ಲಿ ಗಣೇಶ ವಿಸರ್ಜನೆಯಾಗಲಿದ್ದಾನೆ
24 ಘಂಟೆಗಳ ಕಾಲ ನಡೆದ ಅಭೂತಪೂರ್ವ ಮೆರವಣಿಗೆಯಲ್ಲಿ ದೇಶಿ ಸಂಸ್ಕøತಿಯನ್ನು ಬಿಂಬಿಸುವ ವಾದ್ಯಮೇಳಗಳು ಸಂಪ್ರದಾಯಿಕ ನೃತ್ಯಗಳು ಜನಮನಸೆಳೆದವು ಈ ಮೆರವಣಿಗೆಗೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು
ನಗರ ಪೋಲಿಸ್ ಆಯುಕ್ತ ಕೃಷ್ಣಭಟ್ ಅವರು ಮೆರವಣಿಗೆಯ ಮೇಲೆ ನಿರಂತರವಾಗಿ ನಿಗಾ ವಹಿಸಿ ಯಾವುದೇ ರೀತಿಯ ಘಟನೆಗಳು ನಡೆಯದಂತೆ ನೋಡಿಕೊಂಡರು
ಪಾಲಿಕೆ ಆಯುಕ್ತ ಜಿ ಪ್ರಭು ಅಭಿಯಂತಕಿ ಲಕ್ಷ್ಮೀ ನಿಪ್ಪಾನಿಕರ ಉದಯಕುಮಾರ ,ನಾಡಗೌಡಾ ಅರ್ಜುನ ದೇಮಟ್ಟಿ ಹೀರೇಮಠ ಜೋಡಿ ಸೇರಿದಂತೆ ಪಾಲಿಕೆಯ ಅಧಿಕಾರಿಗಳು ಕಪಿಲೇಶ್ವರ ಹೊಂಡದಲ್ಲಿ ಇದ್ದುಕೊಂಡು ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಂಡರು
Check Also
ಬೆಳಗಾವಿ ಮಹಾನಗರದ ಅಪಾಯಕಾರಿ ತಂತಿಗಳ ತೆರವು
ಗಣೇಶೋತ್ಸವ- ಅಪಾಯಕಾರಿ ವಿದ್ಯುತ್ ತಂತಿಗಳ ತೆರವು; ಮಾರ್ಗಗಳ ಎತ್ತರ ಹೆಚ್ಚಳ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಬೆಳಗಾವಿ, -ಗಣೇಶೋತ್ಸವ ಹಿನ್ನೆಲೆಯಲ್ಲಿ …