Home / Breaking News / ಫಡ್ನವೀಸ್ ಜೊತೆ ನಂಟು…ಗೋವಾದಲ್ಲಿ ಗೋಕಾಕಿನ ಕರದಂಟು…!!

ಫಡ್ನವೀಸ್ ಜೊತೆ ನಂಟು…ಗೋವಾದಲ್ಲಿ ಗೋಕಾಕಿನ ಕರದಂಟು…!!

ಗೋವಾದಲ್ಲಿ ಸಾಹುಕಾರ್ ಭರ್ಜರಿ ಪ್ರಚಾರ…..

ಬೆಳಗಾವಿ- ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿರುವ ಸಾಹುಕಾರ್ ರಮೇಶ್ ಜಾರಕಿಹೊಳಿ ಪಕ್ಕದ ಗೋವಾದಲ್ಲಿ ಬಿಜೆಪಿ ಪರವಾಗಿ ಭರ್ಜರಿ ಪ್ರಚಾರ ನಡೆಸಿದ್ದಾರೆ.

ಬಿಜೆಪಿ ಮುಖಂಡ ಕಿರಣ ಜಾಧವ,ಅಶೋಕಣ್ಣಾ ಅಸೂದೆ ಅವರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಜೊತೆಗಿದ್ದು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚಿಸುತ್ತಿದ್ದಾರೆ.

ಗೋವಾ ರಾಜ್ಯದ ಚುನಾವಣೆಯ ಬಿಜೆಪಿ ಉಸ್ತುವಾರಿ ದೇವೇಂದ್ರ ಫಡ್ನವೀಸ್ ಅವರ ಜೊತೆ ರಮೇಶ್ ಜಾರಕಿಹೊಳಿ ಅವರು ಉತ್ತಮ ಸಂಬಂದ ಹೊಂದಿರುವ ಹಿನ್ನಲೆಯಲ್ಲಿ, ಸಾಹುಕಾರ್
ಗೋವಾಗೆ ತೆರಳಿ ಫಡ್ನವೀಸ್ ಜೊತೆ ಬಿಜೆಪಿ ಗೆಲುವಿಗಾಗಿ ಬಿಡುವಿಲ್ಲದೇ ಪ್ರಚಾರ ಮಾಡುತ್ತಿದ್ದಾರೆ.

ಗೋವಾ ರಾಜ್ಯದ ಪೋರ್ವಿರಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರೋಹನ್ ಅಶೋಕ ಖುಂಟೆ ಅವರ ಪರವಾಗಿ ರಮೇಶ್ ಜಾರಕಿಹೊಳಿ ಮತ್ತು ಅವರ ಜೊತೆ ಗೋವಾಗೆ ಹೋಗಿರುವ ಬಿಜೆಪಿ ಮುಖಂಡರ ತಂಡ ಇಂದು ಮನೆಮನೆಗೆ ತೆರಳಿ ಮತಯಾಚಿಸುವ ಮೂಲಕ ಎಲ್ಲರ ಗಮನ ಸೆಳೆದರು.

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *