Home / Breaking News / ನುಪೂರ್ ಶರ್ಮಾ ಪ್ರತಿಕೃತಿಗೆ ಗಲ್ಲು,ಮೂವರು ಪೋಲೀಸರ ವಶಕ್ಕೆ

ನುಪೂರ್ ಶರ್ಮಾ ಪ್ರತಿಕೃತಿಗೆ ಗಲ್ಲು,ಮೂವರು ಪೋಲೀಸರ ವಶಕ್ಕೆ

ಬೆಳಗಾವಿ: ಇಲ್ಲಿನ ಫೋರ್ಟ್ ರಸ್ತೆಯಲ್ಲಿ ನೂಪುರ್ ಶರ್ಮಾ ಪ್ರತಿಕೃತಿ ನಡುರಸ್ತೆಯಲ್ಲೇ ನೇತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬೆಳಗಾವಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಪ್ರಕರಣ ಸಂಬಂಧ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿತ್ತು. ಮಾರ್ಕೆಟ್ ಠಾಣೆ ಪಿಎಸ್ಐ ವಿಠ್ಠಲ್ ಹಾವಣ್ಣವರ್ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿತ್ತು. ನೂಪುರ್ ಶರ್ಮಾ ಪ್ರತಿಕೃತಿ ನೇತುಹಾಕಿದವರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದರು.

ಶುಕ್ರವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ನೂಪುರ ಶರ್ಮಾ ಪ್ರತಿಕೃತಿ ನೇತು ಹಾಕಲಾಗಿತ್ತು. ರಸ್ತೆಯ ಎರಡು ಬದಿಯ ಕಟ್ಟಡಗಳಿಗೆ ಹಗ್ಗ ಕಟ್ಟಿ ಪ್ರತಿಕೃತಿ ತೂಗು ಹಾಕಿದ್ದರು. ನೂಪುರ್ ಶರ್ಮಾ ಭಾವಚಿತ್ರ ಇರುವ ಪ್ರತಿಕೃತಿಗೆ ಸೀರೆ ಉಡಿಸಿ ತೂಗು ಹಾಕಲಾಗಿತ್ತು.

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *