ಬೆಳಗಾವಿ- ಶುಕ್ರವಾರ ವಿಧಾನಸಭೆಯ ಕಲಾಪಗಳು ಆರಮಭವಾಗುತ್ತಿದ್ದಂತೇಯೇ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಬೆಂಗಳೂರಿನಲ್ಲಿ ಅಧಿಕಾರಿಗಳ ಮನೆ ಮೇಲೆ ನಡೆದ ಐಟಿ ದಾಲಿಯನ್ನು ಪ್ರಸ್ಥಾಪಿಸಿದರು
ಸಾರ್ವಜನಿಕರು ಎರಡು ಸಾವಿರ ರೂಪಾಯಿಗಾಗಿ ಬ್ಯಾಂಕುಗಳ ಎದುರು ದಿನವಿಡೀ ಸರದಿಯಲ್ಲಿ ನಿಲ್ಲುತ್ತಿದ್ದಾರೆ ಆದರೆ ಬೆಂಗಳೂರಿನಲ್ಲಿ ಅಧಿಕಾರಿಗಳ ಮನೆ ಮೇಲೆ ನಡೆದ ಐಟಿ ದಾಳಿಯಲ್ಲಿ ಅಧಿಕಾರಿಗಳ ಮನೆಯಲ್ಲಿ ನಾಲ್ಕು ಕೋಟಿ ಎಪ್ಪತ್ತು ಲಕ್ಷ ಹೊಸ ನೋಟುಗಳು ಪತ್ತೆಯಾಗಿವೆ ಏನಿದು ಅರಾಜಕತೆ ಪಾರದರ್ಶಕ ಸರ್ಕಾರ ಅಂದ್ರೆ ಇದೇನಾ ಒಬ್ಬ ಅಧಿಕಾರಿ ಮುಖ್ಯಮಂತ್ರಿಗಳ ಆಪ್ತ ಸಹಾಯಕ ಎಂದು ಪತ್ರಿಕೆಗಳಲ್ಲಿ ಬಂದಿದೆ ಇದರಲ್ಲಿ ಮುಖ್ಯಮಂತ್ರಿಗಳ ಹೆಸರು ಕೇಳಿ ಬರುತ್ತಿದೆ ಇದು ಗಂಭೀರ ವಿಷಯ ಚರ್ಚೆಗೆ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು
ಇದಕ್ಕೆ ಉತ್ತರಿಸಿದ ಸಭಾದ್ಯಕ್ಷರು ಶೆಟ್ಟರ ಅವರೇ ಶೂನ್ಯ ವೇಳೆಯಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ತಾವು ನೋಟೀಸ್ ಕೊಟ್ಟಿದ್ದೀರಾ ಶೂನ್ಯ ವೇಳೆಯಲ್ಲಿ ಚರ್ಚೆಗೆ ಅವಕಾಶ ಕೊಡುವದಾಗಿ ಹೇಳಿದಾಗ ಅದಕ್ಕೆ ಬಿಜೆಪಿ ಸದಸ್ಯರು ಮೌನರಾದರು