Home / Breaking News / ಉತ್ಸವ ರದ್ದಾದ ಮೇಲೆ,ಕಿತ್ತೂರಿನಲ್ಲಿ ಏನೇನಾಯ್ತು ಗೊತ್ತಾ…??

ಉತ್ಸವ ರದ್ದಾದ ಮೇಲೆ,ಕಿತ್ತೂರಿನಲ್ಲಿ ಏನೇನಾಯ್ತು ಗೊತ್ತಾ…??

*ವಿಧಾನ ಸಭೆಯ ಉಪಾಧ್ಯಕ್ಷ ಆನಂದ ಮಾಮನಿ ಅವರ ನಿಧನದ ಹಿನ್ನಲೆಯಲ್ಲಿ ಚನ್ನಮ್ಮನ ಕಿತ್ತೂರಿನಲ್ಲಿ ಇಂದು ನಡೆಯಬೇಕಿದ್ದ ಕಿತ್ತೂರು ಉತ್ಸವವನ್ನು ನಾಳೆ ಸೋಮವಾರ(ಅ.24)ಕ್ಕೆ ಮುಂದೂಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

ಇದೇ ಮೊದಲಬಾರಿಗೆ ರಾಜ್ಯ‌ಮಟ್ಟದ ಉತ್ಸವಕ್ಕೆ ಇಂದು ಚಾಲನೆ ದೊರೆಯಬೇಕಿತ್ತು. ಉತ್ಸವಕ್ಕಾಗಿ ಕಿತ್ತೂರು ಹಾಗೂ ಚನ್ನಮ್ಮನ ಜನ್ಮ ಸ್ಥಳ ಬೆಳಗಾವಿ ಹೊರವಲಯದ ಕಾಕತಿಯಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಜಿಲ್ಲೆಯ ವಿವಿಧೆಡೆಯಿಂದ ರೂಪಗಳು ಕಿತ್ತೂರಿಗೆ ಆಗಮಿಸಿದ್ದವು. ಜಾನಪದ ಕಲಾ ತಂಡಗಳು ಪ್ರದರ್ಶನಕ್ಕೆ ಸಿದ್ಧಗೊಂಡಿದ್ದವು. ಸುಮಂಗಲೆಯರು ಕಳಸ ಹೊತ್ತು ಮೆರವಣಿಗೆ ಸಾಲು ಕಟ್ಟಿದ್ದರು. ಕಾಕತಿಯಲ್ಲಿ ಚನ್ನಮ್ಮನ ಭಾವ ಚಿತ್ರದ ಮೆರವಣಿಯ ನಾಲ್ಕು ಹೆಜ್ಜೆ ಸಾಗಿತ್ತು. ಉತ್ಸವ ನಾಳೆಗೆ ಮುಂದೂಡಿದ ಕಾರಣ ಎಲ್ಲವೂ ಸ್ಥಗೀತಗೊಂಡಿದೆ.

ಮುಂದೂಡಿದ ಮಾಹಿತಿ ಮುಂಜಾನೆ 9 ಗಂಟೆಗೆ ಪ್ರಕಟಗೊಳಿಸಿದರೂ ಆಗಲೇ ಕಿತ್ತೂರಿನಲ್ಲಿ ಜಮಾಯಿಸಿದ ಜನ ಸಮುದಾಯ 11 ಗಂಟೆಯಾದರೂ ಉತ್ಸವ ಇದೆ ಎಂದು ಭಾವಿಸಿ ಗುಂಪುಗೂಡಿ ಆಗಮಿಸುತ್ತಿದ್ದರು. ನಂತರ, ಆನಂದ ಮಾಮನಿಯವರ ಸಾವಿನ ಶೋಕ ಸಂದರ್ಭವನ್ನು ಜನರಿಗೆ ಅಧಿಕಾರಿಗಳು ಮನವರಿಕೆ ಮಾಡಲು ಪ್ರಯತ್ನಿಸಿದರು. ವಿಷಯ ತಿಳಿಯುತ್ತಿದ್ದಂತೆ ಜನರಲ್ಲಿ ಇದ್ದ ಉತ್ಸವ ಉತ್ಸಾಹ ಕಳೆಗುಂದಿದೆ
***

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *