Breaking News

ಬೆಳಗಾವಿಯ, “ಇ” ಗ್ರಂಥಾಲಯ ವಿಶ್ವದಲ್ಲೇ ಮೊದಲು…

ಬೆಳಗಾವಿ,-ದೇಶಕ್ಕಾಗಿ ತ್ಯಾಗ ಮಾಡಿದ ಮಹನೀಯರನ್ನು ನೆನಪಿಸುವ ದೃಷ್ಟಿಯಿಂದ ಮರೆತು ಹೋಗಿದ್ದ ದೇಶ ಪ್ರೇಮಿ ರವೀಂದ್ರ ಕೌಶಿಕ್ ಅವರ ಹೆಸರನ್ನು ಇ- ಗ್ರಂಥಾಲಯಕ್ಕೆ ನಾಮಕರಣ ಮಾಡಲಾಗಿದೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು.

ನಗರದ ಶಹಾಪುರದ ಬ್ಯಾಂಕ್ ಆಫ್ ಇಂಡಿಯಾ ಸರ್ಕಲ್ ನಲ್ಲಿ ಶಿವಾಜಿ ಉದ್ಯಾನದ ಹತ್ತಿರವಿರುವ ರವೀಂದ್ರ ಕೌಶಿಕ್ ಇ-ಗ್ರಂಥಾಲಯದಲ್ಲಿ ಶನಿವಾರ (ಸೆ.25) ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ದೇಶಕ್ಕಾಗಿ ಸುಮಾರು 26 ವರ್ಷ ತಮ್ಮ ಯೌವನವನ್ನು‌ ಮುಡಿಪಾಗಿಟ್ಟ ದೇಶಪ್ರೇಮಿ ರವೀಂದ್ರ ಕೌಶಿಕ್ ಅವರ ಹೆಸರನ್ನು ಇ-ಗ್ರಂಥಾಲಯಕ್ಕೆ ನಾಮಕರಣ ಮಾಡಲಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ರವಿವಾರ(ಸೆ.26) ಉದ್ಘಾಟನೆಗೊಳ್ಳಲಿರುವ ಇ-ಗ್ರಂಥಾಲಯ ಕಾರ್ಯಕ್ರಮಕ್ಕೆ ರವೀಂದ್ರ ಕೌಶಿಕ್ ಅವರ ಕುಟುಂಬಸ್ಥರು ಆಗಮಿಸಲಿದ್ದು , ಅವರನ್ನು ಸನ್ಮಾನಿಸಲಾಗುವುದು ಎಂದು ಶಾಸಕ ಅಭಯ ಪಾಟೀಲ ತಿಳಿಸಿದರು.

2.5 ರೂ.ಕೋಟಿ ವೆಚ್ಚದಲ್ಲಿ ಗ್ರಂಥಾಲಯ ನಿರ್ಮಾಣ ಮಾಡಲಾಗಿದ್ದು,ಗ್ರಂಥಾಲಯದಲ್ಲಿ ಕನ್ನಡ,‌ಇಂಗ್ಲೀಷ್, ಹಿಂದಿ, ಮರಾಠಿ ಹಾಗೂ ಉರ್ದು ಸೇರಿದಂತೆ ಒಟ್ಟು 5 ಭಾಷೆಗಳ ಡಿಜಿಟಲ್‌ ಗ್ರಂಥಾಲಯ ಇದಾಗಿದೆ. ವಿಶ್ವಕ್ಕೆ ಮಾದರಿ ಗ್ರಂಥಾಲಯ ವಾಗಲಿದೆ ಎಂದು ಅವರು ತಿಳಿಸಿದರು.

ಗ್ರಂಥಾಲಯದ ವಿಶೇಷತೆ:

ರವೀಂದ್ರ ಕೌಶಿಕ್ ಗ್ರಂಥಾಲಯವು ಇಬ್ಬರು ಸಿಬ್ಬಂದಿ ಹಾಗೂ ಒಟ್ಟು 23 ಡೆಸ್ಕ್ ಟಾಪ್ ಕಂಪ್ಯೂಟರಗಳನ್ನು ಹೊಂದಿದ್ದು, ಮಕ್ಕಳಿಗಾಗಿ ಉಪಯೋಗಿಸಲು 5 ಯೋಗ್ಯವಾದ ಟ್ಯಾಬ್ಲೆಟ್ ಗಳನ್ನು ಹೊಂದಿದೆ. ಮುಂದೆ ಮಕ್ಕಳ ಆಸಕ್ತಿಯ ಮೇಲೆ ಟ್ಯಾಬ್ಲೆಟ್ ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು.

ಗ್ರಂಥಾಲಯದಲ್ಲಿ 5000 ಪುಸ್ತಕಗಳು ಲಭ್ಯವಿದ್ದು, ಒಂದು ಪುಸ್ತಕದ ಪ್ರತಿಯನ್ನು ಅನಿಯಮಿತ ಸಂಖ್ಯೆಯ ಬಳಕೆದಾರರು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.

ಬೆಳಗಾವಿ ಸ್ಮಾರ್ಟ್ ಸಿಟಿ E-Libray Application ಮೂಲಕ ಲೈಬ್ರರಿಯಲ್ಲಿ ದೊರಕುವ ಪುಸ್ತಕಗಳನ್ನು ನೋಡಬಹುದು ಹಾಗೂ ಒಂದು ಬಾರಿ 50-60 ರೂಪಾಯಿಗಳನ್ನು ನೀಡಿ ಚಂದಾದಾರರಾಗಿ ಪುಸ್ತಕಗಳನ್ನು ಓದಬಹುದು ಎಂದು ಹೇಳಿದರು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯೋಗವಾಗುವಂತಹ ಪುಸ್ತಕಗಳು, ಹಾಗೂ ಚಿಕ್ಕ ಮಕ್ಕಳ ಪುಸ್ತಕಗಳು ಕೃತಕ ಬುದ್ದಿ ಮತ್ತೆ ಉಪಯೋಗಿಸಿ ಮಾಡಿದಂತಹ ಪುಸ್ತಕಗಳು ಕೂಡ ಲಭ್ಯವಿವೆ. ಎಲ್ಲಾ ವಯಸ್ಕರಿಗೂ ಉಪಯೋಗವಾಗುವ ಪುಸ್ತಕಗಳು ಲಭ್ಯವಿದೆ ಎಂದು ಗ್ರಂಥಾಲಯದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀನಿವಾಸ್ ಕೆ.ಅವರು ಮಾಹಿತಿ ನೀಡಿದರು.

ವೈಫೈ ಸೌಲಭ್ಯ:

ಗ್ರಂಥಾಲಯದ ಸುತ್ತಲೂ 300 ಮೀಟರ್ ವ್ಯಾಪ್ತಿಯಲ್ಲಿ ವೈಫೈ ಬಳಸಿ ಪುಸ್ತಕಗಳನ್ನು ಓದಬಹುದು ಹಾಗೂ ವೈಫೈ ಸೌಲಭ್ಯ ಕೇವಲ ಪುಸ್ತಕಗಳನ್ನು ಓದಲು ಡೌನ್ಲೋಡ್ ಮಾಡಿಕೊಳ್ಳಲು ಮಾತ್ರ ಉಪಯೋಗಿಸಿ ಕೊಳ್ಳಬಹುದಾಗಿದೆ.

ಗ್ರಂಥಾಲಯವು 3 ಅಂತಸ್ತು ಹೊಂದಿದ್ದು, ಒಂದು ಬಾರಿಗೆ‌ 60 ಜನ ಓದುಗರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಗ್ರಂಥಾಲಯದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀನಿವಾಸ್ ಕೆ.ಅವರು ಮಾಹಿತಿ ನೀಡಿದರು.

ದಿವ್ಯಾಂಗ/ ವಿಕಲಚೇತನರಿಗೆ ವಿಶೇಷ ಉದ್ಯಾನವನ:

ಬೆಳಗಾವಿ ನಗರದಲ್ಲಿ ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ದಿವ್ಯಾಂಗ/ ವಿಕಲಚೇತನರಿಗಾಗಿ ವಿಶೇಷ ಉದ್ಯಾನವನ್ನು ನಿರ್ಮಿಸಲಾಗಿದೆ.
ಬೆಳಗಾವಿಯಲ್ಲಿ ಸುಮಾರು 2200 ದಿವ್ಯಾಂಗ/ ವಿಕಲಚೇತನ ಮಕ್ಕಳಿದ್ದಾರೆ. ಬುದ್ಧಿಮಾಂದ್ಯ ಮಕ್ಕಳು ಸಾರ್ವಜನಿಕ ಉದ್ಯಾನವನಗಳಿಗೆ ತೆರಳಿದಾಗ ಅವರ ಪಾಲಕರಿಗೆ ಕೀಳರಿಮೆಯ ಭಾವನೆ ಉಂಟಾಗುತ್ತದೆ.

ಆದ್ದರಿಂದ, ತಜ್ಞರೊಂದಿಗೆ ಚರ್ಚಿಸಿ ವಿಶೇಷವಾಗಿ ವಿಕಲಚೇತನ ಮಕ್ಕಳಿಗೆ ಅನುಕೂಲವಾಗುವಂತೆ ಮಹಾತ್ಮ ಫುಲೆ‌ ಉದ್ಯಾನವನನ್ನು ಉದ್ಯಾನವನ ನಿರ್ಮಿಸಲಾಗಿದೆ. ಇದನ್ನು ಕೂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರವಿವಾರ(ಸೆ.26) ಉದ್ಘಾಟಿಸಲಿದ್ದಾರೆ ಎಂದು ಎಂದು ಶಾಸಕ ಅಭಯ ಪಾಟೀಲ ಹೇಳಿದರು.

ಬೆಳಗಾವಿಯಲ್ಲಿ ಐ.ಟಿ.ಪಾರ್ಕ್ ನಿರ್ಮಾಣ :

ಬೆಳಗಾವಿಯಲ್ಲಿ ರೂ.774 ಕೋಟಿ ವೆಚ್ಚದಲ್ಲಿ ಐ.ಟಿ.ಪಾರ್ಕ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಕುರಿತು ಕೇಂದ್ರ ರಕ್ಷಣಾ ಸಚಿವರ ಜೊತೆ ಚರ್ಚಿಸಲಾಗುವುದು. ಐ.ಟಿ. ಪಾರ್ಕ್ ನಿರ್ಮಾಣದಿಂದ 1 ಲಕ್ಷ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ ಎಂದು ಶಾಸಕ ಅಭಯ ಪಾಟೀಲ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಬೆಳಗಾವಿ ಸಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರವೀಣ ಬಾಗೇವಾಡಿ ಹಾಗೂ ಇತರ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
********

Check Also

ರಜೆ ಇದ್ರೂ ಸಹ, ನದಿ ಪಾತ್ರಗಳ ಪರಿಸ್ಥಿತಿ ಪರಶೀಲಿಸಿದ ಜಿಲ್ಲಾಧಿಕಾರಿ…

ನದಿಪಾತ್ರಗಳಿಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಭೇಟಿ: ಪ್ರವಾಹ ನಿರ್ವಹಣೆ ಸಿದ್ಧತೆ ಪರಿಶೀಲನೆ ಬೆಳಗಾವಿ,-  ಪಕ್ಕದ  ಮಹಾ ನಿನ್ನೆಯ ದಿನ ಮೊಹರಂ …

Leave a Reply

Your email address will not be published. Required fields are marked *