Home / Breaking News / ಬೆಳಗಾವಿ ಆರ್ ಟಿ ಓ ಕಚೇರಿಗೆ ,ರಾಷ್ಟ್ರೀಯ ಸ್ವಚ್ಛತಾ ಸ್ವಾಭಿಮಾನ್ ಪುರಸ್ಕಾರ್…!!!

ಬೆಳಗಾವಿ ಆರ್ ಟಿ ಓ ಕಚೇರಿಗೆ ,ರಾಷ್ಟ್ರೀಯ ಸ್ವಚ್ಛತಾ ಸ್ವಾಭಿಮಾನ್ ಪುರಸ್ಕಾರ್…!!!

ಬೆಳಗಾವಿ- ಬೆಳಗಾವಿ ನಗರ ಒಂದು ದಿಕ್ಕಿನಲ್ಲಿ ಸಾಗುತ್ತಿದೆ ಬೆಳಗಾವಿಯ ಜನ ಸ್ವಚ್ಛ ಬೆಳಗಾವಿ ,ಸುಂದರ ಬೆಳಗಾವಿ ,ಸಾರ್ಟ್ ಬೆಳಗಾವಿ ,ಕ್ಲೀನ್ ಬೆಳಗಾವಿಯತ್ತ ಸಾಗುತ್ತಿದ್ದರೆ ,ಕರ್ನಾಟ,ಮಹಾರಾಷ್ಟ್ರ, ಮತ್ತು ಗೋವಾ ರಾಜ್ಯಗಳ ಸಂಪರ್ಕದ ಕೊಂಡಿಯಾಗಿರುವ ಬೆಳಗಾವಿಯ ಆರ್ ಟಿ ಓ ಕಚೇರಿಯ ವ್ಯೆವಸ್ಥೆ ನೋಡಿದ್ರೆ ಅಳಬೇಕೋ…ನಗಬೇಕೋ..ಅಥವಾ ಅಲ್ಲಿಯೇ ನಿಂತು ಬಾಯಿ ಬಡಿದುಕೊಳ್ಳಬೇಕೋ,ಸ್ವಚ್ಛತೆಯ ಬಗ್ಗೆ ನಿಶ್ಚಿಂತವಾಗಿರುವ ಆರ್ ಟಿ ಓ ಅಧಿಕಾರಿಗಳಿಗೆ ಅದ್ಯಾವ ಪುರಸ್ಕಾರ ಕೊಡಿಸಬೇಕೋ ಒಂದೂ ತಿಳಿಯುತ್ತಿಲ್ಲ.

ಬೆಳಗಾವಿಯ ಆರ್ ಟಿ ಓ ಕಚೇರಿಗೆ ಪ್ರತಿದಿನ ಮಹಾರಾಷ್ಟ್ರ  ಗೋವಾ ಸೇರಿದಂತೆ ನೂರಾರು ಜನ ಬರ್ತಾರೆ ನೆರೆಯ ರಾಜ್ಯದಿಂದ ಇಲ್ಲಿಗೆ ಬಂದವರು ಆರ್ ಟಿ ಓ ಕಚೇರಿಯ ಟಾಯಲೆಟ್ ಗಳನ್ನು ನೋಡಿ ಬೆಳಗಾವಿಗೆ ಅದ್ಯಾವ ಬಿರುದು ಕೊಡಬಹುದು ,ಬೆಳಗಾವಿಯ ಜನ ಈ ಆರ್ ಟಿ ಓ ಅಧಿಕಾರಿಗಳ ಕಾಳಜಿಗೆ ಅದ್ಯಾವ ಪುರಸ್ಕಾರ ಕೊಡಬಹುದು ಅನ್ನೋದನ್ನು ಉಹೆ ಮಾಡಿ

ಬೆಳಗಾವಿ ಮಹಾನಗರ ಪಾಲಿಕೆ ಸ್ವಚ್ಛತೆ ಕಾಪಾಡದ,ಕಂಡು ಕಂಡಲ್ಲಿ ಕಸ ಒಗೆಯುವ ,ಸಾರ್ವಜನಿಕರನ್ನು ಪತ್ತೆ ಮಾಡಲು ಕ್ಯಾಮರಾ ಹಚ್ಚಿ ಅವರನ್ನು ಗುರುತಿಸಿ ದಂಡ ವಿಧಿಸಲು ಮಾರ್ಶಲ್ ಗಳನ್ನು ನೇಮಿಸಲು ನಿರ್ಧರಿಸಿದೆ ಆದ್ರೆ ಶೌಚಾಲಯಗಳನ್ನು ,ಕಚೇರಿಯ ಆವರಣವನ್ನು ಈ ರೀತಿ    ಕಾಪಾಡಿದ ಪುಣ್ಯಾತ್ಮರ ವಿರುದ್ಧ ಮಹಾನಗರ ಪಾಲಿಕೆ ಅದ್ಯಾವ ಕ್ರಮ ಜರುಗಿಸುತ್ತದೆ ಅನ್ನೋದನ್ನು ಕಾದು ನೋಡಬೇಕಿದೆ

ಸ್ಮಾರ್ಟ್ ಸಿಟಿಯ ಹೃದಯ ಭಾಗದಲ್ಲಿರುವ ಆರ್ ಟಿ ಓ ಕಚೇರಿಯ ಶೌಚಾಲಯದ ಪರಿಸ್ಥಿತಿ ನೋಡಿ ಅಲ್ಲಿಗೆ ಹೋದವರು ಹೊಟ್ಟೆ ಗಟ್ಟಿಆಡಿಕೊಂಡು,ಒತ್ತಡವನ್ನು ಹಿಡಿದಿಟ್ಟುಕೊಂಡು ಕೇಂದ್ರ ಬಸ್ ನಿಲ್ಧಾಣದ ಶೌಚಾಲಯ ಕ್ಕೆ ಹೋಗುವ ಪರಿಸ್ಥಿತಿ ಸಾಮಾನ್ಯವಾಗಿದೆ.

ಮಹಾನಗರ ಪಾಲಿಕೆಯ ಆಡಳಿತ ಅಧಿಕಾರಿಯೂ ಆಗಿರುವ ಬೆಳಗಾವಿಯ ಪ್ರಾದೇಶಿಕ ಆಯುಕ್ತರು   ಬೆಳಗಾವಿಯ ಆರ್ ಟಿ ಓ ಕಚೇರಿಯ ಅವ್ಯೆವಸ್ಥೆಯ ಬಗ್ಗೆ ಕಠಿಣ ಕ್ರಮ ಕೈಗೊಂಡರೆ ಇತರ ಇಲಾಖೆಗಳ ಅಧಿಕಾರಿಗಳಿಗೂ ಪ್ರಾದೇಶಿಕ ಆಯುಕ್ತರ ಕ್ರಮ ಪಾಠ ಆಗಬಹುದು

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *