Breaking News

ಮಾಣಿಕ್ಯ ಮರೆಯಾಗಿ ಇಂದಿಗೆ ವರ್ಷ….

 

ಗ್ರಾಮೀಣ ಸೊಗಡಿನ ಸರಳ ಸಜ್ಜನ ಜನಪರ ಅಪರೂಪ ರಾಜಕಾರಣಿ – ದಿವಂಗತ
ಅಂಗಡಿ

(

(ಮೆಹಬೂಬ ಮಕಾನದಾರ)

ರಾಜಕಾರಣದಲ್ಲಿ ತನ್ನದೇ ಆದ ವಿಶಿಷ್ಟ ಛಾಪ ಮೂಡಿಸಿ ಜನ ಮನ್ನಣೆ ಗಳಿಸಿ ಹೇಳದೇ ಹೋದ ಮಾನ್ಯ ಸುರೇಶ ಅಂಗಡಿ ಅವರನ್ನು ಕೋವಿಡ್ ಮೂಲಕ ನಾವೆಲ್ಲ ಕಳೆದುಕೊಂಡು ಒಂದು ವರ್ಷ ಕಳೆದುಹೋಗಿದೆ. ನಮ್ಮ ಮಧ್ಯ ಅವರು ಇದ್ದಕ್ಕಿದ್ದಂತೆ ಇಲ್ಲವಾದದ್ದು, ಬೆಳಗಾವಿ ಜಿಲ್ಲೆಯಲ್ಲಿ ರಾಜಕಾರಣವೇ ಖಾಲಿಯಾದಂತೆ ಆಗಿರುವುದು ಅವರ ಜನರ ಮಧ್ಯ ಬೆಳದುಬಂದ ಪ್ರಭಾವಿ ರಾಜಕಾರಣಿ ಎಂಬುದನ್ನು ಸೂಚಿಸುತ್ತದೆ.

ಸುರೇಶ ಅಂಗಡಿ ಅವರನ್ನು ‘ನಾಯಕ’ ಎಂದು ಕರೆಯಲಾಗದು. ಎಲ್ಲರನ್ನೂ ಹಿಂದಟ್ಟು, ತಾನು ಮುಂದಕ್ಕೆ ಪೋಜು ಕೊಡುವ ಪಾಳೆಗಾರಿಕೆಯ ಸ್ವಭಾವ ಅವರಿಲ್ಲದ ಕಾರಣ ಅವರನ್ನು ನಾಯಕನನ್ನಾಗಿ ಗುರುತಿಸುವುದಕ್ಕಿಂತ ಎಲ್ಲರಿಗಾಗಿ ಎಲ್ಲರೊಂದಿಗೆ ಕೂಡಿ ಕೈಹಿಡಿದು ಸಾಗುವ ಜನಪರ ಕಾಳಜಿಯ ಜನ ಸೇವಕ ಎಂದು ಹೇಳಿದರೆ ಸುರೇಶ ಅಂಗಡಿ ಅವರ ಆತ್ಮಕ್ಕೆ ಶಾಂತಿ ಲಭಿಸಬಹುದು.

ಜನಸೇವಕ ನಿಜವಾದ ರಾಜಕಾರಣಿಯಲ್ಲಿ ಇರಬೇಕಾದ ಸ್ವಭಾವ ಮತ್ತು ಗುಣಗಳು ದಿವಂಗತ ಸುರೇಶ ಅಂಗಡಿಯವರಲ್ಲಿ ಸಹಜವಾಗಿದ್ದವು. ಕೈಮುಗಿದು ನಗುಮೊಗದಿಂದ ಸ್ವಾಗತಿಸಿ, ಸಂಯಮದಿAದ ಆತ್ಮೀಯವಾಗಿ ಸಮಸ್ಯೆ ವಿಚಾರಿಸಿ ಬಗೆಹರಿಸುವ, ಪರಿಹಾರ ಕಂಡುಕೊಳ್ಳುವ ಪರಿ ಅವರ ಬದುಕಿನೊಂದಿಗೆ ರೂಢಿಸಿಕೊಂಡು ಬಂದ ರೀತಿ ಅದು. ಈ ಕಾರಣಕ್ಕಾಗಿಯೇ ಸುರೇಶ ಅಂಗಡಿ ಎಂದರೆ ಎಲ್ಲರಿಗೂ ಮೆಚ್ಚುಗೆ. ಸರಳ, ಸಜ್ಜನ, ಜನರೊಂದಿಗೆ ಬೆರೆಯುವ ಸಹಜ ಗುಣ. ಬೆಳಗಾವಿ ರಾಜಕೀಯ ಪಾಳೆಗಾರಿಕೆಗೆ ವಿರುದ್ಧವಾಗಿದ್ದ ಸುರೇಶ ಅಂಗಡಿ ಅವರಿಗೆ ಗೊತ್ತಿರುವುದು ಜನರಲ್ಲಿ ಒಂದಾಗಿದ್ದುಕೊAಡು ಪ್ರಾಮಾಣಿಕ ಕೆಲಸ ಮಾಡುವುದು. ಜನರೊಂದಿಗೆ ಕೈಮುಗಿಯುತ್ತ ಜನರತ್ತ ಸಾಗುವ ಅವರ ನಗುಮೊಗ ಅವರನ್ನು ಕಂಡವರು ಎಂದೂ ಮರೆಯಲು ಸಾಧ್ಯವಿಲ್ಲ.

ದಿವಂಗತ ಸುರೇಶ ಅಂಗಡಿ ಅವರು, ಕೇಂದ್ರ ರೈಲ್ವೆ ಖಾತೆ ಸಚಿವರಾಗಿ ಜನಮನ್ನಣೆ ಪಡೆಯಬೇಕಾದರೆ ಅದರ ಹಿಂದಿನ ಅವರ ರಾಜಕೀಯ ನಡೆ ಮುಖ್ಯವಾಗುತ್ತದೆ.

ರಾಜಕೀಯದಲ್ಲಿ ನಿರಂತರ ಉಳಿದು ಗೆಲವು ಸಾಧಿಸಬೇಕಾದರೆ ಕೇವಲ ಜಾತಿ ಪ್ರಭಾವದಿಂದ ಸಾಧ್ಯವಿಲ್ಲ. ಜಾತಿವೊಂದನ್ನೇ ನಂಬಿ ಕೆಲಸ ಮಾಡದ ರಾಜಕಾರಣಿಗಳು ಹೇಳಹೆಸರಿಲ್ಲದಂತೆ ಮರೆಯಾಗಿರುವುದನ್ನು ನೋಡಿದ್ದೇವೆ. ಈ ದೃಷ್ಟಿಯಿಂದ ಸುರೇಶ ಅಂಗಡಿ ಅವರು ಮೂಲತಃ ಒಬ್ಬ ವಾಣಜ್ಯ ವ್ಯವಹಾರಿಕರಾಗಿದ್ದರೂ ರಾಜಕೀಯ ಮೂಲಕ ಜನ ಸೇವೆಗೆ ಅವಕಾಶ ನೀಡಿದವರು.

ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಪ್ರವೇಶ ಪಡೆದ ಇವರು ಕಾನೂನು ಪದವಿಧರರಾಗಿ ವಕೀಲಿ ವೃತ್ತಿಯನ್ನು ಮುಂದುವರೆಸಬಹುದಿತ್ತು. ಆದರೆ, ಪಕ್ಷದ ಸಂಘಟನೆಗೆ ಶ್ರಮಿಸುತ್ತ ಬಂದ ಅವರು ಜಿಲ್ಲಾ ಅಧ್ಯಕ್ಷರಾಗಿ ನೇಮಕಗೊಂಡ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಬಿಜೆಪಿಯನ್ನು ಇನ್ನಷ್ಟು ಗಟ್ಟಿಗೊಳಿಸಿದವರು. ನಂತರ, ಸಂಸದರಾಗಿ ಆಯ್ಕೆ ಆದಾಗ ಬಿ.ಎಸ್. ಯಡಿಯೂರಪ್ಪ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯ ಸದುಪಯೋಗಪಡಿಸಿಕೊಂಡವರು.
ಕೇಂದ್ರ ರೈಲ್ವೆ ಖಾತೆ ವಹಿಸಿಕೊಂಡಾಗ ಕರ್ನಾಟಕದಲ್ಲಿ ರೈಲ್ವೆ ಇಲಾಖೆಯ ಅಭಿವೃದ್ಧಿಯ ಹೊಸ ಅಲೆಯ ಆರಂಭವಾದದ್ದು ಸುರೇಶ ಅಂಗಡಿ ಅವರು ಸಚಿವರಾಗಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದನ್ನು ನಿರ್ದೇಶಿಸುತ್ತದೆ. ನೆನೆಗುದಿಗೆ ಬಿದ್ದ ಯೋಜನೆಗಳು ರಾಜ್ಯದಲ್ಲಿ ಹೊಸ ಜೀವ ಪಡೆದುಕೊಂಡವು. ಪ್ರಮುಖ ನಗರಗಳನ್ನು ಸಂಪರ್ಕಿಸುವ ಹಾಗೂ ಗ್ರಾಮೀಣ ಪ್ರದೇಶದ ಜನರಿಗೂ ಅನುಕೂಲತೆಯ ದೃಷ್ಟಿಯಿಂದ ಹೊಸ ರೈಲ್ವೆಗಳನ್ನು ಸುರೇಶ ಅಂಗಡಿ ಅವರು ಆರಂಭಿಸಿರುವುದು ಒಂದು ದಾಖಲೆಯೇ ಸರಿ.

ಬೆಳಗಾವಿಯಲ್ಲಿ ರೈಲ್ವೆ ಓಡುವುದನ್ನು ಹೊರುಪಡಿಸಿದರೆ ಬೇರೆ ಯಾವುದೇ ಕೆಲಸಗಳು ಆಗಿರಲಿಲ್ಲ. ಅಂಗಡಿ ಅವರು ಸಚಿವರಾದ ತಕ್ಷಣ ರೈಲ್ವೆ ಇಲಾಖೆಯ ಹೊಸಶಖೆ ಆರಂಭವಾಯಿತು. ರೈಲ್ವೆ ಮೇಲಸೇತವೆಗಳು ಪೂರ್ಣಗೊಂಡು ನಗರದ ಸಾರಿಗೆ ಸಂಪರ್ಕಕ್ಕೆ ಅವಕಾಶ ಕಲ್ಪಿಸಿದನ್ನು ಬೆಳಗಾವಿ ಜನತೆ ಮರೆತಿಲ್ಲ. ಹಳೆಕಾಲದ ರೈಲ್ವೆ ನಿಲ್ದಾಣಕ್ಕೆ ನೂತನ ಕಾಯಲ್ಪ ನೀಡುವ ಅಂಗಡಿ ಅವರ ಕನಸು ಇನ್ನೇನು ಇಷ್ಟರಲ್ಲಿಯೇ ನನಸಾಗಿ ಕಂಗೊಳಿಸಲಿದೆ. ಮೂರನೇ ರೈಲ್ವೆಗೇಟ ಮೇಲ್ಸೇತುವೆ ನಿರ್ಮಾಣ ಅವರ ಕಾಲದಲ್ಲಿಯೇ ಆರಂಭವಾದರೂ ಕೋವಿಡ್ ಗ್ರಹಣದಿಂದ ಅದು ಇನ್ನೂ ಮುಕ್ತಿ ಸಾಧಿಸಲು ಸಾಧ್ಯವಾಗುತ್ತಿಲ್ಲ.

ಕೋವಿಡ್ ಸಂದರ್ಭದಲ್ಲಿ ಉಳಿದ ಸಾರಿಗೆ ವ್ಯವಸ್ಥೆ ಸ್ಥಗೀತಗೊಂಡಾಗ ಗೂಡ್ಸ್ ರೈಲೈಗಳನ್ನು ಓಡಿಸುವುದರ ಮೂಲಕ ವಸ್ತುಗಳ ಸಾಗಾಣಿಕೆಯ ಮೂಲಕ ವಾಣಿಜ್ಯ ವ್ಯವಹಾರದ ಜೀವಿಂತಿಕೆ ಉಳಿಸಿದವರು ಸುರೇಶ ಅಂಗಡಿ ಅವರು. ಅಂದಿನ ಸಂದಿಗ್ಧತೆಗೆ ಒಳಗಾದ ಅಂತರರಾಜ್ಯ ಕಾರ್ಮಿಕರನ್ನು ತಮ್ಮ ಊರುಗಳಿಗೆ ರೈಲ್ವೆಗಳ ಮೂಲಕ ಉಚಿತವಾಗಿ ಮುಟ್ಟಿಸಿದನ್ನು ಮರೆಯುವಂತಿಲ್ಲ. ಕೋವಿಡ್ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಕೈಗಾರಿಕೆಗಳು ಸ್ಥಗೀತಗೊಂಡಾಗ ಕೋವಿಡ್ ನಿಮಯಗಳನ್ನು ಪಾಲಿಸುವುದರ ಮೂಲಕ ಉದ್ಯಮವನ್ನು ಆರಂಭಿಸಿ ನಾ ನಿಮ್ಮೊಂದಿಗಿದ್ದೇನೆ ಎಂದು ಉದ್ಯಮಿದರರಿಗೆ ಧೈರ್ಯ ತುಂಬಿದವರು ಸುರೇಶ ಅಂಗಡಿ ಅವರು.

ಹೀಗೆ ಅವರೊಳಗಿನ ಕ್ರಿಯಾಶೀಲತೆ ಸಚಿವರಾದ ಮೇಲೆ ತೀವ್ರಪಡೆದುಕೊಂಡಿರುವಾಗ, ಬೆಳಗಾವಿಯಿಂದ ಕರ್ನಾಟಕ ಒಬ್ಬ ಅಪರೂಪದ ಸಚಿವರನ್ನು ಪಡೆದುಕೊಂಡ ಖುಷಿಯಲ್ಲಿರಬೇಕಾದರೆ, ಮಾನ್ಯ ಸುರೇಶ ಅಂಗಡಿ ಅವರು ಕೋವಿಡ್ ಕಾರಣದಿಂದ ಅಕಾಲಿಕ ಅಗಲಿಕೆ ತುಂಬಲಾದ ನಷ್ಟ ಆಗಿರುವುದು ವಾಸ್ತವ. ಸರಳ, ಸಜ್ಜನ, ಶುಚಿತ್ವ, ಸಂಯಮ, ಜನಪರ ಕ್ರಿಯಾಶೀಲತೆಯನ್ನು ಒಳಗೊಂಡ ಸುರೇಶ ಅಂಗಡ ಅಂಥಹ ಮೊತ್ತೊಬ್ಬ ರಾಜಕಾರಣಿ ಬೆಳಗಾವಿ ಜಿಲ್ಲೆಯಲ್ಲಿ ಸದ್ಯ ದೊರೆಯುವುದು ದರ್ಲಭ ಎನ್ನುವುದರಲ್ಲಿ ಸಂಶಯವಿಲ್ಲ.
****

Check Also

ಬೆಳಗಾವಿಯ ಮಾಸ್ಟರ್ ಮೈಂಡ್..ಲಕ್ಕೀ ಸಿಎಂ…ಆಗಬಹುದಾ…??

ಬೆಳಗಾವಿ-ಬೆಳಗಾವಿ ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇವಲ ಒಂದೇ ಚರ್ಚೆ ನಡೆಯುತ್ತಿದೆ ಅದೇನಂದ್ರೆ ಸಿದ್ರಾಮಯ್ಯ ಬದಲಾದ್ರೆ ಸತೀಶ್ ಸಾಹುಕಾರ್ ಸಿಎಂ ಆಗ್ತಾರೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.