Home / Breaking News / ಕಿತ್ತೂರ ಕರ್ನಾಟಕ ಹೆಸರಿಡಲು,ಸಿಎಂ ಭೇಟಿಯಾದ ಅಶೋಕ…

ಕಿತ್ತೂರ ಕರ್ನಾಟಕ ಹೆಸರಿಡಲು,ಸಿಎಂ ಭೇಟಿಯಾದ ಅಶೋಕ…

ಬೆಂಗಳೂರು: ಬೆಳಗಾವಿಯ
ಕನ್ನಡದ ಶಕ್ತಿ ಕೇಂದ್ರವೆನಿಸಿದ ನಾಗನೂರು
ಶ್ರೀ ರುದ್ರಾಕ್ಷಿ ಮಠದ ಮಹಾಸ್ವಾಮೀಜಿ
ಲಿಂ.ಶಿವಬಸವಸ್ವಾಮೀಜಿಯವರ
ಹೆಸರನ್ನು ಬೆಳಗಾವಿಯ ರೈಲು
ನಿಲ್ದಾಣಕ್ಕೆ ಇಡಬೇಕು,ಮುಂಬಯಿ
ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕ
ಎಂದು ನಾಮಕರಣ ಮಾಡಬೇಕು,ಖ್ಯಾತ
ರಂಗಭೂಮಿ ಕಲಾವಿದ ದಿ.ಏಣಗಿ
ಬಾಳಪ್ಪ ಅವರ ಹೆಸರಿನಲ್ಲಿ ಪ್ರತಿಷ್ಠಾನವನ್ನು
ಸ್ಥಾಪಿಸಬೇಕು ಎಂಬ ಬೇಡಿಕೆಗಳನ್ನು
ಈಡೇರಿಸಲು ಆಗ್ರಹಿಸಿ ಮುಖ್ಯಮಂತ್ರಿ
ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ
ಇಂದು ಬೆಳಗಾವಿ ಜಿಲ್ಲಾ ಕನ್ನಡ
ಸಂಘಟನೆಗಳ ಕ್ರಿಯಾ ಸಮಿತಿಯು
ಬೆಂಗಳೂರಿನಲ್ಲಿ ಮನವಿ ಸಲ್ಲಿಸಲಾಯಿತು.
ವಿಜಯನಗರದ ಶ್ರೀ ಬಸವೇಶ್ವರ
ಸುಙ್ಞಾನ ಮಂಟಪದಲ್ಲಿ ನಡೆದ
ಅಥಣಿಯ ಮೋಟಗಿ ಮಠದ
ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ಅವರ
ಕೃತಿ “ಮಹಾತ್ಮರ ಚರಿತಾಮೃತ”ವನ್ನು
ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ
ಮುಖ್ಯಮಂತ್ರಿಗಳಿಗೆ ಮನವಿಯನ್ನು
ಸಲ್ಲಿಸಿದ ಕ್ರಿಯಾ ಸಮಿತಿಯ ಅಧ್ಯಕ್ಷ
ಅಶೋಕ ಚಂದರಗಿ,ಬೆಳಗಾವಿಯು
ಕರ್ನಾಟಕದಲ್ಲಿಯೇ ಉಳಿಯಲು
ಅವಿರತವಾಗಿ ಶ್ರಮಿಸಿದ ಅಕ್ಷರ ಹಾಗೂ
ಅನ್ನ ದಾಸೋಹಿ ಶಿವಬಸವ ಮಹಾಸ್ವಾಮೀಜಿ ಅವರ ಹೆಸರು
ಅಜರಾಮರವಾಗಿ ಉಳಿಯಲು
ಕ್ರಮ ಕೈಕೊಳ್ಳಬೇಕು ಎಂದು ಆಗ್ರಹಿಸಿದರು.
ಮುಂಬಯಿ ಕರ್ನಾಟಕಕ್ಕೆ ಕಿತ್ತೂರು
ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕ ಎಂದು
ನಾಮಕರಣ ಮಾಡಬೇಕು,ರಂಗಭೂಮಿ ದಿಗ್ಗಜ ದಿ.ಏಣಗಿ ಬಾಳಪ್ಪ ಅವರ
ಹೆಸರಿನಲ್ಲಿ ಟ್ರಸ್ಟ ರಚಿಸಬೇಕು,ಬೆಳಗಾವಿಗೆ ಮಂಜೂರಾಗಿರುವ ಕನ್ನಡ ಮತ್ತು
ಸಂಸ್ಕೃತಿ ಇಲಾಖೆಯ ಜಂಟೀ ನಿರ್ದೇಶಕರ ಕಚೇರಿಯನ್ನು ಸುವರ್ಣ ಸೌಧದಲ್ಲಿ ಸ್ಥಾಪಿಸಬೇಕು,ಆಡಳಿತ ಸುಧಾರಣೆ ಆಯೋಗವು ಪ್ರಾದೇಶಿಕ ಆಯುಕ್ತರ
ಕಚೇರಿಯನ್ನು ರದ್ದುಗೊಳಿಸಬೇಕೆಂದು
ಶಿಫಾರಸು ಮಾಡಿದ್ದನ್ನು ರಾಜ್ಯ ಸರಕಾರ ಒಪ್ಪಬಾರದು,ಸುವರ್ಣ ಸೌಧಕ್ಕೆ
ಪ್ರಮುಖ ಕಚೇರಿಗಳ ಸ್ಥಳಾಂತರಕ್ಕೆ
ಆದಷ್ಟು ಬೇಗ ಕ್ರಮ ಕೈಕೊಳ್ಳಬೇಕು
ಎಂದು ಬೊಮ್ಮಾಯಿ ಅವರಿಗೆ
ಮನವಿ ಮಾಡಿದರು.
ಕ್ರಿಯಾ ಸಮಿತಿಯ ನಿಯೋಗದಲ್ಲಿ
ಶಿವಪ್ಪ ಶಮರಂತ,ಶಂಕರ ಬಾಗೇವಾಡಿ,ವಿರೇಂದ್ರ ಗೋಬರಿ,
ಬೆಂಗಳೂರಿನ ಹಿರಿಯ ಕನ್ನಡ
ಹೋರಾಟಗಾರ ಪಾಲನೇತ್ರ,ಶಿವಾನಂದ
ಮೇಟ್ಯಾಲ,ಶಂಕರ ಗುಡಸ,ದೇಸಾಯಿ
ಮುಂತಾದವರು ಇದ್ದರು.

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *