Home / Breaking News / ಕೋಟಿ,ಕೋಟಿ ಲೂಟಿ ಮಾಡಿದ ಫೈನಾನ್ಸ್ ಕಂಟ್ರೋಲರ್ ಅರೆಸ್ಟ್….!!!

ಕೋಟಿ,ಕೋಟಿ ಲೂಟಿ ಮಾಡಿದ ಫೈನಾನ್ಸ್ ಕಂಟ್ರೋಲರ್ ಅರೆಸ್ಟ್….!!!

ಬೆಳಗಾವಿ – ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಂಪನಿಯ ಹಣವನ್ನು ಆರ್ ಟಿ ಜಿ ಎಸ್ ಮೂಲಕ ತನ್ನ ಖಾತೆಗೆ,ತನ್ನ ಹೆಂಡತಿಯ ಖಾತೆಗೆ,ನೆಂಟರ ಖಾತೆಗೆ ವರ್ಗಾಯಿಸಿಕೊಂಡು ಶಾರ್ಜಾಗೆ ಹಾರಲು ಹೊರಟಿದ್ದ ವಂಚಕನನ್ನು ಬೆಳಗಾವಿಯ ಸೈಬರ್ ಪೋಲೀಸರು ಅರೆಸ್ಟ ಮಾಡಿದ್ದಾರೆ.

ದೇಸೂರಿನ ಎಂ.ಜಿ ಅಟೋಮೋಟಿವ್ ಬಸ್ ಆ್ಯಂಡ ಕೋಚ್ ಪ್ರಾ ಲಿ ಕಂಪನಿಯ ಫೈನಾನ್ಸ್ ಕಂಟ್ರೋಲರ್ ಮತ್ತು ಅಸಿಸ್ಟಂಟ್ ಮ್ಯಾನೇಜರ್ ಮುಂಬಯಿ ಮೂಲದ ಭವ್ಯ ಹರೇನ್ ದೇಸಾಯಿ ಎಂಬಾತ ಆರ್ ಟಿ ಜಿಎಸ್ ಮೂಲಕ ಕಂಪನಿಯ ಖಾತೆಯಿಂದ 4 ಕೋಟಿ, 41 ಲಕ್ಷಕ್ಕೂ ಅಧಿಕ ಹಣವನ್ನು ತನ್ನ ಖಾತೆಗೆ ತನ್ನ ಹೆಂಡತಿಯ ಖಾತೆಗೆ,ಹಾಗೂ ನೆಂಟರ ಖಾತೆಗಳಿಗೆ ವರ್ಗಾಯಿಸಿ ಶಾರ್ಜಾಗೆ ಹಾರಲು ಹೊರಟಿರುವಾಗ,ಬೆಳಗಾವಿ ಸೈಬರ್ ಕ್ರೈಂ ಠಾಣೆಯ ಪೋಲೀಸ್ ಅಧಿಕಾರಿಗಳ ಮಾಹಿತಿಯ ಮೇರೆಗೆ ಮುಂಬಯಿ ಇಂಟರ್ ನ್ಯಾಶನಲ್ ಏರ್ ಪೋರ್ಟಿನ ಅಧಿಕಾರಿಗಳು ಕೋಟಿ,ಕೋಟಿ ಲೂಟಿ ಮಾಡಿದ ವಂಚಕನನ್ನು ವಶಕ್ಕೆ ಪಡೆದು ಬೆಳಗಾವಿ ಸೈಬರ್ ಪೋಲೀಸರಿಗೆ ಒಪ್ಪಿಸಿದ್ದಾರೆ.

ಎಂ.ಜಿ‌.ಬಸ್ ಆ್ಯಂಡ್ ಕೋಚ್ ಕಂಪನಿಯಲ್ಲಿ ಮೋಸ ಆಗಿರುವದು ಗಮನಕ್ಕೆ ಬಂದ ಕೂಡಲೇ ಕಂಪನಿಯ ಹಿರಿಯ ಅಧಿಕಾರಿಗಳು ಬೆಳಗಾವಿ ಸೈಬರ್ ಕ್ರೈಂ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಆರಂಭಿಸಿದ ಇನೆಸ್ಪೆಕ್ಟರ್ ಬಿ.ಆರ್ ಗಡ್ಡೇಕರ್ ಆರೋಪಿಯನ್ನು ಬಂಧಿಸಲು ಜಾಲ ಬೀಸಿದ್ದರು ಈ ಕುರಿತು LOC ಹೊರಡಿಸಿದ ಹಿನ್ನಲೆಯಲ್ಲಿ ಆರೋಪಿ ಮುಂಬಯಿ ಏರ್ ಪೋರ್ಟಿನಲ್ಲಿ ಸಿಕ್ಕಿಬಿದ್ದಿದ್ದಾನೆ.

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *