Home / Breaking News / ಮಂಗೇಶ್ ಪವಾರ ಮೇಯರ್, ಸವಿತಾ ಉಪಮೇಯರ್….!!!

ಮಂಗೇಶ್ ಪವಾರ ಮೇಯರ್, ಸವಿತಾ ಉಪಮೇಯರ್….!!!

ಎಂಇಎಸ್ ಮತ್ತೊಂದು ಶಾಕ್ ಕೊಡಲು ಬಿಜೆಪಿ ಶಾಸಕರ ಪ್ಲ್ಯಾನ್

ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಎಂಇಎಸ್ ಕೇವಲ 2 ಸದಸ್ಯರಿಗೆ ಸೀಮಿತವಾಗಿದೆ. ಕಳೆದ ಹತ್ತಾರು ವರ್ಷಗಳಿಂದ ಪಾಲಿಕೆಯಲ್ಲಿ ಹಿಡಿತ ಹೊಂದಿದ್ದ ಸಂಘಟನೆಗೆ ಮರ್ಮಾಘಾತ ನೀಡಿದ ಮತದಾರರು ಬೆಳಗಾವಿಯಲ್ಲಿ ಭಾಷಾ ರಾಜಕಾರಣಕ್ಕೆ ಸಂಪೂರ್ಣ ಇತಿಶ್ರೀ ಹಾಡಿದ್ದಾರೆ.

ಪಾಲಿಕೆ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದ್ದ ಎಂಇಎಸ್ ಗೆ ಮೇಯರ್, ಉಪಮೇಯರ್ ಆಯ್ಕೆಯಲ್ಕೂ ಹೊಡೆತ ನೀಡಲು ಬಿಜೆಪಿ ಜಾಣ ನಡೆ ಅನುಸರಿಸಲು ಮುಂದಾಗಿದೆ.
ಮೇಯರ್ ಸ್ಥಾನ ಸಾಮಾನ್ಯ ವರ್ಗ ಮೀಸಲಾಗಿರುವ ಹಿನ್ನೆಲೆ
ಮರಾಠಾ ಸಮುದಾಯದ ನಾಯಕನಿಗೆ ಪಟ್ಟ ಕಟ್ಟಲು ಪ್ಲ್ಯಾನ್ ಮಾಡಿರುವ ಬಿಜೆಪಿ
ಈ ಮೂಲಕ ಎಂಎಇಸ್ ನ್ನು ಸಂಪೂರ್ಣವಾಗಿ ಬಾಯಿ ಮುಚ್ಚಿಸಲು ಪ್ಲ್ಯಾನ್ ಮಾಡಿದೆ.

ಮೇಯರ್ ಸ್ಥಾನ ಮರಾಠಾ ಸಮುದಾಯಕ್ಕೆ, ಉಪಮೇಯರ್ ಸ್ಥಾನ ಲಿಂಗಾಯತರಿಗೆ ನೀಡುವ ಬಗ್ಗೆ ಚಿಂತನೆ ಬಿಜೆಪಿಯಲ್ಲಿದೆ.
ಮೇಯರ್ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ್ ಒಂದು ವರ್ಷದಿಂದ ಪ್ಲ್ಯಾನ್ ಮಾಡಿ ಎಂಇಎಸ್ ಮಣ್ಣು ಮುಕ್ಕಿಸಿದ್ದು,
ಇಂದು ಸಿಎಂ ಭೇಟಿಯಾಗಿ ಮೇಯರ್, ಉಪಮೇಯರ್ ಆಯ್ಕೆಯಲ್ಲಿ ಅನುಸರಿಸಬೇಕಾದ ತಂತ್ರದ ಬಗ್ಗೆ ಚರ್ಚೆ ನಡೆಸಿದ್ದಾರೆ.
ಮೇಯರ್ ಆಯ್ಕೆಯಲ್ಲಿ ಶಾಸಕ ಅಭಯ ಪಾಟೀಲ್ ನಿರ್ಧಾರವೇ ಅಂತಿಮವಾಗಿದೆ.

ಮರಾಠಾ ಸಮುದಾಯದ ಹಲವರು ಮೇಯರ್ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದು, ವಾರ್ಡ್ ನಂ. 41ರ ಪಾಲಿಕೆ ಸದಸ್ಯ ಮಂಗೇಶ ಪವಾರ್, ವಾರ್ಡ್ ನಂ. 29ರ ಪಾಲಿಕೆ ಸದಸ್ಯ ನಿತಿನ್ ಜಾಧವ್, ವಾರ್ಡ್ ನಂ. 44ರ ಆನಂದ ಚವ್ಹಾಣ್,
ವಾರ್ಡ್ ನಂ. 22ರ ರವಿರಾಜ್ ಸಂಬ್ರೇಕರ್,
ವಾರ್ಡ್ ನಂ. 23ರ ಜಯಂತ ಜಾಧವ್ ಮೇಯರ್ ಸ್ಥಾನದ ರೇಸ್ ನಲ್ಲಿದ್ದಾರೆ.ಉಪಮೇಯರ್ ಸ್ಥಾನ ಸಾಮನ್ಯ ಮಹಿಳೆಗೆ ಮೀಸಲಾಗಿರುವ ಹಿನ್ನೆಲೆವಾರ್ಡ್ ನಂ. 55ರ ಪಾಲಿಕೆ ಸದಸ್ಯೆ ಸವಿತಾ ಪಾಟೀಲ್ ವಾರ್ಡ್ ನಂ. 26ರ ರೇಖಾ ಹೂಗಾರ್ ರೇಸ್ ನಲ್ಲಿದ್ದಾರೆ. ಏನೆ ಆದರೂ ಮೇಯರ್, ಉಪ ಮೇಯರ್ ಆಯ್ಕೆಯಲ್ಲಿ ಶಾಸಕ ಅಭಯ ಪಾಟೀಲ‌ ನಿರ್ಣಯವೇ ಅಂತಿಮ ಎನ್ನಲಾಗುತ್ತಿದೆ.

Check Also

28 ರಂದು ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ..

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಚುನಾವಣೆಯ ರಂಗೇರಿದೆ ಕರ್ನಾಟಕದ ದಕ್ಷಿಣ ಭಾಗದಲ್ಲಿ ಚುನಾವಣಾ ಪ್ರಚಾರದ ಅವಧಿ ಮುಕ್ತಾಯವಾಗುವ ಹಂತದಲ್ಲಿ ವಿವಿಧ ರಾಜಕೀಯ …

Leave a Reply

Your email address will not be published. Required fields are marked *